ಕೊಡಗಿನ ಋಣ ತೀರಿಸಲು ಸಾಧ್ಯವಿಲ್ಲ: ಕೆ.ಎಸ್.ನಂಜುಂಡೇಗೌಡ
ಗೋಣಿಕೊಪ್ಪಲು: ಜಿಲ್ಲೆಯಲ್ಲಿ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿ ರುವ ಸಂತ್ರಸ್ತರ ಪ್ರದೇಶಗಳಾದ ಮಾಂದಲ ಪಟ್ಟಿ, ಒಣಚಲು, ಎರಡನೇ ಮೊಣ್ಣಂಗೇರಿ, ಚಾಮುಂಡೇಶ್ವರಿನಗರದ ಪ್ರದೇಶದಲ್ಲಿ ಇರುವ ಆಯ್ದ ನೂರು ಸಂತ್ರಸ್ತರ ಕುಟುಂಬ ಗಳಿಗೆ ಶ್ರೀರಂಗಪಟ್ಟಣದ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್.ನಂಜುಂಡೇಗೌಡ ಮುಂದಾಳತ್ವದಲ್ಲಿ ಅಕ್ಕಿ ಹಾಗೂ ಆಹಾರ ಸಾಮಗ್ರಿಗಳನ್ನು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ವಿತರಿಸಲಾಯಿತು.
ಶ್ರೀರಂಗಪಟ್ಟಣದ ರೈತ ಮುಖಂಡ ರಾದ ಕೃಷ್ಣೇಗೌಡ, ಫಿಲಿಫ್, ಉಮೇಶ್ ಕುಮಾರ್, ಪುರುಷೋತ್ತಮ್, ಮಹಾ ದೇವ, ರವಿ, ನಂಜುಂಡಪ್ಪ, ಹನುಮಂತಪ್ಪ, ಮಹಾಲಿಂಗು, ಕೆಂಪೆಗೌಡ, ರಮೇಶ್, ಕೃಷ್ಣ, ಚಿಕ್ಕಣ್ಣ ಹಾಗೂ ರಾಮಕೃಷ್ಣ ಸೇರಿದಂತೆ ಕೊಡಗು ಜಿಲ್ಲಾ ರೈತ ಸಂಘದ ಮುಖಂ ಡರು ನೆರೆ ಪ್ರದೇಶಗಳಿಗೆ ಖುದ್ದು ಭೇಟಿ ನೀಡುವ ಮೂಲಕ ರೈತರಿಂದ ಸಂಗ್ರಹಿ ಸಿದ್ದ ಅಕ್ಕಿ ಹಾಗೂ ಆಹಾರ ಪದಾರ್ಥ ಗಳನ್ನು ವಿತರಿಸಿದರು. ಫಲಾನುಭವಿಯ ಆಧಾರ್ ಸಂಖ್ಯೆಯ ಮೂಲಕ ಗುರುತಿಸಿ ವಸ್ತು ಗಳನ್ನು ಲೋಪವಾಗದಂತೆ ವಿತರಿಸಲಾಯಿತು.
ಮುಂದಿನ ದಿನದಲ್ಲಿ ರೈತ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸಿ ಜಿಲ್ಲೆಯಲ್ಲಿ ಮನೆ ಕಳೆದುಕೊಂಡಿರುವ ಪ್ರದೇಶದಲ್ಲಿ ಮನೆ ನಿರ್ಮಾಣ ಸಂದರ್ಭ ಜಿಲ್ಲೆಯಲ್ಲಿಯೇ ತಂಗುವ ಮೂಲಕ ಸಂಕ ಷ್ಟದಲ್ಲಿರುವ ಮನೆಗಳಲ್ಲಿ ಕೆಲಸ ಮಾಡುವ ತೀರ್ಮಾನ ಕೈಗೊಂಡಿರುವ ಬಗ್ಗೆ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಕೆ.ಎಸ್. ನಂಜುಂಡೇಗೌಡ ತಿಳಿಸಿದರು. ಈ ಭಾಗ ದಲ್ಲಿ ಸುರಿದ ಭಾರಿ ಮಳೆಯಿಂದ ಮಂಡ್ಯ ಮುಂತಾದ ಜಿಲ್ಲೆಗಳ ರೈತರು ನೀರನ್ನು ಬಳಸುತ್ತಿದ್ದಾರೆ. ಕೊಡಗಿನ ಜನರಿಗೆ ತೊಂದರೆಯಾದ ಸಂದರ್ಭದಲ್ಲಿ ನಾವು ಗಳು ಸಹಾಯಕ್ಕೆ ನಿಲ್ಲುವುದು ನಮ್ಮ ಕರ್ತವ್ಯ. ಎಂದಿಗೂ ನಾವು ಕೊಡಗಿನ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದರು.
ಕೊಡಗು ಜಿಲ್ಲೆಯ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ. ಜಿಲ್ಲೆಯ ಸಂತ್ರಸ್ತರು ಕಷ್ಟದಲ್ಲಿ ಸಿಲುಕಿದ್ದಾರೆ. ಈ ಭಾಗಕ್ಕೆ ಕೈಲಾದ ಸಹಾಯ ಮಾಡಬೇಕೆಂದು ರೈತ ಮುಖಂಡರಲ್ಲಿ ಮನವಿ ಸಲ್ಲಿಸಿದ್ದರು. ಮನ ವಿಯನ್ನು ಆಧರಿಸಿ ಕೊಡಗಿಗೆ ಭೇಟಿ ನೀಡುವ ಮೂಲಕ ಖುದ್ದಾಗಿ ನೆರೆ ಸಂತ್ರ ಸ್ತರ ಕಷ್ಟವನ್ನು ಕಂಡಿದ್ದೇವೆ. ಮುಂದೆಯೂ ಸಹಕಾರ ಮಾಡುವ ಭರವಸೆಯನ್ನು ಶ್ರೀರಂಗ ಪಟ್ಟಣದ ರೈತ ಮುಖಂಡರು ಹೇಳಿದರು.
ಈ ಸಂದರ್ಭ ಕೊಡಗು ರೈತ ಸಂಘದ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಚೋನಿರ ಸತ್ಯ, ಮುಖಂಡ ರಾದ ಮಲ್ಚೀರ ಗಿರೀಶ್, ಮಲ್ಚೀರ ಅಶೋಕ್, ಮಲ್ಚೀರ ಅನೀಲ್, ಮಲ್ಚೀರ ಹರೀಶ್, ಮಲ್ಚೀರ ಹ್ಯಾರಿ, ತೀತರಮಾಡ ಸುನೀಲ್, ತೀತರಮಾಡ ರಾಜ, ಬಾದುಮಂಡ ಮಹೇಶ್, ಬಾರಿಯಂಡ ಜಯಂತ್, ಮನೆಯಪಂಡ ಪೊನ್ನಪ್ಪ, ಮಂಡೇಪಂಡ ಅರ್ಜುನ, ಚಿಯ ಕ್‍ಪೂವಂಡ ಮಿಥುನ್, ಚಿಯಕ್‍ಪೂವಂಡ ವೇಣು ತಮ್ಮಯ್ಯ, ಕೊಂಗೇರ ಗಣಪತಿ, ಪುಚ್ಚಿಮಾಡ ಸುನೀಲ್, ಪಪ್ಪು ತಮ್ಮಯ್ಯ, ಕಿರಣ್, ಅಪ್ಪಾರಂಡ ನೀರಜ್ ಅಪ್ಪಣ್ಣ, ಕೆ.ಎಸ್. ಸೂರಜ್, ಸುನೀಲ್, ಜಯಂತ್ ಚಿಣ್ಣಪ್ಪ, ಮುಂತಾದವರು ಹಾಜರಿದ್ದರು.