ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿಯ 3ನೇ ವಾರ್ಡ್‍ನಲ್ಲಿ ಸ್ಪರ್ಧಿಸಲು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ವಕೀಲರೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಪಪಂ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಸೇರಿದಂತೆ ಇಬ್ಬರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಿಸಿದ್ದ ವೇಳೆ ವಿರಾಜಪೇಟೆ ಪಪಂಗೂ ಸಹ ಚುನಾವಣೆ ಘೋಷಿಸಿ, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಕೊಡಗಿನಲ್ಲಿ ಭೂ ಕುಸಿತ ಹಾಗೂ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಇಲ್ಲಿನ…
ಮರಣಕೂಪವಾಗಿರುವ ಕೊಡಗಿನ ಚಾರಣ ಪ್ರದೇಶಗಳು
September 23, 2018ಮಡಿಕೇರಿ: ದಕ್ಷಿಣ ಭಾರತದ ಲ್ಲಿಯೇ ಕೊಡಗು ಜಿಲ್ಲೆ ಚಾರಣಯೋಗ್ಯ ಸ್ಥಳವಾಗಿ ಖ್ಯಾತಿ ಪಡೆದಿತ್ತಲ್ಲದೇ, ಇಲ್ಲಿನ ಬೆಟ್ಟಗುಡ್ಡಗಳು ದೇಶವಿದೇಶಗಳ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತಿದ್ದವು. ಆದರೆ ಪ್ರಕೃತಿಯ ಮುನಿಸಿಗೆ ಈ ಚಾರಣ ಯೋಗ್ಯವಾದ ಪ್ರದೇಶಗಳೆಲ್ಲ ಮರಣ ಕೂಪ ಗಳಾಗಿ ಪರಿವರ್ತನೆಯಾಗಿವೆ. ನಿಶಾನೆ ಮೊಟ್ಟೆ, ತಡಿಯಂಡಮೋಳ್, ಮಾಂದಲಪಟ್ಟಿ, ಕೋಟೆಬೆಟ್ಟ, ಪುಪ್ಪಗಿರಿ, ಕುಡಿಯ ಹಾರಿದ ಕಲ್ಲು ಬೆಟ್ಟ, ಕೆಪಟ್ಟಿ ಮಲೆ, ಎರಡನೇ ಮೊಣ್ಣಂಗೇರಿ, ವಣಚಲು, ಮಕ್ಕಳ ಗುಡಿಬೆಟ್ಟ, ಗರ್ಲಾಲೆ, ಸೂರ್ಲಬ್ಬಿ, ಕಾಲೂರು ಸೇರಿದಂತೆ ಹಲವು ಗ್ರಾಮೀಣ ಪ್ರದೇಶ ಗಳಲ್ಲಿದ್ದ ಹತ್ತಾರು ಬೆಟ್ಟಗಳ…
ರೈತ ಸಂಘದ ಕಾರ್ಯದರ್ಶಿ ನಿರ್ವಾಣಪ್ಪ ಬಂಧನ
September 23, 2018ಸಿದ್ದಾಪುರದಲ್ಲಿ ಎಸ್‍ಡಿಪಿಐ ಪ್ರತಿಭಟನೆ ಸಿದ್ದಾಪುರ: ಕುಶಾಲನಗರದ ವಾಲ್ಮೀಕಿ ನಿರಾಶ್ರಿತ ಕೇಂದ್ರದಲ್ಲಿ ಇರುವವರ ಪರವಾಗಿ ಸುದ್ದಿಗೋಷ್ಠಿ ನಡೆಸಿ. ಹೋರಾಟ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಸಿದ ಹಿನ್ನಲೆ ರಾಜ್ಯ ರೈತ ಸಂಘದ ಕಾರ್ಯದರ್ಶಿ ನಿರ್ವಾಣಪ್ಪ ಅವರನ್ನು ಸೋಮ ವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಇವರ ಬಂಧನ ಖಂಡಿಸಿ ಎಸ್‍ಡಿಪಿಐ ಪಕ್ಷದ ಕಾರ್ಯಕರ್ತರು ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿಯ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಪಕ್ಷದ ವಿರಾಜಪೇಟೆ ಘಟಕದ ಅಧ್ಯಕ್ಷ ಮುಸ್ತಫ ಮಾತನಾಡಿ, ನಿರಾಶ್ರಿತರ ಪರವಾಗಿ ಸುದ್ದಿಗೋಷ್ಠಿಯಲ್ಲಿ…
ಪೊನ್ನಂಪೇಟೆಯಲ್ಲಿ ಹರದಾಸ ಅಪ್ಪಚ್ಚ ಕವಿ 150ನೇ ಜನ್ಮ ದಿನಾಚರಣೆ
September 22, 2018ಗೋಣಿಕೊಪ್ಪಲು: ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಜನ್ಮ ದಿನೋತ್ಸವವನ್ನು ‘ಕೊಡವ ಸಾಹಿತ್ಯ ದಿನ’ ಎಂದು ಆಚರಣೆ ಮಾಡುವ ನಿರ್ಧಾ ರವನ್ನು ತೆಗೆದುಕೊಳ್ಳಲಾಯಿತು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಪೊನ್ನಂಪೇಟೆ ಮಹಾವಿದ್ಯಾಲಯ ಹಾಗೂ ಕೊಡಗು ರಂಗಭೂಮಿ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಿದ್ದ ಹರದಾಸ ಅಪ್ಪಚ್ಚ ಕವಿಯ 150 ನೇ ಜನ್ಮದಿನೋತ್ಸವದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಯಿತು. ಅಪ್ಪಚ್ಚ ಕವಿ ಕೊಡವ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ವಿಶೇಷ ಸ್ಥಾನ ನೀಡಲು ಹಾಗೂ…
ಕುಶಾಲನಗರ ನಿರಾಶ್ರಿತರ ಕೇಂದ್ರದಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ ಪ್ರಕರಣ
September 22, 2018ಇಬ್ಬರು ಮಹಿಳೆಯರು ಸೇರಿ 15 ಮಂದಿ ಸೆರೆ, ನ್ಯಾಯಾಂಗ ಬಂಧನ ಮಡಿಕೇರಿ: ಸೋಮವಾರಪೇಟೆ ತಹಶೀಲ್ದಾರ್ ಮಹೇಶ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಬಂಧಿತರ ಪೈಕಿ ಇಬ್ಬರು ಮಹಿಳೆಯರು ಕೂಡ ಸೇರಿದ್ದು, ಬಂಧಿ ತರ ವಿರುದ್ಧ ಒಟ್ಟು 9 ಸೆಕ್ಷನ್‍ಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ ಪಣ್ಣೇಕರ್ ತಿಳಿಸಿದ್ದಾರೆ. ಘಟನೆ ಹಿನ್ನೆಲೆ: ಆಗಸ್ಟ್ 16 ರಂದು ಸಂಭ ವಿಸಿದ…
ಮೈಸೂರು ಕೊಡಗು ಗೌಡ ಸಮಾಜದಿಂದ ಸೆ.30ರಂದು ಸರಳ ಕೈಲ್ ಮುಹೂರ್ತ
September 22, 2018ಮೈಸೂರು: ಮೈಸೂರು ಕೊಡಗು ಗೌಡ ಸಮಾಜದ ಆಶ್ರಯದಲ್ಲಿ ವಿಜಯ ನಗರ 2ನೇ ಹಂತದಲ್ಲಿರುವ ಕೊಡವ ಸಮಾಜದ ಸಭಾಂಗಣದಲ್ಲಿ ಸೆ.30 ರಂದು ಬೆಳಿಗ್ಗೆ 9.30ಕ್ಕೆ ಕೈಲ್ ಮುಹೂರ್ತ ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು. ಕೊಡಗಿನ ಜನರು ಪ್ರಕೃತಿ ವಿಕೋಪ ದಿಂದ ಸಂತ್ರಸ್ತರಿಗೆ ಶೋಕ ಸಾಗರದಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಈ ಬಾರಿ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾ ಗಿದ್ದು, ಕೇವಲ ಆಯುಧ ಪೂಜೆ ಮತ್ತು 2017-18ನೇ ಸಾಲಿನ ಎಸ್‍ಎಸ್ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಕೊಡಗು ಗೌಡ ಸಮಾಜದ…
ಗುತ್ತಿಗೆದಾರನ ಮೇಲೆ ಮಾರಣಾಂತಿಕ ಹಲ್ಲೆ
September 22, 2018ಕುಶಾಲನಗರ: ಪ್ರೇಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುತ್ತಿಗೆದಾರನೊಬ್ಬನ ಮೇಲೆ ಯುವತಿಯ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಾರಂಗಿಯಲ್ಲಿ ನಡೆದಿದೆ. ಗುತ್ತಿಗೆದಾರ ಗಿರೀಶ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಇವರು ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿದ ಯುವತಿಯ ಸಂಬಂ ಧಿಕರಾದ ಶೇಖರ್ ಮತ್ತು ಗೌತಮ್ ಎಂಬು ವರು ಮಾರಕಾಸ್ತ್ರಗಳಿಂದ ಗಿರೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರ ವಾಗಿ ಗಾಯಗೊಂಡಿದ್ದ ಗಿರೀಶ್ ಅವರಿಗೆ ಇಲ್ಲಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿ ಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ…
ಸೆ.23, ವಿರಾಜಪೇಟೆಯಲ್ಲಿ ಗಣಪತಿ ವಿಸರ್ಜನೆ ವಾಹನಗಳ ಬದಲಿ ಸಂಚಾರ ಮಾರ್ಗದ ವಿವರ
September 21, 2018ಮಡಿಕೇರಿ: ವಿರಾಜಪೇಟೆ ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ಗಣೇಶ ವಿಗ್ರಹ ವಿಸರ್ಜನಾ ಸಂದರ್ಭದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಪ್ಟೆಂಬರ್ 23ರ ಸಂಜೆ 5 ಗಂಟೆಯಿಂದ ಸೆಪ್ಟೆಂಬರ್ 24ರ ಬೆಳಗ್ಗೆ 10 ಗಂಟೆ ವರೆಗೆ ವಿರಾಜಪೇಟೆ ಪಟ್ಟಣದಲ್ಲಿ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆಯಂತೆ ನಿರ್ವಹಿಸಲು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ. ವಾಹನಗಳ ಸಂಚಾರ ತಾತ್ಕಾಲಿಕ ಮಾರ್ಗದ ಬದಲಾವಣೆ ವಿವರ ಇಂತಿದೆ: ಸೆಪ್ಟೆಂಬರ್ 23 ರಂದು ವಿರಾಜಪೇಟೆ ಪಟ್ಟಣದಲ್ಲಿ ನಡೆಯುವ ಗೌರಿ…
ತಹಶೀಲ್ದಾರ್ ಮಹೇಶ್ ಅಮಾನತ್ತಿಗೆ ರೈತ ಸಂಘ ಆಗ್ರಹ
September 21, 2018ಕುಶಾಲನಗರ: ಸಮೀಪದ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಹಾರಂಗಿ ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರ ಮೇಲೆ ತಹಶೀಲ್ದಾರ್ ಮಹೇಶ್ ದೌರ್ಜನ್ಯ ನಡೆಸಿದ್ದು, ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ರಾತ್ರಿ 11 ಗಂಟೆ ವೇಳೆಗೆ ಪರಿಹಾರ ಕೇಂದ್ರಕ್ಕೆ ಆಗಮಿಸಿದ ತಹಶೀಲ್ದಾರ್ ಮಹೇಶ್ ಅವರು ಮಲಗಿರುವ ಮಹಿಳೆಯನ್ನು ಎಬ್ಬಿಸಿ ಮೈಮುಟ್ಟಿ ಅವಾಚ್ಯಕ ಶಬ್ದಗಳಿಂದ ನಿಂದಿಸ ಹಲ್ಲೆ…
ಮದ್ಯ ಮಾರಾಟ ನಿಷೇಧ
September 21, 2018ಮಡಿಕೇರಿ: ವಿರಾಜಪೇಟೆ ಪಟ್ಟಣದಲ್ಲಿ ಗಣೇಶ ಮಂಟಪಗಳ ವಿಸರ್ಜನಾ ಕಾರ್ಯಕ್ರಮದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಾಗೂ ಕಾರ್ಯಕ್ರಮವು ಶಾಂತಿಯುತವಾಗಿ ನಡೆಯಲು ಅನುಕೂಲವಾಗುವಂತೆ ಸೆಪ್ಟೆಂಬರ್ 22 ರ ಮಧ್ಯ ರಾತ್ರಿ 12 ಗಂಟೆಯಿಂದ ಸೆಪ್ಟೆಂಬರ್ 24 ರ ಬೆಳಗ್ಗೆ 10 ಗಂಟೆಯವರೆಗೆ ವಿರಾಜಪೇಟೆ ಪಟ್ಟಣ ಮತ್ತು ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯೊಳಗೆ ಬರುವ ಗ್ರಾಮಗಳಲ್ಲಿರುವ ಅಬಕಾರಿ ಕಾಯ್ದೆ 1965 ರ ಕಲಂ 21 ರ ಅಧಿಕಾರದಂತೆ ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೋಟೆಲ್…










