ಕೊಡಗು

ನೆರೆಯಿಂದ ಧರೆಗುರುಳಿದ ಮರಗಳ ಮಾಲೀಕತ್ವದ ಬಗ್ಗೆ ಜಟಾಪಟಿ
ಕೊಡಗು

ನೆರೆಯಿಂದ ಧರೆಗುರುಳಿದ ಮರಗಳ ಮಾಲೀಕತ್ವದ ಬಗ್ಗೆ ಜಟಾಪಟಿ

September 25, 2018

ಮಡಿಕೇರಿ:  ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಹಲವು ಗ್ರಾಮಗಳಲ್ಲಿ ಸಹಸ್ರ ಸಂಖ್ಯೆಯ ಮರಗಳು ಉರಳಿ ಬಿದ್ದಿದ್ದು, ಅವುಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯ ದರ್ಶಿ ಮತ್ತು ಜಿಲ್ಲಾಧಿಕಾರಿಗಳು ಮರಗÀಳ ತೆರವಿಗೆ ಅರಣ್ಯ ಇಲಾಖೆಗೆ ಸೂಚಿಸಿದ್ದು, ಮರ ತೆರವು ಕಾರ್ಯಾ ಚರಣೆ ಅರಣ್ಯ ಇಲಾಖೆಯ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಖಾಸಗಿ ಜಮೀನು, ನದಿ, ತೊರೆಗಳು ಮತ್ತು ಭತ್ತದ ಗದ್ದೆಗಳಲ್ಲಿ ಬುಡಮೇಲಾಗಿ ಉರುಳಿ ಬಿದ್ದಿರುವ ಮರಗಳನ್ನು ತೆಗೆಯಲು ಜಮೀನುಗಳ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮರಗಳ ನಾಟ,…

ಕೊಡಗಿನ ಪ್ರಕೃತಿ ವಿಕೋಪದಿಂದ ವಲಸೆ ಕಾರ್ಮಿಕರು, ಬುಡಕಟ್ಟು ಜನರ ಬದುಕು ಅಯೋಮಯ
ಕೊಡಗು

ಕೊಡಗಿನ ಪ್ರಕೃತಿ ವಿಕೋಪದಿಂದ ವಲಸೆ ಕಾರ್ಮಿಕರು, ಬುಡಕಟ್ಟು ಜನರ ಬದುಕು ಅಯೋಮಯ

September 24, 2018

ಮಡಿಕೇರಿ/ಕುಶಾಲನಗರ: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ಹಾನಿಯಿಂದ ಬೀದಿಗೆ ಬಿದ್ದ ಸಾವಿರಾರು ವಲಸೆ ಕಾರ್ಮಿಕರು ಹಾಗೂ ಮೂಲ ನಿವಾಸಿಗಳಿಗೆ ಈಗ ಜೀವನ ನಡೆಸುವುದೇ ದುಸ್ತರವಾಗಿದೆ. ಒಂದೆಡೆ ಭೂಕುಸಿತ ಹಾಗೂ ಪ್ರವಾಹದಿಂದ ಎಸ್ಟೇಟ್ ಮಾಲೀಕರು ಕಂಗಾಲಾಗಿದ್ದರೆ ಮತ್ತೊಂದೆಡೆ ದೂರದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಿಂದ ವಲಸೆ ಬಂದ ಕಾರ್ಮಿಕರು ನಿತ್ಯದ ಕೂಳಿಗೂ ಪರಿತಪಿಸುವಂತಾಗಿದೆ. ಜಮೀನು ಕಳೆದುಕೊಂಡ ಮಾಲೀಕರು ತಮ್ಮ ಜಮೀನಿನ ಅಸ್ತಿತ್ವವನ್ನು ಹುಡುಕುತ್ತಿದ್ದರೆ ಮತ್ತೊಂದೆಡೆ ಇಲ್ಲಿನ ಬುಡಕಟ್ಟು ಜನ, ಹಾಗೂ ವಲಸೆ ಕಾರ್ಮಿಕರು ಮುಂದೆ ಏನು ಎಂದು ದಿಕ್ಕು…

ವಿರಾಜಪೇಟೆಯಲ್ಲಿ ಗಣಪತಿ ವಿಸರ್ಜನೋತ್ಸವ ಸಂಭ್ರಮ
ಕೊಡಗು

ವಿರಾಜಪೇಟೆಯಲ್ಲಿ ಗಣಪತಿ ವಿಸರ್ಜನೋತ್ಸವ ಸಂಭ್ರಮ

September 24, 2018

ವಿರಾಜಪೇಟೆ:  ಇಲ್ಲಿನ ಇತಿ ಹಾಸ ಪ್ರಸಿದ್ಧ ಗೌರಿ-ಗಣೇಶ ವಿಸರ್ಜ ನೋತ್ಸವವು ಸೆ.21 ವಿದ್ಯುತ್ ಅಲಂಕೃತ ಮಂಟಪಗಳ ಶೋಭಾಯಾತ್ರೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಮೆರ ವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾ ಣದ ಬಳಿಯಿರುವ ಪವಿತ್ರವಾದ ಗೌರಿ ಕೆರೆಯಲ್ಲಿ ವಿಸರ್ಜನೆ ನಡೆಯಿತು. ಗೌರಿ-ಗಣೇಶ ವಿಸರ್ಜನೋತ್ಸವಕ್ಕಾಗಿ 21 ಉತ್ಸವ ಸಮಿತಿಗಳು ವಿರಾಜಪೇಟೆಯ ವಿವಿಧ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇ ಶನ ಮೆರವಣಿಗೆ ಸಾಗಿತು. ಯಾವುದೇ ಅದ್ದೂರಿಯ ಕಾರ್ಯಕ್ರಮಗಳಿರಲಿಲ್ಲ. ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಅನೇಕರು ಮನೆ ಆಸ್ತಿ ಕಳೆದುಕೊಂಡು ಸಂತ್ರಸ್ತರಾಗಿರುವುದರಿಂದ…

ಮಾದಾಪುರ-ಮಡಿಕೇರಿ ರಸ್ತೆ ಕಾಮಗಾರಿ ಪ್ರಗತಿ
ಕೊಡಗು

ಮಾದಾಪುರ-ಮಡಿಕೇರಿ ರಸ್ತೆ ಕಾಮಗಾರಿ ಪ್ರಗತಿ

September 24, 2018

ಸೋಮವಾರಪೇಟೆ: ಮಾದಾಪುರ-ಮಡಿಕೇರಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಅನುವು ಮಾಡಿಕೊಟ್ಟಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಹಟ್ಟಿಹೊಳೆಯಿಂದ ಮುಂದೆ ಕಾಂಡನಕೊಲ್ಲಿ ತಿರುವಿನಲ್ಲಿ ಬರೆ ಕುಸಿತಕ್ಕೆ ಒಳಗಾದ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿತ್ತು. ಇಲ್ಲಿ ರಸ್ತೆಯ ಪುನರ್ ನಿರ್ಮಾಣ ಕಾರ್ಯ ಸಾಗುತ್ತಿದ್ದು, ಕುಸಿದಿರುವ ರಸ್ತೆಗೆ ತಡೆಗೋಡೆಯ ಕಾಮಗಾರಿ ನಡೆಯುತ್ತಿದೆ. ಶಾಸಕ ಅಪ್ಪಚ್ಚು ರಂಜನ್ ಕಾಮಗಾರಿ ನಡೆಯುತ್ತಿರುವ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುತ್ತಾ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಪ್ರವಾಹ ಹಾಗೂ ಬರೆ ಕುಸಿತದಿಂದ ಹಾನಿಗೊಳಗಾದ ರಸ್ತೆಗಳನ್ನು…

ಸೋಮವಾರಪೇಟೆಯಲ್ಲಿ ಗಣಪತಿ ವಿಸರ್ಜನೆ
ಕೊಡಗು

ಸೋಮವಾರಪೇಟೆಯಲ್ಲಿ ಗಣಪತಿ ವಿಸರ್ಜನೆ

September 24, 2018

ಸೋಮವಾರಪೇಟೆ:  ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಬ್ರಾಹ್ಮಣರ ಸಮಾಜದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳನ್ನು ಸ್ಥಳೀಯ ಆನೆಕೆರೆಯಲ್ಲಿ ವಿಸರ್ಜಿಸಲಾಯಿತು. ಬೆಳಗ್ಗಿನಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆದವು. ನಂತರ ಸಂಜೆ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಮೂರ್ತಿಗಳನ್ನು ಇಟ್ಟು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾದ್ಯಗೋಷ್ಟಿಗ ಳೊಂದಿಗೆ ಮೆರವಣಿಗೆಯ ನಂತರ ಅನೆಕೆರೆಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ವಿಜೇತ್, ಮಾತಾ ಬಳಗದ ಅಧ್ಯಕ್ಷೆ ಪಂಕಜಾ ಶ್ಯಾಮ್‍ಸುಂದರ್, ದೇವಿ ಬಳಗದ ಅಧ್ಯಕ್ಷೆ ವಸಂತಾ ರಮೇಶ್, ಎನ್.ಎಸ್….

ಚೆಸ್; ರಾಜ್ಯಮಟ್ಟಕ್ಕೆ ಧ್ಯಾನ್ ಮೇದಪ್ಪ ಆಯ್ಕೆ
ಕೊಡಗು

ಚೆಸ್; ರಾಜ್ಯಮಟ್ಟಕ್ಕೆ ಧ್ಯಾನ್ ಮೇದಪ್ಪ ಆಯ್ಕೆ

September 24, 2018

ಗೋಣಿಕೊಪ್ಪಲು: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕೂರ್ಗ್ ಪಬ್ಲಿಕ್ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾ ಗಿದ್ದ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಕೂರ್ಗ್ ಇನ್ನಿಟ್ಯೂಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಭಾಗದ ಧ್ಯಾನ್ ಮೇದಪ್ಪ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಒಟ್ಟು 4 ಪಂದ್ಯಗಳಲ್ಲಿ 3 ಪಂದ್ಯದಲ್ಲಿ ಜಯಗಳಿಸುವ ಮೂಲಕ ರಾಯಚೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಗೆ 4ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಧ್ಯಾನ್ ಮೇದಪ್ಪ ಪೊನ್ನಂಪೇಟೆ ಭಗವತಿನಗರದ ಬಲ್ಲಡಿಚಂಡ ಸೋಮಯ್ಯ ಮತ್ತು ಕಸ್ತೂರಿ ದಂಪತಿ ಪುತ್ರ.

ಕೊಡಗು ಸಂತ್ರಸ್ತ ವಿದ್ಯಾರ್ಥಿಗಳಿಗೆ ನೆರವು
ಕೊಡಗು

ಕೊಡಗು ಸಂತ್ರಸ್ತ ವಿದ್ಯಾರ್ಥಿಗಳಿಗೆ ನೆರವು

September 24, 2018

ಗೋಣಿಕೊಪ್ಪಲು:  ಹುಬ್ಬಳ್ಳಿಯಲ್ಲಿ ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾ ರ್ಥಿಗಳು ಕೊಡಗಿನ ಸಂತ್ರಸ್ತರಾಗಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಗ್ರಹಿಸಿದ್ದ ಅಗತ್ಯ ವಸ್ತು, ಹಣವನ್ನು (ನಿವೃತ್ತ) ಸುಬೇದಾರ್ ಮೇಜರ್ ಬೋಪಣ್ಣ ಅವರ ಮೂಲಕ ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಗೆ ಹಸ್ತಾಂತರಿಸಿದರು. ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ 130 ಸಂತ್ರಸ್ತ ವಿದ್ಯಾರ್ಥಿಗಳಿಗೆ ಬೇಕಾದ ಪೆನ್, ಪುಸ್ತಕಗಳು, ಕುರ್ಚಿಗಳು, ಶಾಲೆಯಲ್ಲಿ ಅಡುಗೆ ತಯಾರಿಕೆಗೆ ಬೇಕಾದ ಪಾತ್ರೆಗಳನ್ನು ವಿತರಿಸಲಾಯಿತು.

ಕೊಡಗಲ್ಲಿ ಕುಸಿದ ಪ್ರವಾಸೋದ್ಯಮ
ಕೊಡಗು

ಕೊಡಗಲ್ಲಿ ಕುಸಿದ ಪ್ರವಾಸೋದ್ಯಮ

September 23, 2018

ಮಡಿಕೇರಿ: ಕೇವಲ ಎರಡು ತಿಂಗಳ ಹಿಂದೆ ಕೊಡಗು ಜಿಲ್ಲೆ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿತ್ತು. ದಕ್ಷಿಣ ಭಾರತದ ನಂಬರ್ ಒನ್ ಪ್ರವಾಸಿ ತಾಣವಾಗಿ ಕೊಡಗು ಜಿಲ್ಲೆ ಪ್ರವಾಸಿ ಭೂಪಟದಲ್ಲಿ ಗುರುತಿಸಿಕೊಂಡಿತ್ತು.. ಹೀಗಾಗಿ 2018ರ ಮೊದಲ ಆರು ತಿಂಗಳಲ್ಲೇ ಜಿಲ್ಲೆಗೆ ಬರೋ ಬ್ಬರಿ 18 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ ಆಗಸ್ಟ್ ತಿಂಗಳಿಂದ ಜಿಲ್ಲೆಯ ಪ್ರವಾಸೋದ್ಯಮದ ಪರಿಸ್ಥಿತಿಯೇ ಬದಲಾ ಗಿದೆ. ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗಿನತ್ತ ಪ್ರವಾಸಿಗರು ಮುಖ ಮಾಡುವ ಧೈರ್ಯ ತೋರುತ್ತಿಲ್ಲ. ಪ್ರಮುಖ ಪ್ರವಾಸಿ ತಾಣಗಳಾದ ದುಬಾರೆ,…

ಸಂತ್ರಸ್ತರಿಗೆ ಮನೆ, ಬಡಾವಣೆ ನಿರ್ಮಾಣಕ್ಕೆ ಸಿದ್ಧತೆ: ಹೆಚ್ಚುವರಿ ಡಿಸಿ ಜಗದೀಶ್
ಕೊಡಗು

ಸಂತ್ರಸ್ತರಿಗೆ ಮನೆ, ಬಡಾವಣೆ ನಿರ್ಮಾಣಕ್ಕೆ ಸಿದ್ಧತೆ: ಹೆಚ್ಚುವರಿ ಡಿಸಿ ಜಗದೀಶ್

September 23, 2018

ಮಡಿಕೇರಿ: ಪ್ರಕೃತಿ ವಿಕೋಪ ದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಡಳಿತದಿಂದ ಅಗತ್ಯ ಕ್ರಮಕೈಗೊಳ್ಳುತ್ತಿದೆ. ಈಗಾಗಲೇ ನಾಲ್ಕು ಮಾದರಿಯ ಮನೆ ಗಳ ಪ್ರಾತ್ಯಕ್ಷಿಕೆ ಪ್ರದರ್ಶನಕ್ಕೆ ಇಡಲಾಗಿದ್ದು, ಸಂತ್ರಸ್ತರಿಗೆ ಒಪ್ಪಿಗೆ ಆಗುವ ಮನೆ ನಿರ್ಮಿ ಸಿಕೊಡಲು ಮುಂದಾಗಲಾಗಿದೆ. ಮನೆ ನಿರ್ಮಾಣ ಸಂಬಂಧ ಈಗಾಗಲೇ ಗುರು ತಿಸಲಾಗಿರುವ ಕೆ.ನಿಡುಗಣೆ, ಕರ್ಣಂಗೇರಿ, ಗಾಳಿಬೀಡು, ಮದೆ, ಬಿಳಿಗೇರಿ, ಸಂಪಾಜೆ, ಜಂಬೂರು ಗ್ರಾಮಗಳಲ್ಲಿ ಒಟ್ಟು 110 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ನಿವೇಶನ ಸಮತಟ್ಟು ಕಾರ್ಯವು ಪೂರ್ಣ ಗೊಂಡಿದೆ ಎಂದು ವಿಶೇಷ…

ರೂ.6 ಲಕ್ಷ ಮೌಲ್ಯದ ಬಿಲ್ವಾರ ಮರದ ನಾಟಾ, ವಾಹನ ವಶ
ಕೊಡಗು

ರೂ.6 ಲಕ್ಷ ಮೌಲ್ಯದ ಬಿಲ್ವಾರ ಮರದ ನಾಟಾ, ವಾಹನ ವಶ

September 23, 2018

ಕುಶಾಲನಗರ:  ಅಕ್ರಮವಾಗಿ ಬಿಲ್ವಾರ ಮರ ನಾಟಗಳನ್ನು ಸಾಗಾಟ ಮಾಡುತ್ತಿದ್ದಾಗ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿ ರೂ.6 ಲಕ್ಷ ಮೌಲ್ಯದ ಮರದ ನಾಟಗಳು ಹಾಗೂ ವಾಹನವನ್ನು ವಶಪಡಿಸಿಕೊಂಡು ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಬಸವನಹಳ್ಳಿ ಮಾರ್ಗದಲ್ಲಿ ಮಿನಿಗೂಡ್ಸ್ ವಾಹನದಲ್ಲಿ ಬಿಲ್ವಾರ ಮರದ ನಾಟಗಳನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದ ವೇಳೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಮಾಲು ಮತ್ತು ವಾಹನವನ್ನು ವಶಪಡಿಸಿಕೊಂಡು ಚಾಲಕ ಮಾದಾಪಟ್ಟಣದ ನಿವಾಸಿ ರವಿ ಬಂಧಿಸಿ…

1 123 124 125 126 127 187
Translate »