ವಾಯ್ಸ್ ಆಫ್ ವಿರಾಜಪೇಟೆ ಸಂಗೀತ ಸ್ಪರ್ಧೆ
ಕೊಡಗು

ವಾಯ್ಸ್ ಆಫ್ ವಿರಾಜಪೇಟೆ ಸಂಗೀತ ಸ್ಪರ್ಧೆ

September 27, 2018

ವಿರಾಜಪೇಟೆ:  ಗೌರಿ-ಗಣೇಶ ಉತ್ಸವದ ಅಂಗವಾಗಿ ಶ್ರೀ ಬಸವೇಶ್ವರ ದೇವಾಲಯ ಸಮಿತಿಯಿಂದ ದಿ.ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗ ದಲ್ಲಿ ನಡೆದ ‘ವಾಯ್ಸ್ ಆಫ್ ವಿರಾಜಪೇಟೆ-2018’ರ  ಸಂಗೀತ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಸಂವೇದಿತ ಪ್ರಥಮ, ಅಕಾಶ್ ಪ್ಯಾಟ್ರಿಕ್ ದ್ವಿತೀಯ,  ಕೆ.ಯು.ರವಿ ಮತ್ತು ರವಿತಾ ಅವರುಗಳು ತೃತೀಯ ಬಹು ಮಾನ ಪಡೆದುಕೊಂಡರೆ, ವಿಶೇಷ ಪ್ರಶಸ್ತಿ ಯನ್ನು ರಜೀತ್ ರಾಜ್ ಪಡೆದರು.  ಜೂನಿ ಯರ್ ವಿಭಾಗದಲ್ಲಿ ಆಯುಶ್ ಪ್ರಥಮ, ಅಪೂರ್ವ ದ್ವಿತಿಯ, ಶ್ರಾವ್ಯಾ ಮತ್ತು ಅನುಷ್ಯ ಅವರು ಮೂರನೆ ಸ್ಥಾನ ಪಡೆದುಕೊಂಡಿ ದ್ದಾರೆ. ಮುಖ್ಯಮಂತ್ರಿಯನ್ನು ಕೊಡಗಿಗೆ ಬರಮಾಡಿಸಿದ 8ನೇ ತರಗತಿ ವಿದ್ಯಾರ್ಥಿ ಎಮ್ಮೆಮಾಡುವಿನ ಅಬ್ದುಲ್ ಫತಾ ಅವ ರನ್ನು ವೇದಿಕೆಯಲ್ಲಿ ಮೈಸೂರಿನ ಮಾಜಿ ಶಾಸಕ ವಾಸು ಅವರು ಸನ್ಮಾನಿಸಿ ರೂ.10 ಸಾವಿರ ನಗದು ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಅಬ್ದುಲ್ ಫÀತಾ  ತಮ್ಮ ಭಾಷಣದಲ್ಲಿ ಕೊಡಗಿನ ಸಮಸ್ಯೆಗಳ ಬಗ್ಗೆ ಮಾತನಾಡಿ ಸಭೆಯಲ್ಲಿದ್ದವರ ಗಮನ ಸೆಳೆದರು.

ಮೈಸೂರಿನ ಮಾಜಿ ಶಾಸಕ ವಾಸು ಅವರು ಮಾತನಾಡಿ, ಗ್ರಾಮೀಣ ಪ್ರದೇಶ ದಲ್ಲಿರುವ ಪ್ರತಿಭಾವಂತ ಯುವಕ-ಯುವ ತಿಯರಿಗೆ ಇಲ್ಲಿನ ಶ್ರೀ ಬಸವೇಶ್ವರ ದೇವಾ ಲಯ ಸಮಿತಿ ವಾಯ್ಸ್ ಆಫ್ ವಿರಾಜ ಪೇಟೆ ಇವರು ವೇದಿಕೆ ನೀಡಿ ಕಲಾವಿದ ರನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಶ್ಲಾಘನಿಯ ಎಂದರು. ವೇದಿಕೆಯಲ್ಲಿ ಉಪಸ್ಥಿತ ರಿದ್ದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಅವರ ಬೆಂಗಾವಲಿನ ಮುಖ್ಯ ಹೊಣೆ ಹೊತ್ತಿ ರುವ ಕೊಡಗಿನವರಾದ ದೆಹಲಿಯಲ್ಲಿರುವ ಬೆಳ್ಯಪ್ಪ ಅವರು ಸಭೆಯನ್ನುದ್ದೇಶಿಸಿ ಮಾತ ನಾಡಿದರು. ಇದಕ್ಕೂ ಮೊದಲು ಪುತ್ತೂರಿನ ಸಮಾಜಸೇವಕ ಮಣಿಕರ ಶಾನ್‍ಭೋಗ್ ಅವರು ಸಂಗೀತ ಸ್ಪರ್ಧೆಯನ್ನು ಉದ್ಘಾಟಿ ಸಿದ್ದರು. ವೇದಿಕೆಯಲ್ಲಿ ಎನ್.ವೆಂಕಟೇಶ್ ಕಾಮತ್ ಟ್ರಸ್ಟ್‍ನ ಮುಖ್ಯಸ್ಥ ಎನ್.ರವೀಂದ್ರ ನಾಥ್ ಕಾಮತ್,  ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎನ್.ಜಿ.ಕಾಮತ್,  ಸಮಿತಿಯ ಜೆ.ಎನ್.ಪುಷ್ಪರಾಜ್,  ಸಂಪತ್ ಕುಮಾರ್, ಚಂದ್ರ ಪ್ರಸಾದ್, ವಿರೇಂದ್ರ ಕಾಮತ್ ಮುಂತಾದವರು ಉಪಸ್ಥಿತರಿದ್ದರು.

 

 

 

 

Translate »