ಕಾರು ಚಾಲಕರ ಮತ್ತು ಮಾಲಿಕರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕೊಡಗು

ಕಾರು ಚಾಲಕರ ಮತ್ತು ಮಾಲಿಕರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ

September 27, 2018
  • ರೂ.1.13 ಕೋಟಿ ಅವ್ಯವಹಾರ ಲೆಕ್ಕ ಪರಿಶೋಧನೆಯಲ್ಲಿ ಪತ್ತೆ
  • ಹಿಂದಿನ ಅಧ್ಯಕ್ಷರು, ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್, ಸಿವಿಲ್ ಮೊಕದ್ದಮೆ ದಾಖಲಿಸಲು ನಿರ್ಣಯ

ಕುಶಾಲನಗರ: ಇಲ್ಲಿನ ಕಾರು ಚಾಲಕರು ಮತ್ತು ಮಾಲೀಕರ ವಿವಿ ದೋದ್ದೇಶ ಸಹಕಾರ ಸಂಘದಲ್ಲಿ ರೂ. 1.13 ಕೋಟಿ ಅವ್ಯವಹಾರ ನಡೆಸಿರುವ ಬಗ್ಗೆ ಲೆಕ್ಕಪರಿಶೋಧನೆ ವರದಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅವ್ಯವಹಾರ ನಡೆಸಿರುವ ಸಂಘದ ಹಿಂದಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ವಿರುದ್ಧ ಕ್ರಿಮಿ ನಲ್, ಸಿವಿಲ್ ಮೊಕದ್ದಮೆ ದಾಖಲಿಸುವ ಮೂಲಕ ಕಾನೂನು ಹೋರಾಟ ನಡೆಸಲು ಮಂಗಳವಾರ ನಡೆದ ವಾರ್ಷಿಕ ಮಹಾಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇಲ್ಲಿನ ಮಹಾಲಕ್ಷ್ಮಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ನೂತನ ಅಧ್ಯಕ್ಷ ಎಂ.ಎನ್. ಕರುಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯ ವಾಂಚಿರ ಮನು ನಂಜುಂಡ ಸಂಘದಲ್ಲಿ ನಡೆದಿ ರುವ ಕೋಟ್ಯಾಂತರ ರೂ.ಗಳ ಅವ್ಯವ ಹಾರದ ಬಗ್ಗೆ ಮಾಹಿತಿ ನೀಡಿ ಎಂದು ಒತ್ತಾಯಿಸಿದರು. ಸಂಘದ ಆಡಳಿತ ಮಂಡಳಿ ಹಿಂದಿನ ಅಧ್ಯಕ್ಷ ಎಚ್.ಎನ್. ರಾಮ ಚಂದ್ರ ಹಾಗೂ ಕಾರ್ಯದರ್ಶಿ ರೋಹಿತ್ ಅವರ ಅವಧಿಯಲ್ಲಿ ರೂ. 1.13 ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಲೆಕ್ಕಪರಿ ಶೋಧಕರ ವರದಿಯಲ್ಲಿ ಸಾಬೀತಾಗಿದೆ.

ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ವಸೂಲಿ ಮಾಡುವಂತೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಹಾಸಭೆ ಯಲ್ಲಿ ಸರ್ವ ಸದಸ್ಯರ ಸಲಹೆ ಹಾಗೂ ಅಭಿಪ್ರಾಯ ಪಡೆದು ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಘದ ನಿರ್ದೇಶಕ ಕೆ.ಎನ್.ಅಶೋಕ್ ತಿಳಿಸಿದರು.

ಸಭೆಯಲ್ಲಿದ್ದ ಸದಸ್ಯರು ಸಹಕಾರ ಸಂಘದ ಹಣವನ್ನು ದುರುಪಯೋಗ ಪಡಿ ಸಿಕೊಂಡಿರುವ ಮಾಜಿ ಅಧ್ಯಕ್ಷ ರಾಮಚಂದ್ರ ಹಾಗೂ ಕಾರ್ಯದರ್ಶಿ ರೋಹಿತ್ ಅವರ ಮೇಲೆ ಕ್ರಿಮಿನಲ್ ಮತ್ತು ಸಿವಿಲ್ ಮೊಕ ದ್ದಮೆ ದಾಖಲಿಸಿ ಎಂದು ಒತ್ತಾಯಿಸಿದರು. ಸರ್ವ ಸದಸ್ಯರ ಒಮ್ಮತದ ಮೇರೆ ಸಭೆ ಯಲ್ಲಿ ಕ್ರಿಮಿನಲ್, ಸಿವಿಲ್ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಹಾಜರಿದ್ದ ಹಿಂದಿನ ಅಧ್ಯಕ್ಷ ರಾಮಚಂದ್ರ ಮಾತನಾಡಿ, ನಾನೇನು ಹಣ ತಿಂದಿಲ್ಲ. ಹಣ ತಿಂದಿರುವ ಕಾರ್ಯ ದರ್ಶಿಯಿಂದ ವಸೂಲಿ ಮಾಡಿಕೊಂಡು ಬನ್ನಿ ಎಂದು ಹೇಳಿದರು. ಇದರಿಂದ ಆಕ್ರೋ ಶಗೊಂಡ ಆಡಳಿತ ಮಂಡಳಿ ಹಾಗೂ ಸದಸ್ಯರು ಸಾಮೂಹಿಕವಾಗಿ ರಾಮಚಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು. ಸಂಘಕ್ಕೆ ಪಿಗ್ಮಿ ಕಟ್ಟಿದ, ಠೇವಣಿ ಮತ್ತು ಚಿನ್ನಾಭರಣ ಅಡವಿಟ್ಟ ಅಮಾಯಕರ ಹಣ ವನ್ನು ತಿಂದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘವನ್ನು ಉಳಿಸಿ ಬೆಳೆಸುವ ಮಹ ದಾಸೆಯಿಂದ ಹೊಸ ಆಡಳಿತ ಮಂಡಳಿ ರಚಿಸಿಕೊಳ್ಳಲಾಗಿದೆ. ಸಾರ್ವಜನಿಕರ ಹಣ ವನ್ನು ಸ್ವಲ್ಪ ಸಮಯದ ನಂತರ ಮರಳಿ ಸಲಾಗಿವುದು. ಯಾರು ಕೂಡ ಆತಂಕ ಪಡಬಾರದು ಎಂದು ಅಧ್ಯಕ್ಷ ಕರುಣ್ ಕುಮಾರ್ ಮನವಿ ಮಾಡಿದರು. ಸಂಘದ ಲೆಕ್ಕಪರಿಶೋಧಕರಾಗಿ ಇಲಾಖೆಯವ ರನ್ನೇ ನೇಮಿಸಲು ಸಭೆಯಲ್ಲಿ ತೀರ್ಮಾನಿ ಸಲಾಯಿತು. ಈ ಸಂದರ್ಭ ಉಪಾಧ್ಯಕ್ಷ ಬಿ.ಸಿ. ಮಲ್ಲಿಕಾರ್ಜುನ, ನಿರ್ದೇಶಕರಾದ, ಕೆ.ಎ. ಉದಯಕುಮಾರ್, ಎ.ಯು.ಉಮ್ಮರ್, ಲೀಲಾಧರ್ ರೈ, ಎಲ್.ಸುರೇಶ್, ಬಿ.ಸಾವಿತ್ರಿ, ಎಂ.ಎನ್.ಶ್ರೀನಿವಾಸ್, ವ್ಯವಸ್ಥಾಪಕಿ ತಾಹಿರಾ ಇದ್ದರು.

Translate »