ದರ್ಬಾರ್ ಗಣಪತಿ ವಿಸರ್ಜನೆ
ಚಾಮರಾಜನಗರ

ದರ್ಬಾರ್ ಗಣಪತಿ ವಿಸರ್ಜನೆ

September 28, 2018

ಚಾಮರಾಜನಗರ:  ನಗರದ ರಥದ ಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ವಿದ್ಯಾಗಣಪತಿಯನ್ನು ಗುರುವಾರ ಬೆಳಗಿನ ಜಾವ ಇಲ್ಲಿನ ದೊಡ್ಡ ಅರಸನ ಕೊಳ ದಲ್ಲಿ ವಿಸರ್ಜಿಸಲಾಯಿತು. ಗುರುವಾರ ಬೆಳಿಗ್ಗೆ ಗುರುನಂಜಶೆಟ್ಟರ ವೃತ್ತದ ಮುಂಭಾಗ ದಿಂದ ಆರಂಭವಾಗಿದ್ದ ಮೆರವಣಿಗೆ ನಗರದ ನಾನಾ ಬೀದಿಗಳಲ್ಲಿ ಸಾಗಿತ್ತು. ಅಂತಿಮವಾಗಿ ಗುರುವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಯಲ್ಲಿ ಕ್ರೇನ್ ಮೂಲಕ ತುಂತುರ ಮಳೆಯ ನಡುವೆ ದರ್ಬಾರ್ ಗಣಪತಿಯನ್ನು ಕೊಳದಲ್ಲಿ ವಿಸರ್ಜಿಸಲಾಯಿತು.
ಈ ವೇಳೆ ಬಾಣ ಬಿರುಸುಗಳ ಚಿತ್ತಾರ ಗಮನ ಸೆಳೆಯಿತು. ಪಟಾಕಿ ಸಿಡಿಸಲಾಯಿತು. ನೂರಾರು ನಾಗರಿಕರು, ಶ್ರೀವಿದ್ಯಾಗಣಪತಿ ಮಂಡಳಿ ಪದಾಧಿಕಾರಿಗಳು ಹಾಗೂ ಪೊಲೀಸರು ಹಾಜರಿದ್ದರು.

Translate »