ತಹಶೀಲ್ದಾರ್ ಮೇಲೆ ಹಲ್ಲೆ: ಆರೋಪಿಗಳಿಗೆ ಜಾಮೀನು
ಕೊಡಗು

ತಹಶೀಲ್ದಾರ್ ಮೇಲೆ ಹಲ್ಲೆ: ಆರೋಪಿಗಳಿಗೆ ಜಾಮೀನು

September 28, 2018

ಮಡಿಕೇರಿ: ಸೋಮವಾರಪೇಟೆ ತಹ ಶೀಲ್ದಾರ್ ಮಹೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಕಳೆದ ನಾಲ್ಕು ದಿನಗಳಿಂದ ಮಡಿ ಕೇರಿಯ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಎಲ್ಲಾ 15 ಮಂದಿಯನ್ನು ನ್ಯಾಯಾಲಯದ ಆದೇಶದಂತೆ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ. ಕುಶಾಲ ನಗರದ ವಾಲ್ಮಿಖಿ ಭವನದಲ್ಲಿದ್ದ ಕೆಲವು ಸಂತ್ರಸ್ಥರು ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ನೋಡಲ್ ಅಧಿಕಾರಿಯೊಂದಿಗೆ ಪ್ರಶ್ನಿಸುವ ಸಂದರ್ಭ ತಹಶೀಲ್ದಾರರ ಜೊತೆ ವಾಗ್ವಾದ ನಡೆಸಿದ್ದರು. ಈ ಸಂದರ್ಭ ತಹಶೀಲ್ದಾರ್ ಮಹೇಶ್, ಹಲ್ಲೆಯ ದೂರು ನೀಡಿದ್ದ ಹಿನ್ನಲೆಯಲ್ಲಿ 15 ಜನರ ವಿರುದ್ಧ ಪೊಲೀಸರು ಮೊಕ್ಕದ್ದಮೆ ದಾಖಲಿಸಿ ಬಂಧಿಸಿದ್ದರು.

ನ್ಯಾಯಾಲಯದಲ್ಲಿ ಆರೋಪಿತರ ಪರ ಸೋಮವಾರ ಪೇಟೆಯ ವಕೀಲ ಹಾಗೂ ಸೇವಾಭಾರತಿ ಸಂಘದ ತಾಲೂಕು ಕಾರ್ಯವಾಹಕ ಪದ್ಮನಾಭ ಅವರು ವಾz ಮಂಡಿಸಿ 15 ಜನರನ್ನೂ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Translate »