ಅಕ್ರಮ ಬೀಟೆ ನಾಟ ವಶ
ಕೊಡಗು

ಅಕ್ರಮ ಬೀಟೆ ನಾಟ ವಶ

September 17, 2018

ಕುಶಾಲನಗರ:  ಆನೆಕಾಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿ ಯಲ್ಲಿ ಗುರುವಾರ ಬೆಳಗಿನ ಜಾವ ಮಾರುತಿ ಕಾರಿನಲ್ಲಿ ಅಕ್ರಮ ಬೀಟಿ ನಾಟ ಸಾಗಾಟ ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿಗಳು ಮಿಂಚಿನ ಕಾರ್ಯಾ ಚರಣೆ ನಡೆಸಿ ವಾಹನ ಸಮೇತ ಮಾಲು ವಶಪಡಿಸಿಕೊಂಡಿದ್ದಾರೆ. ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯ ಗದ್ದಹಳ್ಳ ಸಮೀಪದ ಗುರುವಾರ ಮುಂಜಾನೆ 3.45 ಗಂಟೆಗೆ ನೀಲಿ ಮಾರುತಿ ಕಾರಿನಲ್ಲಿ ಬೀಟೆ ನಾಟಗಳನ್ನು ತುಂಬಿಸಿಕೊಂಡು ಗಿರಿಯಪ್ಪ ಅವರ ತೋಟ ಹಾಗೂ ಮನೆಗೆ ಹೋಗುವ ಜಾಗದಲ್ಲಿ ಅನುಮಾನಗೊಂಡ ಅರಣ್ಯ ಸಿಬ್ಬಂದಿ ಕಾರು ತಡೆದು ಪರಿಶೀಲಿಸಿದಾಗ ಅಕ್ರಮ ಮರ ಸಾಗಾಟ ಬೆಳಕಿಗೆ ಬಂದಿದೆ. ಕಾರು ಚಾಲಕ ವಾಹನ ಬಿಟ್ಟು ಪರಾರಿ ಯಾಗಿದ್ದು, ಕತ್ತಲೆಯಾದ ಕಾರಣ ಆರೋಪಿಯನ್ನು ಹಿಡಿಯಲು ಸಾಧ್ಯವಾಗಿಲ್ಲ.

ಕಾರು ಸಮೇತ ರೂ.5 ಲಕ್ಷ ಬೆಲೆಬಾಳುವ ಬೀಟೆ ನಾಟಗಳನ್ನು ವಶ ಪಡಿಸಿಕೊಂಡಿ ರುವ ಸಿಬ್ಬಂದಿಗಳು ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅರುಣ್, ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಪಿ.ರಂಜನ್, ಅನಿಲ್ ಡಿಸೋಜಾ, ಅರಣ್ಯ ರಕ್ಷಕರಾದ ವಿ.ಎಸ್.ಮಂಜೇಗೌಡ, ಸಿಬ್ಬಂದಿ ಪೊನ್ನಪ್ಪ, ಚಾಲಕ ಸತೀಶ್ ಕಾರ್ಯಾಚರಣೆಯಲ್ಲಿದ್ದರು.

Translate »