ಜೀತಕ್ಕಾಗಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ: ಮಂಡ್ಯ, ಮದ್ದೂರಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ

ಜೀತಕ್ಕಾಗಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ: ಮಂಡ್ಯ, ಮದ್ದೂರಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

September 22, 2018

ಮಂಡ್ಯ:  ಬೆಕ್ಕಳಲೆಯಲ್ಲಿ ಜೀತಕ್ಕಾಗಿ ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಡ್ಯ, ಮದ್ದೂರಿನಲ್ಲಿಂದು ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದಲ್ಲಿ ಬಿವಿಎಸ್, ದಸಂಸ ಸಂಘ ಟನೆಗಳು ಮತ್ತು ಮದ್ದೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಕ್ಕೂಟದ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.

ಮಂಡ್ಯ: ಜೀತಪದ್ಧತಿ ನಿಷೇಧ ಕಾಯ್ದೆಯಡಿ ಕುದುರಗುಂಡಿ ಗ್ರಾಮದ ನಾಗೇಶ, ಪಾಂಡು, ಕರಿ ಯಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಬೆಳಿಗ್ಗೆ ಕಾವೇರಿ ವನದ ಬಳಿ ಜಮಾವಣೆ ಗೊಂಡ ಕಾರ್ಯಕರ್ತರು ನಂತರ ಅಲ್ಲಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ದಲಿತ ಮಹಿಳೆಯ ಅಪಹರಣ ನಡೆಸಲಾಗಿದೆ. ಆಕೆಯನ್ನು ಜೀತಕ್ಕೆ ಇಟ್ಟುಕೊಳ್ಳುವ ಹಿನ್ನೆಲೆ ಯಿಂದ ಈ ಕೃತ್ಯ ನಡೆಸಲಾಗಿದೆ. ಈಗಾಗಲೇ ಜೀತ ಪದ್ಧತಿ ನಿಷೇಧವಾಗಿದ್ದು, ಇಂತಹ ಸಂದರ್ಭ ದಲ್ಲಿಯೂ ಜಿಲ್ಲೆಯಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಅಪಹರಣಕ್ಕೊಳ ಗಾದ ಜಾನಕಮ್ಮ ಅವರಿಗೆ ಸೂಕ್ತ ರಕ್ಷಣೆ ನೀಡ ಬೇಕು ಹಾಗೂ ಆರೋಪಿ ಕುದರಗುಂಡಿ ನಾಗೇಶ ಮತ್ತು ಆತನ ಸಹಚರರನ್ನು ಜೀತಗಾರಿಕೆ ನಿಷೇಧ ಕಾಯ್ದೆ, ಮಹಿಳಾ ದೌರ್ಜನ್ಯ ವಿರೋಧಿ ಕಾಯ್ದೆ, ಅಸ್ಪøಶ್ಯತಾ ವಿರೋಧಿ ಕಾಯ್ದೆಗಳ ಅಡಿಯಲ್ಲಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮುಖಂಡ ರಾದ ಗುರುಪ್ರಸಾದ್ ಕೆರಗೋಡು, ಮರಿಯಪ್ಪ, ಲಿಂಗರಾಜು, ಸಿದ್ದಲಿಂಗಯ್ಯ, ಶ್ರೀನಿವಾಸ್ ಇತರರಿದ್ದರು.

ಗಡಿಪಾರಿಗೆ ಆಗ್ರಹ: ಬಹುಜನ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಮಂಡ್ಯದ ಸಂಜಯ ವೃತ್ತದ ಬಳಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಗಡಿ ಪಾರು ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ಯಲ್ಲಿ ಬಹುಜನ ವಿದ್ಯಾರ್ಥಿ ಸಂಘದ ಪ್ರಮೋದ್, ಏಳುಮಲೈ, ಅನುಪಮ ಇತರರಿದ್ದರು.

ಮದ್ದೂರು: ಬಿಟ್ಟಿ ದುಡಿಮೆ ಮಾಡಿಸಿಕೊಂಡು ಮಹಿಳೆ ಮೇಲೆ ದೌರ್ಜನ್ಯವೆಸಗಿ ಹಲ್ಲೆ ಮಾಡಿ ರುವ ಕುದುರುಗುಂಡಿ ನಾಗೇಶ್, ಕರಿಯಪ್ಪ, ಪಾಂಡು ಹಾಗೂ ಇತರರ ಮೇಲೆ ಕಾನೂನು ಕ್ರಮ ಕೈಗೊಂಡು ಇವರನ್ನು ಗಡಿಪಾರು ಮಾಡಿ ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳ ಬೇಕೆಂದು ಒತ್ತಾಯಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಕ್ಕೂಟದ ವತಿಯಿಂದ ನಾಗೇಶ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆ ಪಟ್ಟಣದ ಪ್ರಮುಖ ಸರ್ಕಲ್ ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆದು ಮಾನವ ಸರಪಳಿ ನಡೆಸಿದರು. ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಹುಲಿಗೆರೆಪುರ ಚಂದ್ರ ಶೇಖರ್, ಪರಿಶಿಷ್ಟ ಜಾತಿಯ ಮಹಿಳೆಯರನ್ನು ಇತ್ತೀಚೆಗೆ ಕಾರ್ಖಾನೆಗಳಲ್ಲಿ ಬಿಟ್ಟಿ ದುಡಿಮೆ ದುಡಿಸಿ ಬೆದರಿಕೆ ಹಾಕಿ ದೌರ್ಜನ್ಯ ವೆಸಗಿರುವ ಎಪಿಎಂಸಿ ಅಧ್ಯಕ್ಷ ನಾಗೇಶ್ ಹಾಗೂ ಹರಳಕೆರೆ ಕರಿಯಪ್ಪ, ಪಾಂಡುವಿನ ಮೇಲೆ ಸೂಕ್ತ ಕ್ರಮ ಕೈಗೊಂಡು ಅವರನ್ನು ಗಡಿಪಾರು ಮಾಡಬೇಕು. ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಅವರ ಒಡೆತನದಲ್ಲಿರುವ ಎಲ್ಲ ಕಾರ್ಖಾನೆಗಳನ್ನು ಲಾಕೌಟ್ ಮಾಡಬೇಕು, ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಇಪ್ಪತ್ತು ಲಕ್ಷ ಪರಿಹಾರ ನೀಡಿ ಮಹಿಳೆಯ ಕುಟುಂಬದವರನ್ನು ಜೀತದಿಂದ ವಿಮುಕ್ತಿಗೊಳಿಸಿ ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿ.ಎ.ಕೆರೆ ಮೂರ್ತಿ, ಕರಡಕೆರೆ ಯೋಗೇಶ್, ಚಿನ್ನಸ್ವಾಮಿ, ದೊರೆ ನರಸಿಂಹ, ಸಣ್ಣಪ್ಪ, ಶಿವರಾಜ್, ಮರಳಿ, ರವಿಕುಮಾರ್, ಅಂಬರೀಶ್, ಗುಡಿಗೆರೆ ಬಸವರಾಜು, ನಾಗೇಶ್, ಅನಿಲ್ ಕುಮಾರ್, ಕಾಳಯ್ಯ, ಚಂದ್ರಶೇಖರ್, ಭಾನುಪ್ರಕಾಶ್, ಹುಲಿಗೆರೆಪುರ ಬೋರಯ್ಯ ಇತರರು ಉಪಸ್ಥಿತರಿದ್ದರು.

Translate »