ವಿ.ಪೇಟೆಗೆ 3ನೇ ಹಂತದ ಅನುದಾನ ಬಿಡುಗಡೆ
ಕೊಡಗು

ವಿ.ಪೇಟೆಗೆ 3ನೇ ಹಂತದ ಅನುದಾನ ಬಿಡುಗಡೆ

September 27, 2018

ವಿರಾಜಪೇಟೆ: ವಿರಾಜಪೇಟೆ ತಾಲೂಕಿಗೆ 3ನೇ ಹಂತದ ಅನುದಾನವನ್ನು ಸರಕಾರ ಬಿಡುಗಡೆ ಗೊಳಿಸಿದ್ದು ಕಾಮಗಾರಿಗಳು ನಡೆಯುವಾಗ ನಿಗಾವಹಿಸಿ ಕಾಮಗಾರಿ ಕಳಪೆಯಾಗದಂತೆ ಸ್ಥಳೀಯರು ಎಚ್ಚರ ವಹಿಸಬೇಕು. ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ನಗರೋತ್ತನ ಯೋಜನೆಯಡಿ ಭಾಗ ಮೂರರಲ್ಲಿ ರೂ.2 ಕೋಟಿ ಅನುದಾನ ಬಂದಿದ್ದು, ಅದರಲ್ಲಿ ಪಪಂ ವ್ಯಾಪ್ತಿಯ ಪಂಜಾರು ಪೇಟೆ ಯಿಂದ ಗಣಪತಿ ಬೀದಿವರೆಗೆ ರೂ.11 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಇತರ ಕಾಮಗರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ಕುಡಿಯುವ ನೀರಿನ ಸೌಲಭ್ಯಕ್ಕಾಗಿ ರೂ.60 ಲಕ್ಷ, ಪ.ಜಾತಿ ಅಭಿವೃದ್ಧಿಗೆ ರೂ. 29.16 ಲಕ್ಷ, ಪ.ಪಂಗಡಗಳಿಗೆ ರೂ. 11.82 ಲಕ್ಷ ಸೇರಿದಂತೆ ಒಟ್ಟು 1 ಕೋಟಿ 70 ಲಕ್ಷದಲ್ಲಿ ಸಾರ್ವಜನಿಕ ಆಸ್ಪತ್ರೆ ರಸ್ತೆ, ಬಂಗಾಳ ಬೀದಿ ರಸ್ತೆ, ನೆಹರು ನಗರ, ಗೌರಿಕೆರೆ ಮತ್ತು ಚಿಕ್ಕಪೇಟೆ ರಸ್ತೆ ಅಭಿವೃದ್ಧಿ ಕಾಮಗಾರಿಗಳು. ಬೆಟ್ಟ ಪ್ರದೇಶವಾದ ಮಲೆತಿರಿಕೆ ಬೆಟ್ಟ, ಅರಸುನಗರ ಮತ್ತು ಇತರೆಡೆಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು ಎಂದರು. ಭೂಮಿ ಪೂಜೆ ಸಂದರ್ಭ ಜಿಲ್ಲಾ ಯೋಜನಾ ನಿರ್ದೇಶಕ ಗೋಪಾಲ ಕೃಷ್ಣ, ಪಪಂ ಮುಖ್ಯಾಧಿಕಾರಿ ಎ.ಎಂ.ಶ್ರೀದರ್, ಅಭಿಯಂತರ ಎನ್.ಪಿ.ಹೇಮ್‍ಕುಮಾರ್, ಪಪಂ ಮಾಜಿ ಅಧ್ಯಕ್ಷ ಇ.ಸಿ.ಜೀವನ್, ಮಾಜಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಮಾಜಿ ಸದಸ್ಯರಾದ ಬಿ.ಡಿ.ಸುನಿತಾ, ಬಿ.ಎಂ.ಕುಮಾರ್ ಇತರರು ಉಪಸ್ಥಿತರಿದ್ದರು.

Translate »