7 ಲಕ್ಷ ಮೌಲ್ಯದ ಬೀಟೆ ಮರ ವಶ
ಕೊಡಗು

7 ಲಕ್ಷ ಮೌಲ್ಯದ ಬೀಟೆ ಮರ ವಶ

September 27, 2018

ಮಡಿಕೇರಿ:  ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸ್ ಅರಣ್ಯ ಸಂಚಾರಿ ದಳ ಮಾಲು ಸಹಿತ ಆರೋಪಿ ಯನ್ನು ವಶಕ್ಕೆ ಪಡೆದಿದೆ. ಕಾರಗುಂದ ನಿವಾಸಿ ಪಿ.ಡ್ಯಾನಿ ದೇವಯ್ಯ ಎಂಬಾತ ಬಂಧಿತ ಆರೋಪಿಯಾಗಿದ್ದು, ಪಿಕ್‍ಅಪ್ ವಾಹನ ಸಹಿತ 7 ಲಕ್ಷ ರೂ. ಮೌಲ್ಯದ ಬೀಟೆ ಮರವನ್ನು ವಶ ಪಡಿಸಿಕೊಳ್ಳಲಾಗಿದೆ.

ಮರಗೋಡು ಸಮೀಪದ ಕಟ್ಟೆಮಾಡು ಮಾರ್ಗವಾಗಿ ಕೊಂಡಗೇರಿ ಕಡೆಗೆ ಪಿಕ್‍ಅಪ್ ವಾಹನದಲ್ಲಿ ಬೀಟೆ ಮರದ ತುಂಡು ಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಜಿಲ್ಲಾ ಪೊಲೀಸ್ ಅರಣ್ಯ ಸಂಚಾರಿ ದಳಕ್ಕೆ ದೊರಕಿತ್ತು. ಆರೋಪಿಯನ್ನು ಮಾಲು ಸಹಿತ ವಶಕ್ಕೆ ಪಡೆಯಲು ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಕಟ್ಟೆಮಾಡು ಜಂಕ್ಷನ್‍ನಲ್ಲಿ ಹೊಂಚು ಹಾಕಿದ್ದರು.
ಬುಧವಾರ ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಬೀಟೆ ಮರ ತುಂಬಿ ಕೊಂಡು ಕಟ್ಟೆಮಾಡು ಜಂಕ್ಷನ್‍ಗೆ ಬಂದ ಪಿಕ್‍ಅಪ್ ವಾಹನವನ್ನು ಪರಿಶೀಲಿಸಿ ದಾಗ ಅಕ್ರಮ ಮರ ಸಾಗಾಟ ಪ್ರಕರಣ ಬಯಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಜಿಲ್ಲಾ ಅರಣ್ಯ ಸಂಚಾರಿ ದಳ ಬೀಟೆ ಮರ ಮತ್ತು ವಾಹನವನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Translate »