ಮಡಿಕೇರಿ: ಸೋಮವಾರಪೇಟೆ ತಹ ಶೀಲ್ದಾರ್ ಮಹೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಕಳೆದ ನಾಲ್ಕು ದಿನಗಳಿಂದ ಮಡಿ ಕೇರಿಯ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಎಲ್ಲಾ 15 ಮಂದಿಯನ್ನು ನ್ಯಾಯಾಲಯದ ಆದೇಶದಂತೆ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ. ಕುಶಾಲ ನಗರದ ವಾಲ್ಮಿಖಿ ಭವನದಲ್ಲಿದ್ದ ಕೆಲವು ಸಂತ್ರಸ್ಥರು ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ನೋಡಲ್ ಅಧಿಕಾರಿಯೊಂದಿಗೆ ಪ್ರಶ್ನಿಸುವ ಸಂದರ್ಭ ತಹಶೀಲ್ದಾರರ ಜೊತೆ ವಾಗ್ವಾದ ನಡೆಸಿದ್ದರು. ಈ ಸಂದರ್ಭ ತಹಶೀಲ್ದಾರ್ ಮಹೇಶ್, ಹಲ್ಲೆಯ ದೂರು ನೀಡಿದ್ದ ಹಿನ್ನಲೆಯಲ್ಲಿ 15 ಜನರ…
ಹಾಡಹಗಲೇ ಆಟೋ ಚಾಲಕನಿಂದ ಪ್ರಯಾಣಿಕ ಯುವತಿ ಅಪಹರಣ ಯತ್ನ
September 28, 2018ವಿರಾಜಪೇಟೆಯಲ್ಲಿ ಘಟನೆ, ಆಟೋ ವಶ ಚಾಲಕನಿಗಾಗಿ ಪೊಲೀಸರ ಹುಡುಕಾಟ ವಿರಾಜಪೇಟೆ: ತನ್ನ ಆಟೋ ದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ಹಾಡ ಹಗಲೇ ಅಪಹರಿಸಲು ಚಾಲಕ ಪ್ರಯತ್ನಿಸಿದ ಘಟನೆ ವಿರಾಜಪೇಟೆ ಪಟ್ಟಣ ದಲ್ಲಿ ತಡವಾಗಿ ವರದಿಯಾಗಿದೆ. ಈ ಸಂಬಂಧ ವಿರಾಜಪೇಟೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನ ಪತ್ತೆಗಾಗಿ ಹುಡುಕಾಟ ನಡೆ ಸಿದ್ದಾರೆ. ಅಪಹರಣದ ವೇಳೆ ಯುವತಿ ಆಟೋದಿಂದ ಹೊರಗೆ ಜಿಗಿದು ಪಾರಾ ಗಿದ್ದಾರೆ. ಆದರೆ ಈ ವೇಳೆ ಆಕೆಯ ತಲೆ ಮತ್ತು ಕೈ-ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ವಿವರ:…
ಕೊಡಗಿನ ದುರಂತಕ್ಕೆ ಮಳೆ, ಪ್ರಕೃತಿ ಮೇಲಿನ ಮಾನವ ಅಟ್ಟಹಾಸ ಕಾರಣ
September 27, 2018ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಅತಿಯಾದ ಮಳೆ ಮತ್ತು ಪ್ರಕೃತಿ ಮೇಲಿನ ಮಾನವನ ಅಟ್ಟಹಾಸ ಕಾರಣವೆಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ(ಜಿಎಸ್‍ಐ)ದ ಹಿರಿಯ ಭೂ ವಿಜ್ಞಾನಿಗಳ ತಂಡ ವರದಿ ನೀಡಿದೆ. ಕೊಡಗು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ ಜಿಎಸ್‍ಐನ ಮೂವರು ಭೂ ವಿಜ್ಞಾನಿಗಳು ತಯಾರಿಸಿದ 279 ಪುಟಗಳ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಹಿರಿಯ ನಿರ್ದೇಶಕ ಕೆ.ವಿ. ಮಾರುತಿ ಮತ್ತು ಭೂ ವಿಜ್ಞಾನಿಗಳಾದ ಅಂಕುರ್ ಕುಮಾರ್ ಶ್ರೀವಾಸ್ತವ್…
ಕಾರು ಚಾಲಕರ ಮತ್ತು ಮಾಲಿಕರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ
September 27, 2018ರೂ.1.13 ಕೋಟಿ ಅವ್ಯವಹಾರ ಲೆಕ್ಕ ಪರಿಶೋಧನೆಯಲ್ಲಿ ಪತ್ತೆ ಹಿಂದಿನ ಅಧ್ಯಕ್ಷರು, ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್, ಸಿವಿಲ್ ಮೊಕದ್ದಮೆ ದಾಖಲಿಸಲು ನಿರ್ಣಯ ಕುಶಾಲನಗರ: ಇಲ್ಲಿನ ಕಾರು ಚಾಲಕರು ಮತ್ತು ಮಾಲೀಕರ ವಿವಿ ದೋದ್ದೇಶ ಸಹಕಾರ ಸಂಘದಲ್ಲಿ ರೂ. 1.13 ಕೋಟಿ ಅವ್ಯವಹಾರ ನಡೆಸಿರುವ ಬಗ್ಗೆ ಲೆಕ್ಕಪರಿಶೋಧನೆ ವರದಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅವ್ಯವಹಾರ ನಡೆಸಿರುವ ಸಂಘದ ಹಿಂದಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ವಿರುದ್ಧ ಕ್ರಿಮಿ ನಲ್, ಸಿವಿಲ್ ಮೊಕದ್ದಮೆ ದಾಖಲಿಸುವ ಮೂಲಕ ಕಾನೂನು ಹೋರಾಟ ನಡೆಸಲು ಮಂಗಳವಾರ ನಡೆದ ವಾರ್ಷಿಕ…
ವಾಯ್ಸ್ ಆಫ್ ವಿರಾಜಪೇಟೆ ಸಂಗೀತ ಸ್ಪರ್ಧೆ
September 27, 2018ವಿರಾಜಪೇಟೆ: ಗೌರಿ-ಗಣೇಶ ಉತ್ಸವದ ಅಂಗವಾಗಿ ಶ್ರೀ ಬಸವೇಶ್ವರ ದೇವಾಲಯ ಸಮಿತಿಯಿಂದ ದಿ.ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗ ದಲ್ಲಿ ನಡೆದ ‘ವಾಯ್ಸ್ ಆಫ್ ವಿರಾಜಪೇಟೆ-2018’ರ ಸಂಗೀತ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಸಂವೇದಿತ ಪ್ರಥಮ, ಅಕಾಶ್ ಪ್ಯಾಟ್ರಿಕ್ ದ್ವಿತೀಯ, ಕೆ.ಯು.ರವಿ ಮತ್ತು ರವಿತಾ ಅವರುಗಳು ತೃತೀಯ ಬಹು ಮಾನ ಪಡೆದುಕೊಂಡರೆ, ವಿಶೇಷ ಪ್ರಶಸ್ತಿ ಯನ್ನು ರಜೀತ್ ರಾಜ್ ಪಡೆದರು. ಜೂನಿ ಯರ್ ವಿಭಾಗದಲ್ಲಿ ಆಯುಶ್ ಪ್ರಥಮ, ಅಪೂರ್ವ ದ್ವಿತಿಯ, ಶ್ರಾವ್ಯಾ ಮತ್ತು ಅನುಷ್ಯ ಅವರು ಮೂರನೆ ಸ್ಥಾನ ಪಡೆದುಕೊಂಡಿ…
ವಿ.ಪೇಟೆಗೆ 3ನೇ ಹಂತದ ಅನುದಾನ ಬಿಡುಗಡೆ
September 27, 2018ವಿರಾಜಪೇಟೆ: ವಿರಾಜಪೇಟೆ ತಾಲೂಕಿಗೆ 3ನೇ ಹಂತದ ಅನುದಾನವನ್ನು ಸರಕಾರ ಬಿಡುಗಡೆ ಗೊಳಿಸಿದ್ದು ಕಾಮಗಾರಿಗಳು ನಡೆಯುವಾಗ ನಿಗಾವಹಿಸಿ ಕಾಮಗಾರಿ ಕಳಪೆಯಾಗದಂತೆ ಸ್ಥಳೀಯರು ಎಚ್ಚರ ವಹಿಸಬೇಕು. ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ನಗರೋತ್ತನ ಯೋಜನೆಯಡಿ ಭಾಗ ಮೂರರಲ್ಲಿ ರೂ.2 ಕೋಟಿ ಅನುದಾನ ಬಂದಿದ್ದು, ಅದರಲ್ಲಿ ಪಪಂ ವ್ಯಾಪ್ತಿಯ ಪಂಜಾರು ಪೇಟೆ ಯಿಂದ ಗಣಪತಿ ಬೀದಿವರೆಗೆ ರೂ.11 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಇತರ ಕಾಮಗರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ಕುಡಿಯುವ ನೀರಿನ ಸೌಲಭ್ಯಕ್ಕಾಗಿ ರೂ.60 ಲಕ್ಷ,…
ಕೆನರಾ ಬ್ಯಾಂಕ್‍ನಿಂದ ಸಿಎಂ ಪರಿಹಾರ ನಿಧಿಗೆ 2 ಕೋಟಿ ಹಸ್ತಾಂತರ
September 27, 2018ಮಡಿಕೇರಿ: ಕೆನರಾ ಬ್ಯಾಂಕ್ ವತಿ ಯಿಂದ ಇತ್ತೀಚೆಗೆ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬ್ಯಾಂಕ್ ಸಿಬ್ಬಂದಿಗಳ ಒಂದು ದಿನದ ವೇತನ ರೂ. 2 ಕೋಟಿ ಚೆಕ್‍ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂ ತರಿಸಿದರು. ಈ ಸಂದ ರ್ಭದಲ್ಲಿ ಕೆನರಾ ಬ್ಯಾಂಕ್ ಚೇರ್ಮನ್ ಮನೋಹರನ್, ಕಾರ್ಯ ಪಾಲಕ ನಿರ್ದೇಶಕರಾದ ಪಿ.ವಿ.ಭಾರತಿ, ಮಂಗಳೂರು ವೃತ್ತದ ಮಹಾ ನಿರ್ದೇ ಶಕರಾದ ಲಕ್ಷ್ಮಿನಾರಾಯಣ ಹಾಗೂ ಕೊಡಗು ಕ್ಷೇತ್ರ ಕಚೇರಿಯ ಮುಖ್ಯಸ್ಥರಾದ ವಿ.ಜೆ.ಅರುಣ ಇದ್ದರು.
7 ಲಕ್ಷ ಮೌಲ್ಯದ ಬೀಟೆ ಮರ ವಶ
September 27, 2018ಮಡಿಕೇರಿ: ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸ್ ಅರಣ್ಯ ಸಂಚಾರಿ ದಳ ಮಾಲು ಸಹಿತ ಆರೋಪಿ ಯನ್ನು ವಶಕ್ಕೆ ಪಡೆದಿದೆ. ಕಾರಗುಂದ ನಿವಾಸಿ ಪಿ.ಡ್ಯಾನಿ ದೇವಯ್ಯ ಎಂಬಾತ ಬಂಧಿತ ಆರೋಪಿಯಾಗಿದ್ದು, ಪಿಕ್‍ಅಪ್ ವಾಹನ ಸಹಿತ 7 ಲಕ್ಷ ರೂ. ಮೌಲ್ಯದ ಬೀಟೆ ಮರವನ್ನು ವಶ ಪಡಿಸಿಕೊಳ್ಳಲಾಗಿದೆ. ಮರಗೋಡು ಸಮೀಪದ ಕಟ್ಟೆಮಾಡು ಮಾರ್ಗವಾಗಿ ಕೊಂಡಗೇರಿ ಕಡೆಗೆ ಪಿಕ್‍ಅಪ್ ವಾಹನದಲ್ಲಿ ಬೀಟೆ ಮರದ ತುಂಡು ಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಜಿಲ್ಲಾ ಪೊಲೀಸ್ ಅರಣ್ಯ…
ಕೊಡಗಿಗೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಎಂದು ಆರೋಪಿಸಿ ಪ್ರತಿಭಟನೆ
September 26, 2018ಮಡಿಕೇರಿ: ಪ್ರಕೃತಿ ವಿಕೋಪ ದಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಪರಿಹಾರ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಲತಾಯಿ ಧೋರಣೆ ತೋರುತ್ತಿವೆ ಎಂದು ಆರೋಪಿಸಿ ಸುವರ್ಣ ಕನ್ನಡನಾಡು ಯುವ ವೇದಿಕೆ ಮಡಿ ಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿ ಸಿದರು.ಜಿಲ್ಲೆಯ ಜನತೆ ಸಂಕಷ್ಟ ದಲ್ಲಿದ್ದು, ವಿವಿಧ ರೀತಿಯ ಸಾಲಗಳನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ…
ಪರ್ಯಾಯ ವಸತಿಗಾಗಿ ಶಿರಂಗಳ್ಳಿ ಗ್ರಾಮಸ್ಥರ ಒತ್ತಾಯ
September 26, 2018ಮಡಿಕೇರಿ: ಗರ್ವಾಲೆ ಗ್ರಾಪಂ ವ್ಯಾಪ್ತಿಯ ಶಿರಂಗಳ್ಳಿ ಗ್ರಾಮದಲ್ಲಿ ಸುಮಾರು 40 ರಿಂದ 60 ಮನೆಗಳು ಅಪಾಯ ದಲ್ಲಿದ್ದು, ವಾಸಕ್ಕೆ ಅಯೋಗ್ಯವಾಗಿವೆ. ಈ ಹಿನ್ನೆಲೆಯಲ್ಲಿ ತಮಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸ್ಥಳೀಯ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿರಂಗಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಉಡುವೆರ ಎಸ್. ಟಾಟ ಹಾಗೂ ಇತರರು, ಗರ್ವಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಶಿರಂಗಳ್ಳಿ ಗ್ರಾಮದಲ್ಲಿ ಸರಾಸರಿ 165 ಇಂಚಿನಷ್ಟು ಮಳೆಯಾಗಿರುವುದು ದಾಖಲೆ ಯಾಗಿದ್ದರೆ, ಈ ಬಾರಿ ಜುಲೈ ಮತ್ತು ಆಗಸ್ಟ್…










