ಕೊಡಗಿಗೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಎಂದು ಆರೋಪಿಸಿ ಪ್ರತಿಭಟನೆ
ಕೊಡಗು

ಕೊಡಗಿಗೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಎಂದು ಆರೋಪಿಸಿ ಪ್ರತಿಭಟನೆ

September 26, 2018

ಮಡಿಕೇರಿ: ಪ್ರಕೃತಿ ವಿಕೋಪ ದಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಪರಿಹಾರ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಲತಾಯಿ ಧೋರಣೆ ತೋರುತ್ತಿವೆ ಎಂದು ಆರೋಪಿಸಿ ಸುವರ್ಣ ಕನ್ನಡನಾಡು ಯುವ ವೇದಿಕೆ ಮಡಿ ಕೇರಿಯಲ್ಲಿ ಪ್ರತಿಭಟನೆ ನಡೆಸಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿ ಸಿದರು.ಜಿಲ್ಲೆಯ ಜನತೆ ಸಂಕಷ್ಟ ದಲ್ಲಿದ್ದು, ವಿವಿಧ ರೀತಿಯ ಸಾಲಗಳನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ಅನ್ನು ತಕ್ಷಣವೆ ಬಿಡು ಗಡೆಗೊಳಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘ ಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಅಜಿತ್ ಕೊತ್ತನಳ್ಳಿ ಮಾತನಾಡಿ, ಪ್ರಕೃತಿ ವಿಕೋಪಕ್ಕೆ ತುತ್ತಾದ ಗ್ರಾಮಗಳಿಗೆ ತೆರಳಿ ನಷ್ಟದ ವಿಡಿಯೋ ಚಿತ್ರೀಕರಿಸಿ ಅದನ್ನು ರಾಜ್ಯ ಮತ್ತು ಕೇದ್ರ ಸರ್ಕಾರಗಳಿಗೆ ಸಲ್ಲಿಸಿ ಪರಿಹಾರಕ್ಕೆ ಒತ್ತಾಯಿಸಲಾಗಿತ್ತು. ಆದರೆ ಇದಕ್ಕೆ ಯಾವುದೆ ಸ್ಪಂದನೆ ವ್ಯಕ್ತ ವಾಗ ಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಾರಕಿಹೋಳಿ ಬ್ರದರ್ಸ್ ಓಲೈಕೆ ಮಾಡುವುದನ್ನು ಕೈಬಿಟ್ಟು ಕೊಡಗು ಜಿಲ್ಲೆಯ ಸಂತ್ರಸ್ಥರ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ನೆರೆ ಸಂತ್ರಸ್ಥರಿಗೆ ನೆರವು ಘೋಷಿಸಿದ್ದಲ್ಲದೆ, ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದಾರೆ. ಪ್ರಧಾನಿ ಮೋದಿ ಅವರು ಸೈನಿಕರ ತವರು ಹಾಗೂ ದಕ್ಷಿಣ ಭಾರತದ ಜೀವ ನದಿ ಉಗಮ ಸ್ಥಳವನ್ನು ಮರೆತಿದ್ದು, ತಕಣವೇ ಪರಿಹಾರ ಘೋಷಿ ಸುವಂತೆ ಒತ್ತಾಯಿಸಿದರಲ್ಲದೆ, ಕೊಡಗು ಜಿಲ್ಲೆಗೆ ಆಗಮಿಸಿ ಪ್ರಾಕೃತಿಕ ವಿಕೋಪವನ್ನು ಪರಿ ಶೀಲಿಸುವಂತೆ ಮನವಿ ಮಾಡಿದರು.

ಇದೀಗ ಕೇವಲ ಸಾಂಕೇತಿಕವಾಗಿ ಪ್ರತಿಭ ಟನೆ ನಡೆಸುತ್ತಿದ್ದು, ಜಿಲ್ಲೆಯ ಜನರ ನೆರವಿಗೆ ಧಾವಿಸದಿದ್ದರೆ ಸಿಎಂ ಕುಮಾರಸ್ವಾಮಿ ನಿವಾ ಸದ ಎದುರು ಹಾಗೂ ದೆಹಲಿಯ ಜಂತರ್ ಮಂತರ್‍ನಲ್ಲೂ ತೀವ್ರ ಪ್ರತಿಭಟನೆ ನಡೆಸು ವುದಾಗಿ ಎಚ್ಚರಿಸಿದರು. ಬಳಿಕ ಜಿಲಾ ್ಲಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ತೆರಳಿ ಮನವಿ ಸಲ್ಲಿಸಲಾಯಿತು.

Translate »