ಕುಶಾಲನಗರ ನಿರಾಶ್ರಿತರ ಕೇಂದ್ರದಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ ಪ್ರಕರಣ
ಕೊಡಗು

ಕುಶಾಲನಗರ ನಿರಾಶ್ರಿತರ ಕೇಂದ್ರದಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ ಪ್ರಕರಣ

September 22, 2018

ಇಬ್ಬರು ಮಹಿಳೆಯರು ಸೇರಿ 15 ಮಂದಿ ಸೆರೆ, ನ್ಯಾಯಾಂಗ ಬಂಧನ
ಮಡಿಕೇರಿ:  ಸೋಮವಾರಪೇಟೆ ತಹಶೀಲ್ದಾರ್ ಮಹೇಶ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಬಂಧಿತರ ಪೈಕಿ ಇಬ್ಬರು ಮಹಿಳೆಯರು ಕೂಡ ಸೇರಿದ್ದು, ಬಂಧಿ ತರ ವಿರುದ್ಧ ಒಟ್ಟು 9 ಸೆಕ್ಷನ್‍ಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ ಪಣ್ಣೇಕರ್ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಆಗಸ್ಟ್ 16 ರಂದು ಸಂಭ ವಿಸಿದ ಪ್ರಕೃತಿ ವಿಕೋಪದಿಂದ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳು ತೀವ್ರ ಹಾನಿಗೆ ಒಳ ಗಾಗಿದ್ದವು. ನೂರಾರು ಮಂದಿ ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರ ಶಿಬಿರ ಸೇರಿ ದ್ದರು. ಈ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ ಕೆಲವರು ಕೂಡಾ ನಿರಾಶ್ರಿತರ ಶಿಬಿರ ಸೇರಿಕೊಂಡು ಸರಕಾರದ ಸೌಲಭ್ಯ ಪಡೆಯಲು ಪ್ರಯತ್ನಿಸಿದ್ದರು.

ಈ ಕುರಿತು ಜಿಲ್ಲಾಡಳಿತಕ್ಕೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿನಲ್ಲಿ ತೆರೆಯಲಾಗಿರುವ ನಿರಾ ಶ್ರಿತರ ಕೇಂದ್ರಗಳಲ್ಲಿರುವ ನೈಜ ಸಂತ್ರ ಸ್ಥರನ್ನು ಗುರುತಿಸಲು ಆಯಾ ತಾಲೂಕು ಗಳ ತಹಶೀಲ್ದಾರ್‍ರಿಗೆ ಸೂಚನೆ ನೀಡಿ ದ್ದರು ಎಂದು ಎಸ್ಪಿ ತಿಳಿಸಿದ್ದಾರೆ.

ಕುಶಾಲನಗರದ ವಾಲ್ಮೀಕಿ ಭವನದ ನಿರಾ ಶ್ರಿತರ ಕೇಂದ್ರದಲ್ಲಿ ಸಂತ್ರಸ್ಥರಲ್ಲ ದವರು ಸರಕಾರದ ಸೌಲಭ್ಯ ಪಡೆಯಲು ಸಂತ್ರ ಸ್ಥರ ಕೇಂದ್ರಕ್ಕೆ ದಾಖಲಾಗಿರುವ ಮಾಹಿತಿ ಸೋಮವಾರಪೇಟೆ ತಹ ಶೀಲ್ದಾರ್ ಮಹೇಶ್ ಅವರಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ತಹ ಶೀಲ್ದಾರ್ ಮಹೇಶ್ ಸೆ.18 ರ ರಾತ್ರಿ 10.30 ಗಂಟೆಗೆ ವಾಲ್ಮೀಕಿ ಭವನದ ನಿರಾಶ್ರಿತರ ಶಿಬಿರಕ್ಕೆ ತೆರಳಿ ನೈಜ ಸಂತ್ರಸ್ಥರ ಗಣತಿಗೆ ಮುಂದಾಗಿದ್ದರು. ಈ ಸಂದರ್ಭ ಕುಶಾಲ ನಗರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದರು. ಆ ಬಳಿಕ ಸ್ಥಳಕ್ಕೆ ತೆರಳಿದ ತಹಶೀ ಲ್ದಾರ್ ಮಹೇಶ್ ಅವರು ನಿರಾಶ್ರಿತರ ಕೇಂದ್ರ ದಲ್ಲಿದ್ದವರ ಗಣತಿಗೆ ಮುಂದಾದಾಗ ಅದನ್ನು ಪ್ರಶ್ನಿಸಿ ಕೆಲವರು ಗಲಭೆ ಸೃಷ್ಟಿಸಿದ್ದಲ್ಲದೇ, ತಹಶೀ ಲ್ದಾರ್ ಮೇಲೆ ಹಲ್ಲೆ ನಡೆಸಿದ್ದರು.

ಹಲ್ಲೆಯಿಂದ ಗಾಯಗೊಂಡ ತಹಶೀ ಲ್ದಾರ್ ಮಹೇಶ್ ಮಡಿಕೇರಿ ಜಿಲ್ಲಾ ಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ದ್ದರು. ಹಲ್ಲೆ ಪ್ರಕರಣದ ಸಮಗ್ರ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿ ಒಟ್ಟು 15 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪಣ್ಣೇಕರ್ ತಿಳಿಸಿದರು.

ಮಕ್ಕಂದೂರು ಗ್ರಾಮದ ನಿವಾಸಿ ಗಳಾದ ಕುಶಾಲನಗರ ವಾಲ್ಮೀಕಿ ಭವನದ ನಿರಾಶ್ರಿತರ ಕೇಂದ್ರದಲ್ಲಿದ್ದ ಪಿ.ಟಿ. ಸಂಜೀವ, ಟಿ.ವಿ. ವಸಂತ್ ಕುಮಾರ್, ಟಿ.ಸಿ.ಸಿದ್ದು, ಆರ್. ಅಣ್ಣಪ್ಪ, ಪಿ.ಟಿ.ಸಂಜು, ಪಿ.ಕೆ. ತಿಮ್ಮಪ್ಪ, ಪಿ.ಕೆ. ಮಂಜುನಾಥ್, ಎಂ.ಎಂ. ಮೋಹನ್, ಆನಂದ, ಪಿ.ವಿ.ರೋಷನ್, ಹಾಲೇರಿ ಗ್ರಾಮದ ಸಿ.ಕೆ.ತೇಜ್‍ಕುಮಾರ್, ಎನ್.ಇ.ಅದೀಶ್‍ಕುಮಾರ್, ಮಕ್ಕಂದೂ ರಿನ ಪಿ.ಎಸ್. ಮಂಜುನಾಥ್, ಚಿತ್ರಾ, ನಿಶಾ ಎಂಬುವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಬಂಧಿತರ ವಿರುದ್ಧ ಭಾರತ ದಂಡ ಸಂಹಿತೆ 143, 147, 323, 324, 353, 332, 504, 506 ರೆ/ವಿ 149 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸ ಲಾಗಿದೆ ಎಂದು ಪೊಲೀಸ್ ವರಿಷ್ಠಾಧಿ ಕಾರಿ ಡಾ.ಸುಮನ ಡಿ.ಪಣ್ಣೇಕರ್ ತಿಳಿ ಸಿದರು. ತಹಶೀಲ್ದಾರ್ ಮಹೇಶ್ ಮಹಿಳೆ ಯರ ಮೇಲೆ ಕೈ ಮಾಡಿದ್ದಾರೆ ಎನ್ನುವ ಆರೋಪ ಕೂಡಾ ಆಧಾರ ರಹಿತ ವಾಗಿದ್ದು, ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗಳ ಹೇಳಿ ಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ. ಪಣ್ಣೇಕರ್ ತಿಳಿಸಿದರು.

Translate »