ಕೊಡಗು ನಿರಾಶ್ರಿತರಿಗೆ ಪುನರ್‍ವಸತಿ ಕಾರ್ಯ ಆರಂಭ
ಕೊಡಗು

ಕೊಡಗು ನಿರಾಶ್ರಿತರಿಗೆ ಪುನರ್‍ವಸತಿ ಕಾರ್ಯ ಆರಂಭ

September 13, 2018

ಮಡಿಕೇರಿ:  ಭಾರೀ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮನೆ ಕಳೆದುಕೊಂಡು ನಿರಾಶ್ರಿತರಾದ ಕುಟುಂಬ ಗಳಿಗೆ ಜಿಲ್ಲಾಡಳಿತದ ವತಿಯಿಂದ ಪುನರ್ ವಸತಿ ವ್ಯವಸ್ಥೆ ಕಲ್ಪಿಸುವ ಕಾರ್ಯ ಆರಂಭಗೊಂಡಿದೆ. ಮಳೆ ಯಿಂದ ಹಾನಿಗೊಳಗಾದ ಗ್ರಾಮಗಳ ಸಮೀಪದಲ್ಲೇ ಕಂದಾಯ ಇಲಾಖೆಯ ವಶದಲ್ಲಿರುವ ಮತ್ತು ಸರಕಾರಿ ಜಾಗಗಳನ್ನು ಗುರುತಿಸಲಾಗಿದ್ದು ಒಟ್ಟು 100 ಎಕರೆ ಪ್ರದೇಶವನ್ನು ಪುನರ್ ವಸತಿಗಾಗಿ ಬಳಸಿಕೊಳ್ಳ ಲಾಗುತ್ತಿದೆ. ಈ ಸಳ್ಥಗಳೆಲ್ಲವು ಸಮತಟ್ಟು ಪ್ರದೇಶ ಗಳಾಗಿದ್ದು, ಇಲ್ಲಿ ನಿವೇಶನಗಳನ್ನು ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ದೊರೆತ್ತಿದೆ. ಕರ್ಣಗೇರಿ, ಕೆ.ನಿಡುಗಣೆ, ಕಾಟಕೇರಿ, ಮದೆನಾಡು, ಮಾದಾಪುರ, ಸಂಪಾಜೆ ಸೇರಿದಂತೆ ಹಲವು ಕಡೆಗಳಲ್ಲಿ ಲಭ್ಯವಿರುವ ಸರಕಾರಿ ಭೂಮಿಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ.

ಮಡಿಕೇರಿ ಸಮೀಪದ ಕೆ.ನಿಡುಗಣೆ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಆರ್‍ಟಿಓ ಕಚೇರಿ ಪಕ್ಕದಲ್ಲಿ ನಿವೇಶನ ಗಳನ್ನು ಸಮತಟ್ಟುಗೊಳಿಸಲಾಗುತ್ತಿದ್ದು, ಒಟ್ಟು 6.25 ಎಕರೆ ಪ್ರದೇಶವನ್ನು ಲೇಔಟ್ ಮಾದರಿಯಲ್ಲಿ ನಿರ್ಮಿ ಸಲಾಗುತ್ತಿದೆ. ರಾಜೀವ್ ಗಾಂಧಿ ವಸತಿ ನಿಗಮ ಸೇರಿದಂತೆ ಒಟ್ಟು 4 ಕಂಪೆನಿಗಳು ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ಆರ್.ಸಿ.ಸಿ. ಮನೆ ನಿರ್ಮಿಸಲು ಮುಂದೆ ಬಂದಿವೆÉ. ಈ ಕಂಪೆನಿಗಳು ಕೆ.ನಿಡುಗಣೆ ಪ್ರದೇಶದಲ್ಲಿ ತಲೆ ಎತ್ತಲಿರುವ ಪುನರ್ ವಸತಿ ಲೇಔಟ್‍ಗೆ ಸಂಬಂ ಧಿಸಿದಂತೆ ಮಾದರಿ ಮನೆಗಳನ್ನು ನಿರ್ಮಿಸಲು ಮುಂದಾ ಗಿವೆ. ಒಟ್ಟು 10 ಲಕ್ಷ ವೆಚ್ಚದಲ್ಲಿ ಈ ಮನೆಗಳು ನಿರ್ಮಾಣ ವಾಗಲಿದ್ದು, 1ಬಿ.ಹೆಚ್.ಕೆ., 2ಬಿಎಚ್‍ಕೆ, 3ಬಿಎಚ್‍ಕೆ ಮಾದರಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮಾದರಿ ಮನೆಗಳ ನಿರ್ಮಾಣವಾದ ಬಳಿಕ ಅವುಗಳನ್ನು ಅಂತಿಮ ಗೊಳಿಸುವ ಕೆಲಸ ನಡೆಯಬೇಕಿದ್ದು, ಬಳಿಕ ಲೇಔಟ್ ತಲೆ ಎತ್ತಲಿದೆ. ರಾಜ್ಯ ಸರಕಾರದ 7 ಲಕ್ಷ ಮತ್ತು ವಿವಿಧ ಖಾಸಗಿ ಸಂಸ್ಥೆಗಳು ಮನೆ ನಿರ್ಮಿಸಿಕೊಡಲು ಹಣಕಾಸಿನ ನೆರವು ನೀಡುವುದಾಗಿ ಘೋಷಿಸಿದ್ದು, ಈ ಅನುದಾನ ವನ್ನು ಬಳಸಿಕೊಂಡು ಒಟ್ಟು 10 ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ.

ಜಿಲ್ಲಾಡಳಿತ ಕೂಡ ವಿಶೇಷ ಕಾಳಜಿ ವಹಿಸಿ ನಿರಾ ಶ್ರಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮೀಕ್ಷೆ ನಡೆ ಸಿದ್ದು, ಈ ಪೈಕಿ ಬಹುತೇಕರು ಪುನರ್ ವಸತಿ ಯೋಜ ನೆಯ ಕಡೆ ಆಕರ್ಷಿತರಾಗಿದ್ದಾರೆ. ಮತ್ತೆ ಕೆಲವರು ತಾವು ನೆಲೆ ನಿಂತ ಪ್ರದೇಶದಲ್ಲೇ ಮನೆ ನಿರ್ಮಿಸಿಕೊಳ್ಳಲು ಆಸಕ್ತಿ ತೋರಿದ್ದು, ಅಂತಹ ವ್ಯಕ್ತಿಗಳಿಗೆ ಸರಕಾರದ ಧನ ಸಹಾಯ ವನ್ನು ನೀಡುವ ಕುರಿತು ಯೋಜನೆ ರೂಪಿಸಲಾಗುತ್ತಿದೆ.

ಶೀಘ್ರ ಪುನರ್‍ವಸತಿ: ಮಾದರಿ ಮನೆಗಳು ನಿರ್ಮಾಣ ವಾಗುತ್ತಿರುವ ಪ್ರದೇಶ ಮತ್ತು ಪುನರ್ ವಸತಿಗಾಗಿ ಗುರುತಿಸಲಾಗಿರುವ ಪ್ರದೇಶಗಳಿಗೆ ವಿಶೇಷ ಜಿಲ್ಲಾಧಿಕಾರಿ ಜಗದೀಶ್ ಮತ್ತು ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾದರಿ ಮನೆಗಳನ್ನು ನಿರ್ಮಿಸಲು ಮುಂದಾಗಿರುವ ಸಂಸ್ಥೆಯ ಇಂಜಿನಿಯರ್ ಗಳು ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದು ಮನೆಗಳ ಗುಣಮಟ್ಟ, ಅವುಗಳಿಗೆ ತಗಲುವ ವೆಚ್ಚ ಮತ್ತು ನಿಗಧಿ ಪಡಿಸಿದ ಪ್ರದೇಶಗಳಲ್ಲಿ ನಿರ್ಮಿಸ ಬಹುದಾದ ಮನೆ ಗಳ ಸಂಖ್ಯೆಯ ಕುರಿತು ಮಾಹಿತಿ ನೀಡಿದರು. ಮಾದರಿ ಮನೆಗಳ ಒಟ್ಟು 7 ವಿನ್ಯಾಸಗಳನ್ನು ಕೂಡ ಗುತ್ತಿಗೆದಾರ ಸಂಸ್ಥೆ ಪ್ರದರ್ಶಿಸಿತು.

ಸಿಎನ್‍ಡಿ ಲ್ಯಾಂಡ್ ಹಂಚಿಕೆ: ಜಿಲ್ಲೆಯಲ್ಲಿ 1.25 ಲಕ್ಷ ಹೆಕ್ಟೇರ್ ಸಿಎನ್‍ಡಿ ಜಾಗವನ್ನು ಅರಣ್ಯ ಇಲಾಖೆಗೆ ಈ ಹಿಂದೆ ನೀಡಲಾಗಿತ್ತು. ಜಾಗ ಹಸ್ತಾಂತರದ ಸಂದರ್ಭ ಒಡಂಬಡಿಕೆಯನ್ನು ಕೂಡ ಮಾಡಲಾಗಿತ್ತು. ಇದೀಗ ಮನೆ, ತೋಟ ಕಳೆದುಕೊಂಡವರಿಗೆ ಸಿಎನ್‍ಡಿ ಜಾಗವನ್ನು ಹಂಚಿಕೆ ಮಾಡುವ ಕುರಿತು ಚಿಂತಿಸಲಾ ಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು. ಸಿಎನ್‍ಡಿ ಜಾಗದಲ್ಲೇ ತೋಟ ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ಇದರಿಂದ ಸಹಕಾರಿಯಾಗಲಿದೆ. ಹಲವು ಮಂದಿ ನಿರಾಶ್ರಿತರು ಕೂಡ ಇದೇ ಅಭಿಪ್ರಾಯ ಹೊಂದಿ ದ್ದಾರೆ. ಮುಂದಿನ ದಿನಗಳಲ್ಲಿ ಜಾಗ ಹಂಚಿಕೆಯ ಬಗ್ಗೆಯೂ ಕಾರ್ಯೋನ್ಮುಖರಾಗುವುದಾಗಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.

Translate »