ಹಾಡಹಗಲೇ ಆಟೋ ಚಾಲಕನಿಂದ ಪ್ರಯಾಣಿಕ ಯುವತಿ ಅಪಹರಣ ಯತ್ನ
ಕೊಡಗು

ಹಾಡಹಗಲೇ ಆಟೋ ಚಾಲಕನಿಂದ ಪ್ರಯಾಣಿಕ ಯುವತಿ ಅಪಹರಣ ಯತ್ನ

September 28, 2018
  • ವಿರಾಜಪೇಟೆಯಲ್ಲಿ ಘಟನೆ, ಆಟೋ ವಶ
  • ಚಾಲಕನಿಗಾಗಿ ಪೊಲೀಸರ ಹುಡುಕಾಟ

ವಿರಾಜಪೇಟೆ: ತನ್ನ ಆಟೋ ದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ಹಾಡ ಹಗಲೇ ಅಪಹರಿಸಲು ಚಾಲಕ ಪ್ರಯತ್ನಿಸಿದ ಘಟನೆ ವಿರಾಜಪೇಟೆ ಪಟ್ಟಣ ದಲ್ಲಿ ತಡವಾಗಿ ವರದಿಯಾಗಿದೆ.

ಈ ಸಂಬಂಧ ವಿರಾಜಪೇಟೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನ ಪತ್ತೆಗಾಗಿ ಹುಡುಕಾಟ ನಡೆ ಸಿದ್ದಾರೆ. ಅಪಹರಣದ ವೇಳೆ ಯುವತಿ ಆಟೋದಿಂದ ಹೊರಗೆ ಜಿಗಿದು ಪಾರಾ ಗಿದ್ದಾರೆ. ಆದರೆ ಈ ವೇಳೆ ಆಕೆಯ ತಲೆ ಮತ್ತು ಕೈ-ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ವಿವರ: ವಿರಾಜಪೇಟೆ ಪಟ್ಟಣದ ಮೀನು ಪೇಟೆಯಿಂದ ಸೆ.24ರಂದು ಬೆಳಿಗ್ಗೆ 8 ಗಂಟೆ ವೇಳೆಯಲ್ಲಿ ಕುಕ್ಲೂರು ಗ್ರಾಮಕ್ಕೆ ತೆರಳಲು ಯುವತಿ ಆಟೋ (ಕೆಎ.12 ಎ.4331) ಹತ್ತಿದ್ದಾಳೆ. ಆದರೆ ಚಾಲಕ ಕುಕ್ಲೂ ರಿಗೆ ಹೋಗುವ ರಸ್ತೆ ಬದಲಾಗಿ ಮಹಿಳಾ ಸಮಾಜ ರಸ್ತೆ ಕಡೆ ಅತೀ ವೇಗವಾಗಿ ಹೋದ ಕಾರಣ ಅನುಮಾನಗೊಂಡ ಯುವತಿ ಆಟೋ ನಿಲ್ಲಿಸುವಂತೆ ಹೇಳಿದ ರಾದರೂ ಚಾಲಕ ಆಟೋವನ್ನು ವೇಗ ವಾಗಿ ಚಲಿಸಿದ ಕಾರಣ ಆಕೆ ಆಟೋ ದಿಂದ ಹೊರಗೆ ಜಿಗಿದಿದ್ದಾಳೆ.

ಯುವತಿಯು ಮಹಿಳಾ ಸಮಾಜದ ಬಳಿಯೇ ಆಟೋದಿಂದ ಹೊರಗೆ ಜಿಗಿದಿ ದ್ದರಿಂದ ಚಾಲಕ ಆಟೋ ನಿಲ್ಲಿಸದೇ ವೇಗ ವಾಗಿ ಪರಾರಿಯಾಗಿದ್ದಾನೆ. ಹೊರಗೆ ಬಿದ್ದ ಯುವತಿ ತಲೆ, ಕೈ-ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಎಡ ಕಾಲಿನ ಮೂಳೆ ಮುರಿದಿದೆ. ರಕ್ತ ಸಿಕ್ತ ಉಡುಪಿನಲ್ಲೇ ನಡೆದುಕೊಂಡು ಬರು ತ್ತಿದ್ದ ಆಕೆಯನ್ನು ಅಪರಿಚಿತ ಮಹಿಳೆ ಯೋರ್ವರು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಯುವತಿ ಪೊಲೀ ಸರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಆಟೋ ವಶಪಡಿಸಿಕೊಂಡಿ ದ್ದಾರೆ. ಚಾಲಕ ಹೆಗ್ಗಳ ಗ್ರಾಮದವ ನಾಗಿದ್ದು, ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವಿವಾಹಿತಳಾದ ಯುವತಿಯು ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತ ನಾಡಿ, ಆಟೋ ಚಾಲಕ ನನಗೆ ಅಪರಿ ಚಿತನಾಗಿದ್ದು, ಅಂದು ಕಂಠಪೂರ್ತಿ ಕುಡಿದಿದ್ದ. ನಾನು ಕುಕ್ಲೂರು ಗ್ರಾಮ ದಲ್ಲಿರುವ ಕಿಗ್ಗಾಲು ತಗಡಿನ ಶೀಟು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಗೆ ಹೋಗಲು ಆಟೋ ಹತ್ತಿದ್ದೆ. ಆತ ಮಾರ್ಗ ಬದಲಾಯಿಸಿ ಆಟೋ ಚಲಾಯಿಸಿದ. ನಾನು ಎಷ್ಟೇ ಕೇಳಿ ಕೊಂಡರೂ ಆಟೋ ನಿಲ್ಲಿಸದೇ ಇದ್ದ ಕಾರಣ ಹೊರಗೆ ಜಿಗಿಯಬೇಕಾಯಿತು ಎಂದು ತಿಳಿಸಿದರು.

Translate »