ಕೊಡಗು

ರೈತ ಸಂಘದಿಂದ ಸಂತ್ರಸ್ತರಿಗೆ 3ನೇ ಸುತ್ತು ನೆರವು
ಕೊಡಗು

ರೈತ ಸಂಘದಿಂದ ಸಂತ್ರಸ್ತರಿಗೆ 3ನೇ ಸುತ್ತು ನೆರವು

September 26, 2018

ಕೊಡಗಿನ ಋಣ ತೀರಿಸಲು ಸಾಧ್ಯವಿಲ್ಲ: ಕೆ.ಎಸ್.ನಂಜುಂಡೇಗೌಡ ಗೋಣಿಕೊಪ್ಪಲು:  ಜಿಲ್ಲೆಯಲ್ಲಿ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿ ರುವ ಸಂತ್ರಸ್ತರ ಪ್ರದೇಶಗಳಾದ ಮಾಂದಲ ಪಟ್ಟಿ, ಒಣಚಲು, ಎರಡನೇ ಮೊಣ್ಣಂಗೇರಿ, ಚಾಮುಂಡೇಶ್ವರಿನಗರದ ಪ್ರದೇಶದಲ್ಲಿ ಇರುವ ಆಯ್ದ ನೂರು ಸಂತ್ರಸ್ತರ ಕುಟುಂಬ ಗಳಿಗೆ ಶ್ರೀರಂಗಪಟ್ಟಣದ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್.ನಂಜುಂಡೇಗೌಡ ಮುಂದಾಳತ್ವದಲ್ಲಿ ಅಕ್ಕಿ ಹಾಗೂ ಆಹಾರ ಸಾಮಗ್ರಿಗಳನ್ನು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ವಿತರಿಸಲಾಯಿತು. ಶ್ರೀರಂಗಪಟ್ಟಣದ ರೈತ ಮುಖಂಡ ರಾದ ಕೃಷ್ಣೇಗೌಡ, ಫಿಲಿಫ್, ಉಮೇಶ್ ಕುಮಾರ್,…

ಆರ್ಜಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ: ಪಿಡಿಓ ವಿರುದ್ಧ ಅಧ್ಯಕ್ಷೆ, ಉಪಾಧ್ಯಕ್ಷರ ಆರೋಪ
ಕೊಡಗು

ಆರ್ಜಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ: ಪಿಡಿಓ ವಿರುದ್ಧ ಅಧ್ಯಕ್ಷೆ, ಉಪಾಧ್ಯಕ್ಷರ ಆರೋಪ

September 26, 2018

ವಿರಾಜಪೇಟೆ:  ಆರ್ಜಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕರ್ತವ್ಯವನ್ನು ಮರೆತು ರಾಜಕಿಯ ಮಡುತ್ತಿದ್ದಾರೆ ಎಂದು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ. ರಮೇಶ್ (ಗಿರಿ) ದೂರಿದರು. ವಿರಾಜಪೇಟೆ ಬಳಿಯ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎನ್.ಗಾಯಿತ್ರಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಸಮಾನ್ಯ ಸಭೆ ಯಲ್ಲಿ ಮಾತನಾಡಿದ ಬಿ.ಎಂ.ರಮೇಶ್, ನಾನೊಬ್ಬ ಗ್ರಾಮ ಪಂಚಾಯಿತಿ ಉಪಾ ಧ್ಯಕ್ಷನಾಗಿದ್ದು, ಯಾವುದೇ ಮಾಹಿತಿ ನೀಡದೆ, ಸಭೆಯಲ್ಲಿ ತೀರ್ಮಾನವಾಗದೆ ಸ.ನಂ.-64/10ರಲ್ಲಿ ನಿರ್ಮಿಸಿರುವ ಅನ್ವರುಲ್ ಹುದಾ ಸೆಂಟರ್ ಶಾಲಾ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಹಾಗೂ ಪೆರುಂ…

ಲಾರಿ ಡಿಕ್ಕಿ; ಸ್ಕೂಟರ್ ಸವಾರ ಸಾವು
ಕೊಡಗು

ಲಾರಿ ಡಿಕ್ಕಿ; ಸ್ಕೂಟರ್ ಸವಾರ ಸಾವು

September 26, 2018

ಗೋಣಿಕೊಪ್ಪಲು:  ರಸ್ತೆಯಲ್ಲಿನ ಗುಂಡಿ ತಪ್ಪಿಸುವಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿಯಾಗಿ ಸವಾರ ಸಾನಪ್ಪಿರುವ ಘಟನೆ ತಿತಿಮತಿಯಲ್ಲಿ ನಡೆದಿದೆ. ಬೈಲುಕುಪ್ಪೆಯ ಸುಬ್ರಮಣಿ (50) ಮೃತ ಸವಾರ. ಹಿಂಬದಿಯಲ್ಲಿ ಕುಳಿತಿದ್ದ ಅವರ ಪತ್ನಿ ಮಂಜುಳಾ (40) ಗಾಯಗೊಂಡಿದ್ದು, ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಗೋಣಿಕೊಪ್ಪದಿಂದ ಪಿರಿಯಾ ಪಟ್ಟಣದ ಕಡೆ ಸ್ಕೂಟರ್‍ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ರಸ್ತೆ ಗುಂಡಿ ತಪ್ಪಿಸುವ ಸಂದರ್ಭ ಸ್ಕೂಟರ್ ನಿಧಾನವಾಗಿದೆ. ಈ ಸಂದರ್ಭ ಹಿಂಬದಿಯಲ್ಲಿದ್ದ ಲಾರಿ ನಿಯಂತ್ರಣ ತಪ್ಪಿ ಸ್ಕೂಟರ್‍ಗೆ ಡಿಕ್ಕಿಯಾಗಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸುಬ್ರಮಣಿ ಸ್ಥಳದಲ್ಲಿಯೇ…

ಬ್ಲೂ ವೇಲ್ ಆಯ್ತು ಇದೀಗ ಬಂದಿದೆ ಮೊಮೊ ಚಾಲೆಂಜ್
ಕೊಡಗು

ಬ್ಲೂ ವೇಲ್ ಆಯ್ತು ಇದೀಗ ಬಂದಿದೆ ಮೊಮೊ ಚಾಲೆಂಜ್

September 26, 2018

ಈ ಭಯಾನಕ ಗೇಮ್‍ನಿಂದ ಮಕ್ಕಳನ್ನು ದೂರವಿಡುವಂತೆ ಎಸ್ಪಿ ಮನವಿ ಮಡಿಕೇರಿ: ಮೊಮೊ ಚಾಲೆಂಜ್ ಆನ್‍ಲೈನ್ ಗೇಮ್ ಎಂಬ ಭಯಂ ಕರವಾದ ಗೇಮ್ ಗೆ ಒಳಗಾಗಿ ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸಿ ರುವುದರ ಬಗ್ಗೆ ವರದಿಯಾಗಿದೆ. ಈ ಮೊಮೊ ಚಾಲೆಂಜ್ ಆನ್ ಲೈನ್ ಗೇಮ್ ಎಂಬ ಆಟವು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಖಾತೆಯನ್ನು ಹೊಂದಿದ್ದು ಪ್ರಾರಂಭದಲ್ಲಿ ಫೇಸ್‍ಬುಕ್‍ನಲ್ಲಿ ಆರಂಭವಾಗಿ ವಾಟ್ಸ್‍ಅಪ್ ಮೂಲಕ ವ್ಯಾಪಕವಾಗಿ ಹರಡಿರುತ್ತದೆ. ಆನ್‍ಲೈನ್ ಆಟವು ಅನಾಮಧೇಯ ಕರೆಗಳನ್ನು ಮಾಡಿ ಮಕ್ಕಳಿಗೆ ಈ ಆಟವನ್ನು ಆಡಲು ಪ್ರೇರಣೆ ನೀಡಿ…

ಸಾಲಬಾಧೆ: ರೈತ ಆತ್ಮಹತ್ಯೆ
ಕೊಡಗು

ಸಾಲಬಾಧೆ: ರೈತ ಆತ್ಮಹತ್ಯೆ

September 26, 2018

ಸೋಮವಾರಪೇಟೆ:  ಸಾಲಬಾಧೆಯಿಂದ ರೈತನೋರ್ವ ಗುಂಡು ಹಾರಿಸಿ ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಲ್ತಾರೆಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಬಗ್ಗನ ಪಿ.ಕುಶಾಲಪ್ಪ(73) ಆತ್ಮಹತ್ಯೆ ಮಾಡಿ ಕೊಂಡವರು. ಸೋಮವಾರ ಬೆಳಿಗ್ಗೆ 6.40ರ ಸುಮಾರಿಗೆ ತಮ್ಮ ಮಲಗುವ ಕೋಣೆಯಲ್ಲಿ ಕೋವಿಯಿಂದ ಎದೆ ಭಾಗಕ್ಕೆ ಗುಂಡು ಹಾರಿಸಿ ಕೊಂಡು ಮೃತಪಟ್ಟಿದ್ದಾರೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘ, ಕೆಲ ಖಾಸಗಿ ಬ್ಯಾಂಕ್‍ಗಳಲ್ಲಿ ಸಾಲವಿದ್ದು, ಕೈಸಾಲ ಸೇರಿದಂತೆ ಪಟ್ಟು 24 ಲಕ್ಷ ರೂ. ಸಾಲವಿತ್ತು. ಪ್ರಕೃತಿ ವಿಕೋಪದಿಂದ ಕಾಫಿ…

ಪ್ರಕೃತಿ ವಿಕೋಪ ಸಂತ್ರಸ್ತ ವೃದ್ಧ ಸಾವು
ಕೊಡಗು

ಪ್ರಕೃತಿ ವಿಕೋಪ ಸಂತ್ರಸ್ತ ವೃದ್ಧ ಸಾವು

September 26, 2018

ಕುಶಾಲನಗರ: ಮಕ್ಕಂದೂರು ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡು ಕುಟುಂಬ ಸದಸ್ಯರ ಆಶ್ರಯದಲ್ಲಿ ನೆಲೆಸಿದ್ದ ವೃದ್ಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಕ್ಕಂದೂರು ಗ್ರಾಮದ ತಂತಿಪಾಲ ರಸ್ತೆಯ ನಿವಾಸಿ ರಾಮಣ್ಣ (75) ಮಂಗಳವಾರ ಬೆಳಗ್ಗೆ ತನ್ನ ಪುತ್ರಿಯ ಮನೆಯಲ್ಲಿ ಮೃತರಾಗಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಭೂಕುಸಿತದ ಹಿನ್ನಲೆಯಿಂದ ಅವರು ಸ್ವಲ್ಪಕಾಲ ಮಡಿಕೇರಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ನಂತರ ಕುಶಾಲನಗರದಲ್ಲಿರುವ ತನ್ನ ಪುತ್ರನ ನಿವಾಸದಲ್ಲಿ ಆಶ್ರಯ ಪಡೆದು ನಿನ್ನೆಯಷ್ಟೆ ಮಕ್ಕಂದೂರಿನ ತನ್ನ ಪುತ್ರಿಯ ಮನೆಗೆ ಬಂದು ತನ್ನ ಮನೆಯ…

ವಿದ್ಯಾರ್ಥಿನಿ ಆತ್ಮಹತ್ಯೆ
ಕೊಡಗು

ವಿದ್ಯಾರ್ಥಿನಿ ಆತ್ಮಹತ್ಯೆ

September 26, 2018

ಸೋಮವಾರಪೇಟೆ: ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಇಲ್ಲಿಗೆ ಸಮೀಪದ ತಣ್ಣೀರುಹಳ್ಳ ಗ್ರಾಮದ ಅಣ್ಣಪ್ಪ ಎಂಬುವವರ ಪುತ್ರಿ ಟಿ.ಎ. ಜೀವಿತ(17) ನರಿಮೊಗರು ಸರ್ಕಾರಿ ಹಿಂದುಳಿದ ವರ್ಗದವರ ಹಾಸ್ಟೆಲ್‍ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಸೋಮವಾರ ಎಂದಿನಂತೆ ಕಾಲೇಜಿಗೆ ತೆರಳಿದ್ದ ಜೀವಿತ, ಮಧ್ಯಾಹ್ನದ ವೇಳೆಗೆ ಕಾಲೇಜಿನಿಂದ ಹಾಸ್ಟೆಲ್‍ಗೆ ತೆರಳಿ ತನ್ನ ಕೋಣೆ ಯಲ್ಲಿ ವೇಲ್‍ನಿಂದ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಡುಗೆ ಯವರು ಕೋಣೆಯ ಕಿಟಿಕಿ ಬಾಗಿಲು ತೆರೆದು…

ಸಾಂಪ್ರದಾಯಕ ದಸರಾಗೆ ನಿರ್ಧಾರ
ಕೊಡಗು

ಸಾಂಪ್ರದಾಯಕ ದಸರಾಗೆ ನಿರ್ಧಾರ

September 25, 2018

ಗೋಣಿಕೊಪ್ಪಲು: ದೇವಿ ಚಾಮುಂಡೇಶ್ವರಿ ಪೂಜೆಯೊಂದಿಗೆ ಸಾಂಪ್ರದಾಯಿಕವಾಗಿ ಗೋಣಿಕೊಪ್ಪ ದಸರಾ ಆಚರಿಸುವ ನಿರ್ಧಾರವನ್ನು ಕಾವೇರಿ ದಸರಾ ಸಮಿತಿಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಗ್ರಾಮ ಪಂಚಾಯಿತಿ ಹಳೆಯ ಕಟ್ಟಡ ಸಭಾಂಗಣದಲ್ಲಿ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮಹಾಸಭೆಯಲ್ಲಿ ಕೊಡಗಿನಲ್ಲಿ ಉಂಟಾದ ಭೂಕುಸಿತದಿಂದಾಗಿ ದಸರಾ ಹೇಗೆ ನಡೆಸಬೇಕೆಂಬ ಬಗ್ಗೆ ಚರ್ಚೆ ನಡೆಸಲಾಯಿತು. ಸರ್ಕಾರ ನೀಡುವ ಅನುದಾನವನ್ನು ಬಳಸಿಕೊಂಡು ದಸರಾ ಆಚರಿಸುವಂತೆ ನಿರ್ಧರಿಸಲಾಯಿತು. ಚಾಮುಂಡೇಶ್ವರಿ ಪೂಜೆ ಸಾಂಪ್ರದಾಯಿಕವಾಗಿ ನಡೆಸಬೇಕಿದೆ. ಇದರಂತೆ ನಡೆಯಲಿದೆ. ಆದರೆ, ಜಿಲ್ಲೆಯಲ್ಲಿ ಸಾವು-ನೋವು ನಡೆದಿರುವುದ…

ಸಾಮಿಲ್ ಮೇಲೆ ಅರಣ್ಯ ಸಿಬ್ಬಂದಿಗಳ ದಾಳಿ : ರೂ.10 ಲಕ್ಷ ಮೌಲ್ಯದ ಬೀಟೆ ನಾಟ, ವಾಹನ ವಶ
ಕೊಡಗು

ಸಾಮಿಲ್ ಮೇಲೆ ಅರಣ್ಯ ಸಿಬ್ಬಂದಿಗಳ ದಾಳಿ : ರೂ.10 ಲಕ್ಷ ಮೌಲ್ಯದ ಬೀಟೆ ನಾಟ, ವಾಹನ ವಶ

September 25, 2018

ಕುಶಾಲನಗರ: ಸೋಮವಾರಪೇಟೆ ಮೀಸಲು ಅರಣ್ಯದಿಂದ ಬೀಟೆ ಮರ ಗಳನ್ನು ಅಕ್ರಮವಾಗಿ ಕಡಿದು ವಾಹನದಲ್ಲಿ ಸಾಗಿಸುವ ಮೂಲಕ ಹಾಸನ ಜಿಲ್ಲೆಯ ಗಡಿ ಗ್ರಾಮದ ಸಾಮಿಲ್‍ನಲ್ಲಿ ತುಂಡು ಮಾಡುತ್ತಿದ್ದ ವೇಳೆ ಎರಡು ಜಿಲ್ಲೆಗಳ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿ ರೂ.10 ಲಕ್ಷ ಮೌಲ್ಯದ ಬೀಟೆ ನಾಟ ಹಾಗೂ ವಾಹನ ವನ್ನು ವಶಪಡಿಸಿಕೊಂಡಿರುವ ಘಟನೆ ಭಾನು ವಾರ ನಡೆದಿದೆ. ಆರೋಪಿಗಳಾದ ಸೋಮ ವಾರಪೇಟೆ ಬಳಿಯ ಹಾನಗಲ್ಲು ಗ್ರಾಮದ ನಿವಾಸಿ ಗಳಾದ ನಂದ, ಅಭಿಜಿತ್, ನಿತ್ಯ ಅವರುಗಳು ಸಾಮಿಲ್ ಬಳಿಯಿಂದ ಪರಾರಿಯಾಗಿದ್ದಾರೆ. ಸೋಮವಾರಪೇಟೆ…

ಮಳೆ ಸಂತ್ರಸ್ತರಿಗೆ ಮಾದರಿ ಮನೆ ನಿರ್ಮಾಣ: ಸಂತ್ರಸ್ತರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ
ಕೊಡಗು

ಮಳೆ ಸಂತ್ರಸ್ತರಿಗೆ ಮಾದರಿ ಮನೆ ನಿರ್ಮಾಣ: ಸಂತ್ರಸ್ತರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ

September 25, 2018

ಮಡಿಕೇರಿ: ಮಹಾಮಳೆಯಿಂದ ಮನೆ ಕಳೆದುಕೊಂಡು ಸಂತ್ರಸ್ತರಾದ ಕುಟುಂಬಗಳಿಗೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಮನೆ ನಿರ್ಮಿಸಿಕೊಡಲು ಮುಂದಾಗಿದೆ. ಜಿಲ್ಲೆಯ ವಿವಿಧೆಡೆ ಈಗಾಗಲೇ 110 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ನಿವೇಶನಗಳಿಗಾಗಿ ಜಾಗ ಸಮತಟ್ಟುಗೊಳಿಸುವ ಕೆಲಸ ಮಾಡಲಾಗು ತ್ತಿದೆ. ಮಡಿಕೇರಿ ನಗರದ ಹೊರವಲ ಯದ ಆರ್‍ಟಿಓ ಕಛೇರಿ ಪಕ್ಕದಲ್ಲೇ 4.65 ಎಕರೆ ಪ್ರದೇಶದಲ್ಲಿ 3 ಮಾದರಿ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ರಾಜೀವ್ ಗಾಂಧಿ ವಸತಿ ನಿಗಮದ ಅಂಗ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಹೆಬಿಟೇಟ್ ಸೆಂಟರ್, ಸೊಸೈಟಿ ಫಾರ್ ಡೆವಲಪ್‍ಮೆಂಟ್ ಆಫ್…

1 122 123 124 125 126 187
Translate »