ಆರ್ಜಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ: ಪಿಡಿಓ ವಿರುದ್ಧ ಅಧ್ಯಕ್ಷೆ, ಉಪಾಧ್ಯಕ್ಷರ ಆರೋಪ
ಕೊಡಗು

ಆರ್ಜಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ: ಪಿಡಿಓ ವಿರುದ್ಧ ಅಧ್ಯಕ್ಷೆ, ಉಪಾಧ್ಯಕ್ಷರ ಆರೋಪ

September 26, 2018

ವಿರಾಜಪೇಟೆ:  ಆರ್ಜಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕರ್ತವ್ಯವನ್ನು ಮರೆತು ರಾಜಕಿಯ ಮಡುತ್ತಿದ್ದಾರೆ ಎಂದು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ. ರಮೇಶ್ (ಗಿರಿ) ದೂರಿದರು.

ವಿರಾಜಪೇಟೆ ಬಳಿಯ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎನ್.ಗಾಯಿತ್ರಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಸಮಾನ್ಯ ಸಭೆ ಯಲ್ಲಿ ಮಾತನಾಡಿದ ಬಿ.ಎಂ.ರಮೇಶ್, ನಾನೊಬ್ಬ ಗ್ರಾಮ ಪಂಚಾಯಿತಿ ಉಪಾ ಧ್ಯಕ್ಷನಾಗಿದ್ದು, ಯಾವುದೇ ಮಾಹಿತಿ ನೀಡದೆ, ಸಭೆಯಲ್ಲಿ ತೀರ್ಮಾನವಾಗದೆ ಸ.ನಂ.-64/10ರಲ್ಲಿ ನಿರ್ಮಿಸಿರುವ ಅನ್ವರುಲ್ ಹುದಾ ಸೆಂಟರ್ ಶಾಲಾ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಹಾಗೂ ಪೆರುಂ ಬಾಡಿ ಚೆಕ್ ಪೋಸ್ಟ್ ಬಳಿಯಿರುವ ಹೋಟೆ ಲ್‍ಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಿ ರುವ ಪಿಡಿಒ ವರ್ತನೆ ಸರಿಯಲ್ಲ. ಇದರ ಬಗ್ಗೆ ತನಿಖೆಯಾಗಬೇಕೆಂದು ಸಭೆಯನ್ನು

ಒತ್ತಾಯಿಸಿದಾಗ ಸದಸ್ಯ ಟಿ.ಕೆ.ಬಶೀರ್ ಮಾತನಾಡಿ, ತನಿಖೆಯಾಗಲಿ ಆದರೆ ಕಾನೂನು ಬದ್ಧವಾಗಿರಲಿ ಎಂದರು.
ಅಧ್ಯಕ್ಷೆ ಗಾಯಿತ್ರಿ ಅವರು ಮಾತನಾಡಿ, ನಿರಾಕ್ಷೇಪಣಾ ಪತ್ರ ನೀಡಲು ನಾನು ಹೇಳಿಲ್ಲ. ಪಿಡಿಒ ನನಗೆ ಗೊತ್ತಿಲ್ಲದೆ ನನ್ನ ಸಹಿಯನ್ನು ಬಳಸಿಕೊಂಡಿದ್ದಾರೆ. ಅಭಿ ವೃದ್ಧಿ ಕೆಲಸಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಪಂಚಾಯಿತಿಯಲ್ಲಿ ಯಾವುದೇ ಅಭಿ ವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದರು. ಇದಕ್ಕೆ ಸದಸ್ಯ ಜಾಫರ್ ಸಾಧಿಕ್ ಅವರು ಮಾತನಾಡಿ, ಪಂಚಾಯಿತಿಯಲ್ಲಿ ಗ್ರಾಮ ಸ್ಥರ ಅನೇಕ ಅರ್ಜಿಗಳು ಬಾಕಿ ಇದ್ದು, ಇದರ ಬಗ್ಗೆ ಅಧ್ಯಕ್ಷರು ಗಮನ ಹರಿಸುತ್ತಿಲ್ಲ. ನಿರಾಕ್ಷೇಪಣಾ ಪತ್ರ ನೀಡಿರುವುದನ್ನು ಪದೇ ಪದೇ ಚರ್ಚೆ ಮಾಡುತ್ತಿರಾ ಎಂದಾಗ, ಸದಸ್ಯ ಟಿ.ಎನ್.ಲವಕುಮಾರ್ ಮಾತ ನಾಡಿ, ಪಿಡಿಒ ಅವರು ನಿರಾಕ್ಷೇಪಣಾ ಪತ್ರ ನೀಡುವಾಗ ಸಭೆಯಲ್ಲಿ ತೀರ್ಮಾ ನಿಸದೆ ನೀಡಿರುವುದು ಸರಿಯಲ್ಲ. ಪಂಚಾ ಯಿತಿಯಿಂದ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಏನಾಯಿತು. ಇದರ ಬಗ್ಗೆ ಕೇಳಿದರೆ ಅಧಿಕಾರಿ ಮೌನ ವಹಿಸಿದ್ದಾರೆ ಎಂದರು.

ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ, ವಿದ್ಯಾ ಸಂಸ್ಥೆಗೆ ಮತ್ತು ಹೋಟೆಲ್‍ಗೆ ನಿರಾಕ್ಷೇ ಪಣಾ ಪತ್ರ ನೀಡಲು ಅಧ್ಯಕ್ಷರು ಗ್ರಾಮ ಪಂಚಾಯಿತಿ ಸಭೆಯಲ್ಲಿಯೇ ಹೇಳಿದ್ದು, ಅವರೆ ಸಹಿ ಮಾಡಿದ್ದಾರೆಂದು ಸಭೆಗೆ ತಿಳಿಸಿದರು. ಸದಸ್ಯ ಜಫರ್ ಸಾಧಿಕ್ ಮಾತ ನಾಡಿ, ಅಧ್ಯಕ್ಷರು ಸುಳ್ಳು ಹೇಳುವುದನ್ನು ಬಿಟ್ಟು ಅಭಿವೃದ್ಧಿ ಕಡೆಗೆ ಗಮನ ಹರಿಸಿ ಎಂದರು. ಇದಕ್ಕೆ ಅಧ್ಯಕ್ಷೆ ಗಾಯಿತ್ರಿ ಮಾತ ನಾಡಿ, ನಾನು ಯಾವುದೇ ಕಾರಣಕ್ಕೂ ನಿರಾಕ್ಷೇಪಣಾ ಪತ್ರ ನೀಡಲು ಹೇಳಿಲ್ಲ. ಸಹಿ ಮಾಡಿಲ್ಲ. ಇದು ಅಧಿಕಾರಿಯ ಕುತಂತ್ರ ಇದರ ಬಗ್ಗೆ ತನಿಖೆಯಾಗಲಿ ಎಂದರು. ಇದಕ್ಕೆ ಸದಸ್ಯೆ ಶ್ರೀಜಾ ಜಯನ್ ಧ್ವನಿಗೂಡಿಸಿದರು.
ಸಭೆಯಲ್ಲಿ ಸದಸ್ಯರಾದ ಹೆಚ್.ಬಿ. ಉದಯ ಕುಮಾರ್, ವೈ.ಗಂಗೂ, ಹೆಚ್.ಬಿ.ಪಾರ್ವತಿ, ಫಾತಿಮಾ ಅವರು ಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಸಭೆ ಪ್ರಾರಂಭದಿಂದಲೂ ಗದ್ದಲ ಏರು ಧ್ವನಿಯಲ್ಲಿಯೇ ಚರ್ಚೆ ನಡೆಯಿತು.

Translate »