ಕೊಡಗು

ಗಾಂಜಾ ಮಾರಾಟಗಾರನ ಬಂಧನ
ಕೊಡಗು

ಗಾಂಜಾ ಮಾರಾಟಗಾರನ ಬಂಧನ

September 21, 2018

ಮಡಿಕೇರಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಬಂಧಿಸಿದ ಪ್ರಕರಣ ಸುಂಟಿಕೊಪ್ಪ ಪಟ್ಟಣದಲ್ಲಿ ನಡೆದಿದೆ. ಸುಂಟಿಕೊಪ್ಪದ ನಿವಾಸಿ ಪ್ರಕಾಶ್ (20) ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನಿಂದ 169 ಗ್ರಾಂ. ತೂಕದ ಗಾಂಜಾ ಮತ್ತು ರೂ. 6050 ನಗದು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ. ಪಣ್ಣೇಕರ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್‍ಪೆಕ್ಟರ್ ಎಂ.ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ನೇತೃತ್ವದಲ್ಲಿ ಸ್ಥಳೀಯ ನಾಡ ಕಛೇರಿ ಹಿಂದೆ ಪಾಳುಬಿದ್ದ ಕಟ್ಟಡವೊಂದರಲ್ಲಿ ಗಾಂಜಾ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ…

ಕೊಡಗು ಜಿಲ್ಲೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ
ಕೊಡಗು

ಕೊಡಗು ಜಿಲ್ಲೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ

September 18, 2018

ಒಮ್ಮತದಿಂದ ಧರ್ಮದ ಪಾಲನೆ ಅಗತ್ಯ ವಿರಾಜಪೇಟೆ: ಇಂದಿನ ಸಮಾಜದಲ್ಲಿ ಆಧ್ಯಾತ್ಮಿಕತೆ ಎಂಬುದು ಶಾಂತಿ ನೆಮ್ಮದಿಯನ್ನು ತರಬಲ್ಲಹ ಶಕ್ತಿಯನ್ನು ಹೊಂದಿದೆ. ವಿಶ್ವಕರ್ಮ ಸಮುದಾಯವು ತನ್ನ ಸಂಸ್ಕøತಿ ಆಚರಣೆ ಪದ್ಧತಿ ಪರಂಪರೆಯಿಂದ ವಿಶಿಷ್ಟತೆಯನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಹಿಂದೂಗಳು ಒಗ್ಗಟ್ಟನ್ನು ಸಾಧಿಸಿ ಸಮಾಜದ ಸುಧಾರಣೆಯೊಂದಿಗೆ ಪ್ರಗತಿಯತ್ತ ಸಾಗಬೇಕಾಗಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ವಿರಾಜಪೇಟೆ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪುರಭವನ ದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತ್ಯೋತ್ಸವದ ಕಾರ್ಯಕ್ರಮದ ಮೊದಲಿಗೆ ಶ್ರೀ…

ವಿಶ್ವಕರ್ಮ ಸಮುದಾಯದಿಂದ ಸಮಾಜಕ್ಕೆ ಅನನ್ಯ ಕೊಡುಗೆ
ಕೊಡಗು

ವಿಶ್ವಕರ್ಮ ಸಮುದಾಯದಿಂದ ಸಮಾಜಕ್ಕೆ ಅನನ್ಯ ಕೊಡುಗೆ

September 18, 2018

ಮಡಿಕೇರಿ: ವಿಶ್ವಕರ್ಮ ಸಮಾಜದ ಬಂಧುಗಳು ಮರದ ಕೆತ್ತನೆ, ಚಿನ್ನದ ಕೆಲಸ ಹೀಗೆ ನಾನಾ ವೃತ್ತಿಪರ ಕ್ಷೇತ್ರದಲ್ಲಿ ತೊಡ ಗಿಸಿಕೊಂಡು, ಸಮಾಜಕ್ಕೆ ತಮ್ಮದೇ ಆದ ಅನನ್ಯವಾದ ಕೊಡುಗೆ ನೀಡಿದ್ದಾರೆ ಎಂದು ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಶ್ಲಾಘಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಮೈತ್ರಿ ಸಭಾಂಗಣ ದಲ್ಲಿ ಸೋಮವಾರ ನಡೆದ ‘ವಿಶ್ವ ಕರ್ಮ ಜಯಂತ್ಯುತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವಕರ್ಮ ಎಂದರೆ ವಿಶ್ವದ ಸೃಷ್ಟಿಕರ್ತ, ಆದ್ದರಿಂದ ಇಡೀ…

ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ವಿಫಲ: ಆರೋಪ
ಕೊಡಗು

ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ವಿಫಲ: ಆರೋಪ

September 18, 2018

ಗೋಣಿಕೊಪ್ಪಲು:  ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಅಬಕಾರಿ ಇಲಾಖೆ ಉತ್ಸುಕತೆ ತೋರುತ್ತಿಲ್ಲ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಗಂಭೀರ ಆರೋಪ ಮಾಡಿದರು. ಪೊನ್ನಂಪೇಟೆ ಸಾಮಥ್ರ್ಯಸೌಧದಲ್ಲಿ ಆಯೋಜಿಸಿದ್ದ ವಿರಾಜಪೇಟೆ ತಾಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಬಕಾರಿ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮಾರಾಟದ ಬಗ್ಗೆ ಜನರು ದೂರು ನೀಡಿದರೂ ಕ್ರಮಕ್ಕೆ ಮುಂದಾಗುವುದಿಲ್ಲ. ಇಲಾಖೆಯ ಚಾಲಕರ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ…

ಬೊಳ್ಳೂರು ಶ್ರೀ ಬಸವೇಶ್ವರ ದೇವಸ್ಥಾನದ ಗಣಪತಿ ವಿಸರ್ಜನೆ
ಕೊಡಗು

ಬೊಳ್ಳೂರು ಶ್ರೀ ಬಸವೇಶ್ವರ ದೇವಸ್ಥಾನದ ಗಣಪತಿ ವಿಸರ್ಜನೆ

September 18, 2018

ಗುಡ್ಡೆಹೊಸೂರು: ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಅದ್ಧೂರಿಯಾಗಿ ನಡೆಯಿತು. ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಈ ಸಂಧರ್ಭ ಗಣಪತಿ ಸೇವಾ ಸಮೀತಿಯ ಸದಸ್ಯರು ಹಾಜರಿದ್ದರು.

ಇಂದು ವಿದ್ಯುತ್ ವ್ಯತ್ಯಯ
ಕೊಡಗು

ಇಂದು ವಿದ್ಯುತ್ ವ್ಯತ್ಯಯ

September 18, 2018

ಮಡಿಕೇರಿ: ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದ್ದು, ಸೆ.18 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪೊನ್ನಂಪೇಟೆ, ಗೋಣಿಕೊಪ್ಪಲು, ನಲ್ಲೂರು, ಹುದಿಕೇರಿ, ತಿತಿಮತಿ, ಹಾತೂರು, ಪಾಲಿಬೆಟ್ಟ, ಶ್ರೀಮಂಗಲ, ಬಾಳಲೆ, ಕಾನೂರು, ಬಿರುನಾಣಿ, ಕುಟ್ಟ, ವಿರಾಜಪೇಟೆ, ಬಿ.ಶೆಟ್ಟಗೇರಿ, ಬೇತ್ರೀ, ಕಡಂಗಮರೂರು, ಕಾಕೋಟು ಪರಂಬು, ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಮೂರ್ನಾಡು, ಮರುಗೋಡು, ನಾಪೋಕ್ಲು, ಕಕ್ಕಬೆ, ಅರೆಕಾಡು, ಅಯ್ಯಂಗೇರಿ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ…

ಮಳೆ ನಿಂತು ಹೋದ ಮೇಲೆ…. ಏರುತಿದೆ ಸುಡು ಬಿಸಿಲಿನ ತಾಪ
ಕೊಡಗು

ಮಳೆ ನಿಂತು ಹೋದ ಮೇಲೆ…. ಏರುತಿದೆ ಸುಡು ಬಿಸಿಲಿನ ತಾಪ

September 17, 2018

ಮಡಿಕೇರಿ:  ಅತೀವ ಮಳೆಯಿಂದ ಕಂಗೆಟ್ಟಿದ್ದ ಕೊಡಗಿನಲ್ಲಿ ಇದೀಗ ರಣ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ. ತಾಪಮಾನದಲ್ಲೂ ಏರಿಕೆಯಾಗಿದ್ದು, ಭವಿಷ್ಯದ ದಿನಗಳಲ್ಲಿ ಬರಗಾಲ ಆವರಿಸುವ ಲಕ್ಷಣಗಳು ಗೋಚರಿಸುತ್ತಿದೆ. ಮಾತ್ರವಲ್ಲದೆ, ಭಾರಿ ಮಳೆಯಿಂದ ಜಲ ಪ್ರಳಯವನ್ನೇ ಸೃಷ್ಟಿಸಿದ್ದ ನದಿ, ತೊರೆ ಗಳಲ್ಲಿ ಕೂಡ ಗಣನೀಯ ಪ್ರಮಾಣದಲ್ಲಿ ನೀರಿನ ಹರಿವು ಕ್ಷೀಣಿಸಿದೆ. ನದಿಗಳ ತಳದಲ್ಲಿ ಕಲ್ಲು ಬಂಡೆಗಳು ಕಂಡು ಬರುತ್ತಿದ್ದು, ಪ್ರಕೃತಿಯ ಮುನಿಸು ಇದೀಗ ಬರಗಾಲದ ರೂಪದಲ್ಲಿ ಜಿಲ್ಲೆಯನ್ನು ಆಪೋಶನ ಪಡೆಯಲು ತಯಾರಿ ನಡೆಸುತ್ತಿರುವಂತೆ ಭಾಸವಾಗುತ್ತಿದೆ. ಜಿಲ್ಲೆಯ ಪ್ರಮುಖ ನದಿಗಳಾದ ಕಾವೇರಿ,…

ವಿರಾಜಪೇಟೆಯಲ್ಲಿ ವಾಯ್ಸ್ ಆಫ್ ವಿರಾಜಪೇಟೆ-2018 ಉದ್ಘಾಟನೆ
ಕೊಡಗು

ವಿರಾಜಪೇಟೆಯಲ್ಲಿ ವಾಯ್ಸ್ ಆಫ್ ವಿರಾಜಪೇಟೆ-2018 ಉದ್ಘಾಟನೆ

September 17, 2018

ವಿರಾಜಪೇಟೆ:  ಮಕ್ಕಳ ಪ್ರತಿಭೆ ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶ್ರೀ ಬಸವೇಶ್ವರ ದೇವಾಲಯದ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ‘ವಾಯ್ಸ್ ಆಫ್ ವಿರಾಜಪೇಟೆ’ ಸಂಗೀತ ಸ್ಪರ್ಧೆಯನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಉತ್ತೇಜನ ನೀಡಿದಂತಾಗಿದೆ ಎಂದು ಪುತ್ತೂರು ಬೆಳ್ಳಾರೆಯ ಸಾಹಿತಿ ವೆಂಕಟ ರಮಣ ದೇವಾಲಯದ ಮುಖ್ಯಸ್ಥರು, ಕೃಷಿಕರು ಆದ ಮಣಿಕಾರ ಗೋಪಾಲಕೃಷ್ಣ ಶ್ಯಾನುಭೋಗ್ ಹೇಳಿದರು. ವಿರಾಜಪೇಟೆ ಪಟ್ಟಣದ ಶ್ರೀ ಬಸವೇ ಶ್ವರ ದೇವಾಲಯದ ಗೌರಿ-ಗಣೇಶ ಉತ್ಸವ ಸಮಿತಿಯಿಂದ ದಿ. ಎನ್.ವೆಂಕಟೇಶ್ ಕಾಮತ್ ಟ್ರಸ್ಟ್‍ನ ಸಹಯೋಗದಲ್ಲಿ…

ಕೂಡಿಗೆ: ಸ್ಮಶಾನ ಜಾಗಕ್ಕೆ ಒತ್ತಾಯಿಸಿ ಶವಯಾತ್ರೆ
ಕೊಡಗು

ಕೂಡಿಗೆ: ಸ್ಮಶಾನ ಜಾಗಕ್ಕೆ ಒತ್ತಾಯಿಸಿ ಶವಯಾತ್ರೆ

September 17, 2018

ಕುಶಾಲನಗರ: ಕುಶಾಲನಗರ ಹೋಬಳಿಯ ಕೂಡಿಗೆ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಸೂಕ್ತ ಜಾಗ ಕಲ್ಪಿಸಬೇಕು ಎಂದು ಒತ್ತಾಯಿಸಿ ಪಂಚಾಯಿತಿ ಕಚೇರಿ ಮುಂದೆ ಶವಯಾತ್ರೆ ನಡೆಸುವ ಮೂಲಕ ವಿನೂತನ ರೀತಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಹಳೆ ಕೂಡಿಗೆಯ ನಿವಾಸಿ ತಿಮ್ಮಪ್ಪ (60) ಎಂಬುವರು ಭಾನುವಾರ ನಿಧನರಾದರು. ಅಂತ್ಯಕ್ರಿಯೆ ನೆರವೇರಿಸಲು ಸೂಕ್ತ ಸ್ಥಳ ಇಲ್ಲದೆ ತೊಂದರೆ ಉಂಟಾಯಿತು. ಕಳೆದ ಅನೇಕ ವರ್ಷಗಳಿಂದಲೂ ಸ್ಮಶಾನಕ್ಕೆ ಜಾಗ ಒದಗಿಸಬೇಕು ಎಂದು ಗ್ರಾಮ ಪಂಚಾ ಯಿತಿಗೆ ಮನವಿ ಸಲ್ಲಿಸಿದರೂ ಇದುವ ರೆಗೂ…

ಅವಕಾಶ ಪಡೆದುಕೊಳ್ಳಲು ನಾಯಕತ್ವದ ಗುಣ ಅಗತ್ಯ
ಕೊಡಗು

ಅವಕಾಶ ಪಡೆದುಕೊಳ್ಳಲು ನಾಯಕತ್ವದ ಗುಣ ಅಗತ್ಯ

September 17, 2018

ಗೋಣಿಕೊಪ್ಪಲು: ನಾಯಕತ್ವದ ಗುಣವಿದ್ದರೆ ಅವಕಾಶಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಡೆಚಂಡ ದಿನೇಶ್ ಚಿಟ್ಟಿಯಪ್ಪ ಹೇಳಿದರು. ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕತಿಕ ಸಂಘವನ್ನು ಉದ್ಘಾಟಿಸಿದ ಅವರು, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಬಗೆಯ ಪ್ರತಿಭೆಗಳು ಅಡಗಿರುತ್ತವೆ. ಇವುಗಳನ್ನು ಹೊರತರುವುದಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿ ಯಾಗುತ್ತವೆ. ವಿದ್ಯಾರ್ಥಿಗಳು ಹಿಂಜರಿಕೆಯನ್ನು ಬಿಟ್ಟು ಮುಕ್ತವಾಗಿ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳ ಬೇಕು. ಈ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಪರಿ ಪೂರ್ಣತೆ ಗಳಿಸಲು ಮುಂದಾಗಬೇಕು ಎಂದರು….

1 125 126 127 128 129 187
Translate »