ಕೊಡಗು

ಕೊಡಗಿನಲ್ಲಿ ಶೆಡ್‍ಗಳಿಗೆ ಕುಸಿದ ಬೇಡಿಕೆ
ಕೊಡಗು

ಕೊಡಗಿನಲ್ಲಿ ಶೆಡ್‍ಗಳಿಗೆ ಕುಸಿದ ಬೇಡಿಕೆ

September 12, 2018

ಮಡಿಕೇರಿ: ಭಾರಿ ಮಳೆಯಿಂದ ಮನೆ ಕಳೆದೊಕೊಂಡವರಿಗೆ ಸಂಯೋಜಿತ ಸಾಮಾಗ್ರಿಗಳ ತಂತ್ರಜ್ಞಾನವನ್ನು ಬಳಸಿ ನೂತನ ಮನೆಗಳನ್ನು ನಿರ್ಮಿಸಿಕೊಡಲಾಗುವುದೆಂದು ವಿಶೇಷ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದ್ದು, 2 ರೂಂಗಳುಳ್ಳ ಪ್ರಾಯೋಗಿಕ ಮನೆಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅನುಮತಿ ನೀಡಿದ್ದಾರೆ. ಈಗಾ ಗಲೇ ನಿರ್ಮಿಸಿರುವ ಶೆಡ್‍ಗಳಲ್ಲಿ ವಾಸಿಸಲು ಜನರು ಹಿಂದೇಟು ಹಾಕುತ್ತಿರುವ ಕಾರಣ ನೂತನ ತಂತ್ರಜ್ಞಾನ ಹಾಗೂ ವಸ್ತುಗಳನ್ನು ಬಳಸಿ ಮನೆಗಳನ್ನು ನಿರ್ಮಿ ಸಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಈ ಮನೆಗಳಿಗೆ ಬಳಸುವ ವಸ್ತುಗಳು ಪ್ರಾಕೃತಿಕ ವಿಕೋಪಗಳನ್ನು ತಡೆದುಕೊಳ್ಳುವ…

ಅರಣ್ಯ ಹುತಾತ್ಮರ ದಿನಾಚರಣೆ
ಕೊಡಗು

ಅರಣ್ಯ ಹುತಾತ್ಮರ ದಿನಾಚರಣೆ

September 12, 2018

ಮಡಿಕೇರಿ:  ಅರಣ್ಯ ಇಲಾಖೆ ವತಿಯಿಂದ ನಗರದ ಅರಣ್ಯ ಭವನದಲ್ಲಿ ಮಂಗಳವಾರ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ’ ನಡೆಯಿತು. ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ವಿ.ವಿ.ಮಲ್ಲಾಪುರ, ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಡಿ.ಪವನೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ಲಿಂಗರಾಜ, ಸರ್ಕಾರಿ ಅಭಿಯೋಜಕರಾದ ಶ್ರೀಧರ ನಾಯರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಎನ್. ಮಂಜುನಾಥ್, ಮರಿಯ ಕ್ರಿಸ್ತರಾಜು, ಎಂ.ಎಂ.ಜಯ, ಎಂ.ಜೆ.ಗೋವರ್ಧನ್ ಸಿಂಗ್ ಹೀಗೆ ಹಲವರು ಅರಣ್ಯ ಹುತಾತ್ಮರಿಗೆ ಪುಷ್ಪಗುಚ್ಛವಿಟ್ಟು…

ಮಡಿಕೇರಿ ಸುತ್ತಮುತ್ತ ಗುಡುಗು ಸಹಿತ ಮಳೆ
ಕೊಡಗು

ಮಡಿಕೇರಿ ಸುತ್ತಮುತ್ತ ಗುಡುಗು ಸಹಿತ ಮಳೆ

September 12, 2018

ಮಡಿಕೇರಿ:  ರಣ ಮಳೆಯ ಅವಾಂತರದಿಂದ ಕಂಗೆಟ್ಟಿದ್ದ ಕೊಡಗು ಜಿಲ್ಲೆ ಸಹಜ ಸ್ಥಿತಿಯತ್ತ ಹೊರಳುತ್ತಿರುವಾಗಲೇ ಮತ್ತೆ ಮಳೆಯ ಆರ್ಭಟ ಕಂಡು ಬಂದಿದೆ. ಮಂಗಳವಾರ ಮಧ್ಯಾಹ್ನದ ಬಳಿಕ ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಸುರಿದಿದೆ. ಈಗಾಗಲೇ ಪ್ರಕೃತಿ ವಿಕೋಪದಿಂದ ಸಂತ್ರಸ್ಥರಾದವರ ಪಾಲಿಗೆ ಕೆಲಕಾಲ ಸುರುದ ಮಳೆ  ಮತ್ತೊಮ್ಮೆ ಭೀತಿ ಹುಟ್ಟಿಸಿತು. ನಗರ ಸೇರಿದಂತೆ ಬೆಟ್ಟ ತಪ್ಪಲ ಪ್ರದೇಶಗಳಲ್ಲಿ ವಾಸವಿದ್ದವರು ಮಳೆಯ ಆರ್ಭಟಕ್ಕೆ ನಲುಗಿದ್ದು, ಇರುವ ಮನೆಗಳನ್ನು ಕೂಡ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಬೆಟ್ಟ…

ವಿರಾಜಪೇಟೆಯಲ್ಲಿ ಸಿಪಿಐ ಪ್ರತಿಭಟನೆ
ಕೊಡಗು

ವಿರಾಜಪೇಟೆಯಲ್ಲಿ ಸಿಪಿಐ ಪ್ರತಿಭಟನೆ

September 12, 2018

ವಿರಾಜಪೇಟೆ: ಕೇಂದ್ರದ ಬಿಜೆಪಿ ಸರಕಾರ ಪೆಟ್ರೋಲ್, ಡೀಸಲ್, ಮತ್ತು ಅಡುಗೆ ಅನಿಲಗಳ ಬೆಲೆಯನ್ನು ಏರಿಸುತ್ತಿರುವುದನ್ನು ವಿರೋಧಿಸಿ ಸಿಪಿಐ. ಮತ್ತು ಸಿಪಿಐ[ಎಂ] ಪಕ್ಷದ ಕಾರ್ಯಕರ್ತರು ವಿರಾಜಪೇಟೆ ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಸಿಪಿಐನ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನೀಲ್ ಅವರು ಪ್ರತಿಭಟನಾಕಾರರನ್ನುದ್ದೇಶಿಸಿ, ಕಳೆದ ನಾಲ್ಕುವರೆ ವರ್ಷಗಳಿಂದಲೂ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿದ್ದು ಭಾಷಣದ ಮೂಲಕ ಜನರನ್ನು ಮೋಡಿ ಮಾಡುತ್ತಾ ಚುನಾವಣಾ ಸಂದರ್ಭ ನೀಡಿದ…

ಇಂದು ತರಬೇತಿ ಕಾರ್ಯಕ್ರಮ
ಕೊಡಗು

ಇಂದು ತರಬೇತಿ ಕಾರ್ಯಕ್ರಮ

September 12, 2018

ಮಡಿಕೇರಿ: ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀರಂಗಪಟ್ಟಣ ಪರಿವರ್ತನಾ ಶಾಲೆ ಮತ್ತು ಕಾಲೇಜು, ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಮತ್ತು ಕಾವೇರಿ ಪದವಿ ಮತ್ತು ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಸೆ.12 ರಂದು ವಿರಾಜಪೇಟೆ ಕಾವೇರಿ ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ. ಜೆಸಿಐ ಪೊನ್ನಂಪೇಟೆ ನಿಸರ್ಗ ಅಧ್ಯಕ್ಷ ವಿಕ್ರಂ ಮೂಡಗದ್ದೆ, ಗೋಣಿಕೊಪ್ಪ ಕಾವೇರಿ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಕುಟ್ಟಂಡ ಜಿ.ಉತ್ತಪ್ಪ, ಶ್ರೀರಂಗಪಟ್ಟಣ ಪರಿವರ್ತನಾ ಶಾಲೆ ಹಾಗೂ ಅಂತರಾಷ್ಟ್ರೀಯ ತರಬೇತುದಾರರಾದ ಡೀನ್ ಆರ್.ಎ.ಚೇತನ್ ರಾಮ್…

ಇಂದಿನಿಂದ ಕೊಡಗಿಗೆ ಪ್ರವಾಸಿಗರ ನಿಷೇಧ ತೆರವು
ಕೊಡಗು

ಇಂದಿನಿಂದ ಕೊಡಗಿಗೆ ಪ್ರವಾಸಿಗರ ನಿಷೇಧ ತೆರವು

September 10, 2018

ಮಡಿಕೇರಿ: ಜಿಲ್ಲೆಯಾದ್ಯಂತ ಮಳೆಯ ಕಾರ್ಮೋಡ ಕರಗಿ ನೇಸರನ ಆಗಮನವಾಗಿದ್ದು, ಸಂಪೂರ್ಣ ಸ್ತಬ್ಧಗೊಂಡಿದ್ದ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಚಿಗುರೊಡೆಯುವ ಲಕ್ಷಣ ಕಂಡು ಬರುತ್ತಿದೆ. ಜಿಲ್ಲೆಗೆ ಪ್ರವಾಸಿಗರ ಆಗಮನಕ್ಕೆ ಜಿಲ್ಲಾಡಳಿತ ಹೇರಿದ್ದ ನಿರ್ಬಂಧವನ್ನು ಸೆ.10ರಿಂದ ಜಾರಿಗೆ ಬರುವಂತೆ ಸಡಿಲಿಸಿದ್ದು, ಪ್ರವಾಸೋದ್ಯಮವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದವರಿಗೆ ಇದರಿಂದ ತುಸು ನೆಮ್ಮದಿ ದೊರಕಿದಂತಾಗಿದೆ. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ನಿರ್ಬಂಧದ ಕುರಿತು ವಿಶೇಷ ಸಭೆಯನ್ನು ಸೆ.7ರಂದು ನಡೆಸಲಾಗಿದ್ದು, ಅಧಿಕಾರಿ ಗಳ ಸಲಹೆ-ಸೂಚನೆ ಅನ್ವಯ ಸೆ.9ವರೆಗೆ ಪ್ರವಾಸಿಗರ ಆಗಮನಕ್ಕೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿ ಆದೇಶ…

ಉತ್ತರ ಅಮೇರಿಕದ ವಾರ್ಷಿಕ ಕೊಡವ ಕೂಟ: ಕೊಡಗಿನ ಪುನರ್ ನಿರ್ಮಾಣಕ್ಕೆ ರೂ.35 ಲಕ್ಷ ಸಂಗ್ರಹಿಸಿದ ಸದಸ್ಯರು
ಕೊಡಗು

ಉತ್ತರ ಅಮೇರಿಕದ ವಾರ್ಷಿಕ ಕೊಡವ ಕೂಟ: ಕೊಡಗಿನ ಪುನರ್ ನಿರ್ಮಾಣಕ್ಕೆ ರೂ.35 ಲಕ್ಷ ಸಂಗ್ರಹಿಸಿದ ಸದಸ್ಯರು

September 10, 2018

ಮೈಸೂರು: ಉತ್ತರ ಅಮೇ ರಿಕದ ವಾರ್ಷಿಕ ಕೊಡವ ಕೂಟವು (ಸಮ್ಮೇಳನ) ದಕ್ಷಿಣ ಕೆರೋಲಿನ (South Carolina) ದ ಮಿರ್ಟಲ್ ಬೀಚ್‍ನಲ್ಲಿ ಇತ್ತೀಚೆಗೆ ನಡೆಯಿತು. ಅಂದಹಾಗೆ ಮಿರ್ಟಲ್ ಬೀಚನ್ನು ಜಗತ್ತಿನ ಗಾಲ್ಫ್ ರಾಜಧಾನಿ ಎಂದೂ ಕರೆಯಲಾಗುತ್ತದೆ. ಮಿರ್ಟಲ್ ಬೀಚ್‍ನ Double Tree Resort by Hilton ನಲ್ಲಿ 370ಕ್ಕೂ ಹೆಚ್ಚು ಕೊಡವರು ಈ ಎರಡು ದಿನಗಳ ಕೂಟದಲ್ಲಿ ಭಾಗವಹಿಸಿದ್ದರು.ಕೊಡಗಿನ ಸಾಂಪ್ರದಾಯಿಕ ಅಕ್ಕಿ ತಿನಿಸು ಆದ ‘ಕಡಂಬುಟ್ಟು’ವನ್ನು ಹದ ಮಾಡಿ ತಯಾರಿಸುವುದರ ಮೂಲಕ ಒಂದು ದಿವಸ ಮುಂಚೆಯೇ ಈ ಎರಡು…

ಕೊಡಗಿನಲ್ಲಿ ಸ್ಥಳಾಂತರಗೊಂಡ ಅನಾಥ ಪ್ರಾಣಿಗಳಿಗೆ ಸ್ವಯಂಸೇವಕರ ಸಹಾಯಹಸ್ತ
ಕೊಡಗು

ಕೊಡಗಿನಲ್ಲಿ ಸ್ಥಳಾಂತರಗೊಂಡ ಅನಾಥ ಪ್ರಾಣಿಗಳಿಗೆ ಸ್ವಯಂಸೇವಕರ ಸಹಾಯಹಸ್ತ

September 10, 2018

ಕುಶಾಲನಗರ: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಾವಿರಾರು ಕುಟುಂಬಗಳು ಮನೆ, ಮಠ ಕಳೆ ದುಕೊಂಡು ಆಶ್ರಯವಿಲ್ಲದಂತಾಗಿರುವುದಲ್ಲದೆ, ನೂರಾ ಜಾನುವಾರುಗಳು ಸ್ಥಳಾಂತರಗೊಂಡಿವೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಮತ್ತು ವಿವಿಧ ಸಾಮಾ ಜಿಕ ಸಂಘಟನೆಗಳ ಸ್ವಯಂ ಸೇವಕರು ಪರಿಹಾರ ಕೇಂದ್ರಗಳಲ್ಲಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಪ್ರಾಣಿ ಸಂರಕ್ಷಣಾ ಎನ್‍ಜಿಓಗಳು ಸ್ಥಳಾಂತರಗೊಂಡ ಪ್ರಾಣಿಗಳನ್ನು ರಕ್ಷಿಸಿ, ಅವು ಗಳಿಗೆ ಸೌಕರ್ಯ ನೀಡುವಲ್ಲಿ ಸರ್ವ ಪ್ರಯತ್ನ ಮಾಡುತ್ತಿವೆ. ಅನಾಥವಾದ ಸಾಕು ಪ್ರಾಣಿಗಳು ಮತ್ತು ಜಾನುವಾರುಗಳಿಗೆ ಆಶ್ರಯ, ಆಹಾರ ನೀಡುವುದರ ಜೊತೆಗೆ, ಗಾಯಗೊಂಡ…

ಕೊಡಗಿನಲ್ಲಿ ಬಂದ್ ಇಲ್ಲ: ಖಾಸಗಿ ಬಸ್ ಸಂಚಾರ ಸ್ಥಗಿತ
ಕೊಡಗು

ಕೊಡಗಿನಲ್ಲಿ ಬಂದ್ ಇಲ್ಲ: ಖಾಸಗಿ ಬಸ್ ಸಂಚಾರ ಸ್ಥಗಿತ

September 10, 2018

ಮಡಿಕೇರಿ:  ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್ ಮತ್ತು ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ನಿರ್ಧಾರಕ್ಕೆ ಕೊಡಗು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಜಿಲ್ಲಾ ಕಾಂಗ್ರೆಸ್ ಮತ್ತು ಬಿಜೆಪಿ ಕೊಡಗು ಜಿಲ್ಲೆಯಲ್ಲಿ ಬಂದ್‍ಗೆ ತಮ್ಮ ಬೆಂಬಲವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಆದರೆ, ಜೆಡಿಎಸ್ ಮಾತ್ರ ಪ್ರತಿಭಟನೆ ಮಾಡುವ ಮೂಲಕ ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸುವುದಾಗಿ ಹೇಳಿಕೊಂಡಿದೆ. ಕೊಡಗು ಜಿಲ್ಲೆಯಲ್ಲಿ ಅತೀವೃಷ್ಟಿ, ಪ್ರವಾಹ, ಭೂ ಕುಸಿತದಿಂದ…

ಮಹಿಳೆ ಮೇಲೆ ಹಲ್ಲೆ ಯತ್ನ; ಆರೋಪಿಗಳ ಬಂಧನ
ಕೊಡಗು

ಮಹಿಳೆ ಮೇಲೆ ಹಲ್ಲೆ ಯತ್ನ; ಆರೋಪಿಗಳ ಬಂಧನ

September 10, 2018

ವಿರಾಜಪೇಟೆ: ವಿ.ಪೇಟೆ ಬಳಿಯ ಕಲ್ಲುಬಾಣೆಯ ಯುವಕರಿಬ್ಬರು ಅಲ್ಲಿನ ಮನೆ ಯೊಂದಕ್ಕೆ ನುಗ್ಗಿ ಮನೆಯ ಯಜಮಾನಿಯನ್ನು ಎಳೆದಾಡಿ ದಾಂಧಲೆ ನಡೆಸಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾರೆ. ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭ ಅಲ್ಲಿನ ಸುಬ್ರಮಣಿ ಎಂಬುವರ ಪುತ್ರ ಪ್ರಕಾಶ್(27) ಹಾಗೂ ಶಿವಣ್ಣ ಎಂಬುವರ ಪುತ್ರ ಮಿಥನ್(17) ಎಂಬಿಬ್ಬರು ಆಮೀನಾ ಒಂಟಿಯಾಗಿರುವುದನ್ನು ತಿಳಿದು ಮನೆಯ ಒಳಗೆ ನುಗ್ಗಿ ಮಹಿಳೆಯನ್ನು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ವಿರಾಜಪೇಟೆ ನಗರ ಠಾಣೆ ಪೊಲೀಸರಿಗೆ ಆಮೀನಾ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಪ್ರಕಾಶ್…

1 128 129 130 131 132 187
Translate »