ವಿದ್ಯಾರ್ಥಿಗಳ ಜ್ಞಾನ ಕಸಿಯುತ್ತಿರುವ ಮೊಬೈಲ್
ಮೈಸೂರು

ವಿದ್ಯಾರ್ಥಿಗಳ ಜ್ಞಾನ ಕಸಿಯುತ್ತಿರುವ ಮೊಬೈಲ್

September 26, 2018

`ಸಾಹಿತ್ಯ ಅಭಿಯಾನ’ದಲ್ಲಿ ಸಾಹಿತಿ ಮಳಲಿ ವಸಂತಕುಮಾರ್ ಅಭಿಮತ
ಮೈಸೂರು: ಇಂದು ಮೊಬೈಲ್ ವ್ಯಾಮೋಹದಿಂದಾಗಿ ಯುವ ಜನರ ಜ್ಞಾನ ಹಾಳಾಗುತ್ತಿದ್ದು, ಮೊಬೈಲ್ ಇಲ್ಲದೆ ಜೀವನವೇ ಇಲ್ಲವೇನೋ ಎಂಬಂತೆ ವಿದ್ಯಾರ್ಥಿಗಳ ಭಾವನೆಯಾಗಿದೆ ಎಂದು ಸಾಹಿತಿ ಮಳಲಿ ವಸಂತಕುಮಾರ್ ಅಭಿಪ್ರಾಯಪಟ್ಟರು.
ಮೈಸೂರಿನ ಪಡುವಾರಹಳ್ಳಿ ಮಹಾ ರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮಂಗಳವಾರ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ `ಸಾಹಿತ್ಯ ಅಭಿಯಾನ’ ಪ್ರೊ.ಸುಜನಾ ಅವರ ಯುವ ಸಂಧ್ಯಾ (ಮಹಾಕಾವ್ಯ) ಸಮಕಾಲೀನ ಸ್ಪಂದನಾ ಕುರಿತು ಅವರು ಮಾತನಾಡಿದರು.

ಇಂದು ಮೊಬೈಲ್ ವ್ಯಾಮೋಹ ಎಲ್ಲಿಯ ವರೆಗೆ ವ್ಯಾಪಿಸಿದೆ ಎಂದರೆ, ತಿಂಡಿ ತಿನ್ನು ವಾಗಲೂ ಕೈಯ್ಯಲ್ಲಿ ಮೊಬೈಲ್ ಹಿಡಿಯು ವುದನ್ನು ಕಾಣುತ್ತಿದ್ದೇವೆ. ವಿದ್ಯಾರ್ಥಿಗಳು ವಾಟ್ಸ್‍ಆಪ್, ಫೇಸ್‍ಬುಕ್ ಮೋಹಕ್ಕೆ ಒಳಗಾಗಿ ದ್ದಾರೆ. ಇದು ಯುವಜನರ ಜ್ಞಾನವನ್ನೇ ಕಸಿದುಕೊಳ್ಳುತ್ತಿದೆ. ಮೊಬೈಲ್ ಹಿಡಿಯುವ ಬದಲು ನಿಮಗೆ ಜ್ಞಾನ ನೀಡುವ ಪುಸ್ತಕ ಹಿಡಿಯಲು ನಿಮ್ಮಿಂದ ಸಾಧ್ಯವೇ ಎಂದು ಅವರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.

ಹಿಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ ಏಳುತ್ತಿದ್ದಂತೆ ಪುಸ್ತಕಗಳನ್ನು ಓದುತ್ತಿ ದ್ದೆವು. ಆಗಿನ ಕಾಲದ ವಿದ್ಯಾರ್ಥಿಗಳಿಗಿದ್ದ ಜ್ಞಾನದಲ್ಲಿ ಕಾಲು ಭಾಗವೂ ಇಂದಿನ ವಿದ್ಯಾರ್ಥಿ ಗಳಲ್ಲಿ ಇಲ್ಲ. ಹುಟ್ಟಿದ ಮಗುವಿನ ಕೈಯ್ಯಲ್ಲೂ ಮೊಬೈಲ್ ಇದೆಯೇ ಎಂದು ಪ್ರಶ್ನಿಸುವ ಕಾಲವಿದು ಎಂದರು.

ಮಹಾಕಾವ್ಯದಲ್ಲಿ ಮೌಲ್ಯಗಳು ಮಾತ ನಾಡುತ್ತವೆ. ಮೌಲ್ಯಗಳ ವೈಭವೀಕರಣ ಅಲ್ಲಿ ಮುಖ್ಯವಾಗುತ್ತದೆ. ಪಂಪ, ರನ್ನ, ಕುಮಾರವ್ಯಾಸರ ಮಹಾಕಾವ್ಯಗಳನ್ನು ವಿದ್ಯಾರ್ಥಿಗಳು ಓದಬೇಕು. ಹೆಚ್ಚಿನ ಜ್ಞಾನ ಸಂಪಾದಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಹಾರಾಣಿ ವಾಣಿಜ್ಯಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಅಣ್ಣೇಗೌಡ ಮಾತನಾಡಿ, ಪ್ರೊ.ಸುಜನಾ ಮಹಾಕವಿ, ವಿಮರ್ಶಕ, ಆದರ್ಶ ಪ್ರಾಧ್ಯಾಪಕರಾಗಿದ್ದರು. ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟ ಕಾವ್ಯ ಮಾದರಿ ರೂಪಿಸಿಕೊಂಡಿದ್ದರು. ವಿಮರ್ಶೆ ಯಲ್ಲಿ ಸ್ವಂತಿಕೆ ಇತ್ತು. ಅವರ ವಿಮರ್ಶೆ ಯಲ್ಲಿ ವಿಶಿಷ್ಟ ಒಳನೋಟಗಳನ್ನು ಓದುಗರು ಕಾಣಬಹುದು ಎಂದರು. ಕನ್ನಡ ಸಾಹಿತ್ಯ ಪರಿಷತ್‍ನ ಮೈಸೂರು ಜಿಲ್ಲಾಧ್ಯಕ್ಷ ವೈ.ಡಿ. ರಾಜಣ್ಣ, ಸಂಚಾಲಕ ಎಚ್.ಎಂ.ವಿಜಯ ಕುಮಾರ್ ಪ್ರಾಧ್ಯಾಪಕ ಮೈಸೂರು ಕೃಷ್ಣ ಮೂರ್ತಿ, ನಿವೃತ್ತ ಪ್ರಾಧ್ಯಾಪಕ ಆರ್.ಎನ್. ಪದ್ಮನಾಭ ಉಪಸ್ಥಿತರಿದ್ದರು.

Translate »