ಮಡಿಕೇರಿ: ಭೂ ಕುಸಿತದಿಂದಾಗಿ ತೀವ್ರ ದುರಸ್ತಿ ಗೀಡಾಗಿರುವ ಮಡಿಕೇರಿ-ಜೋಡುಪಾಲ ಹೆದ್ದಾರಿಯಲ್ಲಿ ಸದ್ಯಕ್ಕೆ ಲಘುವಾಹನ ಸೇರಿದಂತೆ ಎಲ್ಲಾ ರೀತಿಯ ವಾಹನಗಳÀ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ಆದರೆ ಜಿಲ್ಲಾಡಳಿತದ ಆದೇಶವನ್ನೂ ಧಿಕ್ಕರಿಸುವಂತೆ ಈಗಲೂ ಅನೇಕ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿ ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿದೆ. ಲಘು ವಾಹನಗಳು ಮಾತ್ರವಲ್ಲ, ಟಿಂಬರ್ ತುಂಬಿದ 10 ಚಕ್ರಗಳ ಲಾರಿಯೊಂದು ಈ ಹೆದ್ದಾರಿಯಲ್ಲಿ ಸಾಗುವ ಮೂಲಕ ಗ್ರಾಮಸ್ಥ ರನ್ನು ಕೆರಳಿಸಿದೆ. ಮದೆನಾಡು ವ್ಯಾಪ್ತಿಯಲ್ಲಿ ಟಿಂಬರ್ ತುಂಬಿದ್ದ 10 ಚಕ್ರಗಳ ಭಾರೀ ಲಾರಿಯನ್ನು ತಡೆಹಿಡಿದ…
ಅಕ್ರಮ ಬೀಟೆ ನಾಟ ವಶ
September 17, 2018ಕುಶಾಲನಗರ: ಆನೆಕಾಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿ ಯಲ್ಲಿ ಗುರುವಾರ ಬೆಳಗಿನ ಜಾವ ಮಾರುತಿ ಕಾರಿನಲ್ಲಿ ಅಕ್ರಮ ಬೀಟಿ ನಾಟ ಸಾಗಾಟ ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿಗಳು ಮಿಂಚಿನ ಕಾರ್ಯಾ ಚರಣೆ ನಡೆಸಿ ವಾಹನ ಸಮೇತ ಮಾಲು ವಶಪಡಿಸಿಕೊಂಡಿದ್ದಾರೆ. ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯ ಗದ್ದಹಳ್ಳ ಸಮೀಪದ ಗುರುವಾರ ಮುಂಜಾನೆ 3.45 ಗಂಟೆಗೆ ನೀಲಿ ಮಾರುತಿ ಕಾರಿನಲ್ಲಿ ಬೀಟೆ ನಾಟಗಳನ್ನು ತುಂಬಿಸಿಕೊಂಡು ಗಿರಿಯಪ್ಪ ಅವರ ತೋಟ ಹಾಗೂ ಮನೆಗೆ ಹೋಗುವ ಜಾಗದಲ್ಲಿ ಅನುಮಾನಗೊಂಡ ಅರಣ್ಯ ಸಿಬ್ಬಂದಿ ಕಾರು…
ಅಪಾಯದ ಅಂಚಿನಲ್ಲಿ ಕೊಡಗು-ಮೈಸೂರು ಗಡಿ ಗ್ರಾಮಗಳ ಜನರ ಬಾಂಧವ್ಯದ ಕೊಂಡಿಯಾಗಿದ್ದ ತೂಗು ಸೇತುವೆ
September 16, 2018ಕುಶಾಲನಗರ: ಸೋಮವಾರಪೇಟೆ ತಾಲೂಕಿನ ಧಾರ್ಮಿಕ ಕ್ಷೇತ್ರ ಕಣಿವೆ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕಾವೇರಿ ಮತ್ತು ಹಾರಂಗಿ ನದಿಯ ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಹಾನಿ ಯಾಗಿದ್ದು, ಇದರಿಂದ ಎರಡು ಜಿಲ್ಲೆಗಳ ಗಡಿ ಗ್ರಾಮಗಳ ಜನರ ಬಾಂಧವ್ಯದ ಕೊಂಡಿಯಾಗಿದ್ದ ಏಕೈಕ ತೂಗು ಸೇತುವೆ ಕಳಚಿ ಬಿದ್ದಂತಾಗಿದೆ. ಕೊಡಗು ಮತ್ತು ಮೈಸೂರು ಜಿಲ್ಲೆಗಳ ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಣಿವೆ ಶ್ರೀರಾಮಲಿಂಗೇ ಶ್ವರ ದೇವಸ್ಥಾನದ ಬಳಿ ತೂಗು ಸೇತುವೆ ನಿರ್ಮಾಣ ಮಾಡಲಾಗಿತ್ತು….
ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆಗೆ ಸಿಎಂಗೆ ಮನವಿ
September 16, 2018ಮಡಿಕೇರಿ: ಅತಿವೃಷ್ಟಿ ಹಾನಿ ಯಿಂದ ತತ್ತರಿಸಿರುವ ಕೊಡಗು ಜಿಲ್ಲೆ ಯಲ್ಲಿ ಮುಂದೆ ಸವಾಲಿನ ದಿನಗಳು ಎದು ರಾಗಲಿದ್ದು, ಶಾಶ್ವತ ಪರಿಹಾರದ ಚಿಂತ ನೆಗಳು ನಡೆಯಬೇಕಾಗಿದೆ. ಇದಕ್ಕಾಗಿ ರಾಜ ಕೀಯ ರಹಿತವಾದ ‘ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ’ವನ್ನು ರಚಿಸಬೇ ಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ. ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನಲ್ಲಿ ಸಂಭ ವಿಸಿರುವ ಅನಾಹುತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮತ್ತು ಮುಂದೆ ಈ ಘಟನೆ…
ಉರುಳಿಗೆ ಸಿಲುಕಿ ಚಿರತೆ ಸಾವು
September 16, 2018ಸುಂಟಿಕೊಪ್ಪ: ಮತ್ತಿಕಾಡುವಿನ ತೋಟವೊಂದರಲ್ಲಿ ಪ್ರಾಣಿಗಳ ಬೇಟೆಗಾಗಿ ಅಳವಡಿಸಿಲಾಗಿದ್ದ ಬೇಲಿಯ ಉರು ಳಿಗೆ ಸಿಲುಕಿ ಚಿರತೆಯೊಂದು ಪ್ರಾಣ ತೆತ್ತಿರುವ ಘಟನೆ ವರದಿಯಾಗಿದೆ. ತೋಟಕ್ಕೆ ಬೇಟೆ ಅರಸಿ ಬಂದಿದ್ದ ಅಂದಾಜು 7 ರಿಂದ 8 ವರ್ಷ ಪ್ರಾಯದ ಗಂಡು ಚಿರತೆ ಯಾರೋ ಅಳವಡಿಸಿದ ಉರುಳಿಗೆ ಸಿಲುಕಿ ಇಹಲೋಕ ತ್ಯಜಿಸಿದೆ. ಮತ್ತಿಕಾಡು ವಿನ ಕೃಷ್ಣ ತೋಟ (ಬೀಬಿ ಪ್ಲಾಂಟೇ ಶನ್) ಎಂಬವರ ತೋಟದಲ್ಲಿ ಈ ಘಟನೆಯು ಸಂಭವಿಸಿದ್ದು ತೋಟದ ಕಾರ್ಮಿಕ ಅಳಂಬೆ ಅರಸಿಕೊಂಡು ತೆರಳಿದ ಸಂದರ್ಭ ಘೋರಕೃತ್ಯ ಗೋಚರಿಸಿದೆ. ಕೂಡಲೇ ಕಾರ್ಮಿಕ…
ನಾಳೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
September 16, 2018ಮಡಿಕೇರಿ: ವಿರಾಜಪೇಟೆಯ ಮಾಜಿ ಸೈನಿಕರ ಸಹಕಾರ ಸಂಘ ನಿಯಮಿತ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವು ಸೆ.17 ರಂದು ಬೆ.10.30ಕ್ಕೆ ಅಮರ ಜವಾನ ಸ್ಮಾರಕದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಶಾಸಕ ಕೆ.ಜಿ.ಬೋಪಯ್ಯ, ಎಂಎಲ್‍ಸಿ ಶಾಂತೆಯಂಡ ವೀಣಾ ಅಚ್ಚಯ್ಯ, ಬ್ರಿಗೇಡಿಯರ್ ಮನೆಯಪಂಡ ಎಂ.ದೇವಯ್ಯ, ಚೇಂದ್ರಿಮಾಡ ಕೆ.ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯ ಕ್ರಮ ನಡೆಯಲಿದೆ. ಸೈನಿಕ ಮತ್ತು ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಲೆ.ಕರ್ನಲ್ ಗೀತ ಮಹಾಬಲ ಶೆಟ್ಟಿ, ವಿ.ಪೇಟೆ ತಾಲೂಕಿನ ತಹಶೀಲ್ದಾರರಾದ…
ಅಕ್ರಮ ಮರ ಸಾಗಾಣಿಕೆ; 4 ವಾಹನ, 20 ಲಕ್ಷ ಮೌಲ್ಯದ ಮರ ವಶ, ಮೂವರ ಸೆರೆ
September 16, 2018ಗೋಣಿಕೊಪ್ಪಲು: ಅಕ್ರಮ ಮರ ಸಾಗಾಟ ಆರೋಪದಡೀ ನಾಲ್ಕು ವಾಹನ ಸೇರಿದಂತೆ ಅಂದಾಜು 20 ಲಕ್ಷ ಮೌಲ್ಯದ ಮಾಲು ವಶ ಪಡಿಸಿಕೊಂಡಿದ್ದು, ನಾಲ್ವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದು, ಮೂವರನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿ ಸೆರೆಗೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳ ತಂಡ ಮಂಗಳವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 1 ಲಾರಿ, 1 ಮಜ್ದಾ, 1 ಕ್ರೈನ್, 1 ಜೀಪು ವಶ ಪಡಿಸಿಕೊಳ್ಳಲಾಗಿದ್ದು, ಆರೊಪಿಗಲಾದ ನಾಚಪ್ಪ, ವಿಜಯ್, ರಾಜ ಎಂಬುವವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ…
ವಿರಾಜಪೇಟೆ-ಮಾಕುಟ್ಟ ಮಾರ್ಗದಲ್ಲಿ ಮಿನಿಬಸ್ ಸಂಚಾರಕ್ಕೆ ಒತ್ತಾಯ
September 16, 2018ಪೊನ್ನಂಪೇಟೆ: ಕಳೆದ ಜೂನ್ ತಿಂಗಳಲ್ಲಿ ಸಂಭವಿಸಿದ ಮಹಾಮಳೆಯ ದುರಂತದಿಂದಾಗಿ ತೀವ್ರ ಹಾನಿಗೊಂಡು ಇದೀಗ ಭಾರಿ ವಾಹನಗಳ ಸಂಚಾರ ನಿಷೇದಿಸಿರುವ ವಿರಾಜಪೇಟೆ- ಮಾಕುಟ್ಟ ಮಾರ್ಗದಲ್ಲಿ ಜನರ ಅನುಕೂಲಕ್ಕಾಗಿ ಸರ ಕಾರಿ ಮಿನಿ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಬೇಟೋಳಿ ಗ್ರಾಪಂ ಮಾಜಿ ಉಪಾ ಧ್ಯಕ್ಷರಾದ ಮಂಡೇಡ ಎ. ಮೊಯ್ದು ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರಿ ವಾಹನ ಗಳ ಸಂಚಾರ ನಿಷೇದಿಸಿರುವ ಕಾರಣ ಈ ರಸ್ತೆ ಮಾರ್ಗದಲ್ಲಿ…
ನಿಂತಿದ್ದ ಕ್ರೇನ್‍ಗೆ ಬೈಕ್ ಡಿಕ್ಕಿ; ಸವಾರ ಸಾವು
September 16, 2018ಸೋಮವಾರಪೇಟೆ: ನಿಂತಿದ್ದ ಕ್ರೇನ್ ಒಂದಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಸವಾರ ಸಾವಿಗೀಡಾಗಿರುವ ಘಟನೆ ಪಟ್ಟಣದ ಆನೆಕೆರೆ ಸಮೀಪ ಸಂಭವಿಸಿದೆ. ತಾಕೇರಿ ಗ್ರಾಮದ ಕಾಫಿ ಬೆಳೆಗಾರ ಶಿವಕುಮಾರ್ ಮೃತಪಟ್ಟವರು. ಬುಧವಾರ ಮದ್ಯರಾತ್ರಿ ದುರ್ಘಟನೆ ಸಂಭವಿಸಿದೆ. ಮೃತರು ಪತ್ನಿ ಹಾಗು 6 ವರ್ಷದ ಪುತ್ರನನ್ನು ಅಗಲಿದ್ದಾರೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿರಾಜಪೇಟೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ತರಬೇತಿ
September 16, 2018ವಿರಾಜಪೇಟೆ: ವಿದ್ಯಾರ್ಥಿಗಳ ಕಲಿಕೆಯ ಕಾಲದಲ್ಲಿ ಏಕಾಗ್ರತೆ ಎಂಬುದು ಮುಖ್ಯವಾಗಿರುತ್ತದೆ. ಪರೀಕ್ಷೆಯನ್ನು ಎದುರಿ ಸಲು ಆತ್ಮವಿಶ್ವಾಸ ಅಗತ್ಯ ಎಂದು ಶ್ರೀರಂಗ ಪಟ್ಟಣದ ಪರಿವರ್ತನಾ ಶಾಲೆಯ ಡೀನ್ ಹಾಗೂ ಅಂತರಾಷ್ಟ್ರೀಯ ತರಬೇತುದಾರ ಆರ್.ಎ.ಚೇತನ್ ರಾಮ್ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪರಿವರ್ತನಾ ಶಾಲೆ ಮತ್ತು ಕಾಲೇಜು ಹಾಗೂ ವೀರಾಜಪೇಟೆ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯ ದಲ್ಲಿ ಪಟ್ಟಣದಲ್ಲಿರುವ ಸಂತ ಅನ್ನಮ್ಮ ದ್ವಿಶತ ಮಾನೋತ್ಸವ ಸಭಾಂಗಣದಲ್ಲಿ ಆಯೋ ಜಿಸಲಾಗಿದ್ದ ವಿರಾಜಪೇಟೆ ತಾಲೂಕಿನ ಆಯ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ತರಬೇತಿ…










