ವಿರಾಜಪೇಟೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ತರಬೇತಿ
ಕೊಡಗು

ವಿರಾಜಪೇಟೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ತರಬೇತಿ

September 16, 2018

ವಿರಾಜಪೇಟೆ:  ವಿದ್ಯಾರ್ಥಿಗಳ ಕಲಿಕೆಯ ಕಾಲದಲ್ಲಿ ಏಕಾಗ್ರತೆ ಎಂಬುದು ಮುಖ್ಯವಾಗಿರುತ್ತದೆ. ಪರೀಕ್ಷೆಯನ್ನು ಎದುರಿ ಸಲು ಆತ್ಮವಿಶ್ವಾಸ ಅಗತ್ಯ ಎಂದು ಶ್ರೀರಂಗ ಪಟ್ಟಣದ ಪರಿವರ್ತನಾ ಶಾಲೆಯ ಡೀನ್ ಹಾಗೂ ಅಂತರಾಷ್ಟ್ರೀಯ ತರಬೇತುದಾರ ಆರ್.ಎ.ಚೇತನ್ ರಾಮ್ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪರಿವರ್ತನಾ ಶಾಲೆ ಮತ್ತು ಕಾಲೇಜು ಹಾಗೂ ವೀರಾಜಪೇಟೆ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯ ದಲ್ಲಿ ಪಟ್ಟಣದಲ್ಲಿರುವ ಸಂತ ಅನ್ನಮ್ಮ ದ್ವಿಶತ ಮಾನೋತ್ಸವ ಸಭಾಂಗಣದಲ್ಲಿ ಆಯೋ ಜಿಸಲಾಗಿದ್ದ ವಿರಾಜಪೇಟೆ ತಾಲೂಕಿನ ಆಯ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚೇತನ್ ರಾಮ್ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪ್ರಮುಖವಾಗಿ ಮೂರು ಸಮಸ್ಯೆಗಳಾದ ಸಾಮಾಜಿಕ ಸಮಸ್ಯೆ, ಕೌಟುಂ ಬಿಕ ಸಮಸ್ಯೆ ಮತ್ತು ಶೈಕ್ಷಣಿಕ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ. ಸಾಮಾ ಜಿಕ ಸಮಸ್ಯೆಯಲ್ಲಿ ಅನೇಕ ಸಮಸ್ಯೆ ಗಳಿರುತ್ತದೆ, ಕೌಟುಂಬಿಕದಲ್ಲಿ ಮನೆಯ ಸಮಸ್ಯೆಯ ಹಲವು ಸಮಸ್ಯೆಗಳು ಇರು ತ್ತದೆ, ಇನ್ನು ಶಾಲೆಯಲ್ಲಿ ಪಾಠ ಪ್ರವಚನ ಮತ್ತು ಸೌಲತ್ತುಗಳ ಸಮಸ್ಯೆಗಳಿರುತ್ತದೆ. ಇವುಗಳನ್ನು ಬಗೆಹರಿಸಿಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕಾಗಿದೆ. ಹಾಗೂ ವಿದ್ಯಾರ್ಥಿಗಳ ಕಲಿಕೆಯ ಸಮ ಸ್ಯೆಯು ಆಂತರಿಕವಾಗಿರುತ್ತದೆ. ಇದನ್ನು ಅವರೆ ಬಗೆ ಹರಿಸಿಕೊಳ್ಳುವುದರೊಂದಿಗೆ ಕಲಿಕೆಯ ಅಧ್ಯಾಯನಗಳಿಗೆ ಒತ್ತು ನೀಡ ಬೇಕು. ಪರೀಕ್ಷೆಯಲ್ಲಿ ನೆನಪಿನ ಶಕ್ತಿಯಿಂದ ಸರಿಯಾದ ಉತ್ತರ ಬರೆಯಬೇಕು. ಯಾವುದೇ ಗೋಂದಲಕ್ಕೆ ಒಳಗಾಗದೆ ಸೂಕ್ತ ರೀತಿಯ ಉತ್ತರ ಬರೆಯಬೇಕು. ನಿಮ್ಮ ನಿಗದಿತ ಅವಧಿ, ಪ್ರಶ್ನೆಗೆ ನೀಡಿರುವ ಅಂಕ ಎಲ್ಲಾವನ್ನು ಗಮನದಲ್ಲಿ ಇಟ್ಟು ಕೊಂಡು ಬರೆಯಬೇಕು. ಮುಖ್ಯವಾಗಿ ಮೌಲ್ಯಮಾಪಕರಿಗೆ ಅರ್ತ ಗೊತ್ತಾಗುವಂತೆ ಅರ್ಥ ಪೂರ್ಣವಾಗಿ ಬರೆಯಬೇಕೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾ ಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ ಅವರು ಮಾತನಾಡಿ, ವಿದ್ಯಾ ರ್ಥಿಗಳು ಧೈರ್ಯ ಮತ್ತು ಆತ್ಮ ವಿಶ್ವಾಸ ದಿಂದ ಪರಿಕ್ಷೆಯನ್ನು ಎದುರಿಸಬೇಕು ಎಂದರು.

ಈ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಸಭೆಯನ್ನು ಉದ್ದೇಶಿಸಿ ಮಾತ ನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‍ನ ವಿರಾಜಪೇಟೆ ತಾಲೂಕು ಅಧ್ಯಕ್ಷ ಮುಲ್ಲೇಂ ಗಡ ಮಧೋಶ್ ಪೂವಯ್ಯ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ, ವಿರಾಜಪೇಟೆ ಕ್ಷೇತ್ರ ಶಿಕ್ಷ ಣಾಧಿüಕಾರಿ ಜಿ.ಎ.ಲೋಕೇಶ್, ಸಂತ ಅನ್ನಮ್ಮ ದೇವಾಲಯದ ಧರ್ಮ ಗುರು ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ವ್ಯವ ಸ್ಥಾಪಕರಾದ ಮದುಲೈಮುತ್ತು. ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿ ಪ್ರವೀಣ್, ಇತರರು ಉಪಸ್ಥಿತರಿದ್ದರು. ಸಂತ ಅನ್ನಮ್ಮ ಪ್ರೌಢಶಾಲ ಶಿಕ್ಷಕ ಜೆಪ್ರೀಡಿಸಿಲ್ವಾ ಸ್ವಾಗತಿಸಿದರು.

Translate »