ಕೊಡಗಿನಲ್ಲಿ ಶೆಡ್‍ಗಳಿಗೆ ಕುಸಿದ ಬೇಡಿಕೆ
ಕೊಡಗು

ಕೊಡಗಿನಲ್ಲಿ ಶೆಡ್‍ಗಳಿಗೆ ಕುಸಿದ ಬೇಡಿಕೆ

September 12, 2018

ಮಡಿಕೇರಿ: ಭಾರಿ ಮಳೆಯಿಂದ ಮನೆ ಕಳೆದೊಕೊಂಡವರಿಗೆ ಸಂಯೋಜಿತ ಸಾಮಾಗ್ರಿಗಳ ತಂತ್ರಜ್ಞಾನವನ್ನು ಬಳಸಿ ನೂತನ ಮನೆಗಳನ್ನು ನಿರ್ಮಿಸಿಕೊಡಲಾಗುವುದೆಂದು ವಿಶೇಷ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದ್ದು, 2 ರೂಂಗಳುಳ್ಳ ಪ್ರಾಯೋಗಿಕ ಮನೆಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅನುಮತಿ ನೀಡಿದ್ದಾರೆ. ಈಗಾ ಗಲೇ ನಿರ್ಮಿಸಿರುವ ಶೆಡ್‍ಗಳಲ್ಲಿ ವಾಸಿಸಲು ಜನರು ಹಿಂದೇಟು ಹಾಕುತ್ತಿರುವ ಕಾರಣ ನೂತನ ತಂತ್ರಜ್ಞಾನ ಹಾಗೂ ವಸ್ತುಗಳನ್ನು ಬಳಸಿ ಮನೆಗಳನ್ನು ನಿರ್ಮಿ ಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಈ ಮನೆಗಳಿಗೆ ಬಳಸುವ ವಸ್ತುಗಳು ಪ್ರಾಕೃತಿಕ ವಿಕೋಪಗಳನ್ನು ತಡೆದುಕೊಳ್ಳುವ ಸಾಮಥ್ರ್ಯದ ಜೊತೆಗೆ ಗೆದ್ದಲು ಮುಕ್ತವಾಗಿದ್ದು, ಮಡಿಕೇರಿ ಹಾಗೂ ಸೋಮವಾರ ಪೇಟೆಯ ಮಾದಾಪುರ ಹಾಗೂ ಕೆ.ನಿಡುಗಾಣೆಯಲ್ಲಿ ಪ್ರಾಯೋಗಿಕವಾಗಿ ಇಂತಹ ಮನೆಗಳ ನಿರ್ಮಾಣ ಮಾಡಲಾಗುವುದು ಎಂದರು.

ಬೆಂಗಳೂರಿನ ಎನ್‍ಎಎಲ್ ಸಂಸ್ಥೆಯ ನಿವೃತ್ತ ವಿಜ್ಞಾನಿ ಹಾಗೂ ಸಂಯೋಜಿತ ವಸ್ತುಗಳ ಸೊಸೈಟಿ ಕಾರ್ಯ ನಿರ್ವಾಹಣಾ ಅಧಿಕಾರಿ ಆರ್. ಗೋಪಾಲನ್ ಮನೆಗಳ ನಿರ್ಮಾಣ ಕಾಮಗಾರಿ ಉಸ್ತು ವಾರಿ ನೋಡಿಕೊಳ್ಳಲಿದ್ದಾರೆ.

ನೂತನ ತಂತ್ರಜ್ಞಾನ ಬಳಸಿ ಒಂದು ತಿಂಗಳೊಳಗೆ ಗುಣಮಟ್ಟದ ನೂತನ ಮನೆಗಳನ್ನು ನಿರ್ಮಿಸಲಾಗುವುದು. ಈ ಸಂಬಂಧ ನೆಲಗಳನ್ನು ಸಮತಟ್ಟಾಗಿ ಮಾಡುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದು, ಸ್ಥಳೀಯ ಹವಾಮಾನಕ್ಕೆ ಹೊಂದುವಂತೆ 2 ಬೆಡ್ ರೂಂ, ಹಾಲ್ ಹಾಗೂ ಅಡುಗೆ ಮನೆ ಹೊಂದಿರುತ್ತವೆ. ಮನೆಗಳ ನಿರ್ಮಾಣಕ್ಕೆ ಲಘು ವಿಮಾನಗಳನ್ನು ಬಳಸಿ ವಸ್ತುಗಳನ್ನು ಸಾಗಿಸಿ ಉತ್ತಮ ದರ್ಜೆಯ ವಸ್ತುಗಳನ್ನು ಬಳಸಿ ಮನೆಗಳನ್ನು ನಿರ್ಮಿಸ ಲಾಗುವುದು ಎಂದು ಅವರು ಹೇಳಿದರು.

ಮುಂದುವರಿದ ದೇಶಗಳಲ್ಲಿ ಈಗಾಗಲೇ ಇಂತಹ ಮನೆಗಳನ್ನು ನಿರ್ಮಿಸ ಲಾಗಿದ್ದು, ಸಾಂಪ್ರದಾಯಿಕವಾಗಿ ಬಳ ಸುವ ಇಟ್ಟಿಗೆ, ಕಬ್ಬಿಣ, ಮರಳಿನಿಂದ ಮುಕ್ತವಾಗಿರುತ್ತವೆ. 3 ದಿನದಲ್ಲಿ ಒಂದು ಮನೆಯನ್ನು ನಿರ್ಮಿಸಬಹುದು. ಈ ಗ್ಲಾಸ್ ಫೈಬರ್ ಹಾಗೂ ಅಗ್ನಿ ಅವಘಡ ತಡೆದುಕೊಳ್ಳಬಲ್ಲ ವಸ್ತುಗಳನ್ನು ಇಂತಹ ಮನೆಗಳ ನಿರ್ಮಾಣದಲ್ಲಿ ಬಳಸಲಾಗುವುದು.

ಈ ಮೊದಲು ಇಂದಿರಾ ಕ್ಯಾಂಟಿನ್‍ಗೆ ಬಳಸಲಾಗಿರುವ ಮಾದರಿ ಸಾಮಾಗ್ರಿ ಬಳಸಿ ಮನೆಗಳ ನಿರ್ಮಾಣಕ್ಕೆ ಸರಕಾರ ಮುಂದಾಗಿತ್ತು. ಆದರೆ ಅಲ್ಲಿ ಸಿಮೆಂಟ್ ಇಟ್ಟಿಗೆ ಹಾಗೂ ಬೀಮ್‍ಗಳನ್ನು ಬಳಸಿರುವುದು ಅತಿಯಾದ ತೂಕ ಹೊಂದಿವೆ. ಇಂತಹ ಮನೆಗಳ ನಿರ್ಮಾಣ ಮಾಡಿದರೆ ಇವುಗಳ ಬಾರವನ್ನು ತಡೆದು ಕೊಳ್ಳುವ ಶಕ್ತಿ ಮಣ್ಣಿಗೆ ಇಲ್ಲ. ಹಾಗಾಗಿ ಸಂಯೋಜಿತ ಸಾಮಾಗ್ರಿ ತಂತ್ರಜ್ಞಾನ ಬಳಸಿ ಮನೆಗಳನ್ನು ನಿರ್ಮಿಸಲಾಗುವುದು.

ಗೋಪಾಲನ್ ನೇತೃತ್ವದ ಸಮಿತಿ ಈಗಾಗಲೇ ಕೊಡಗಿನ ಹಲವು ಭಾಗÀ ಗಳಿಗೆ ಭೇಟಿ ನೀಡಿದ್ದು, ಈಗಾಗಲೇ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ನಿರ್ಮಿ ಸಿರುವ ಮನೆಗಳ ಮಾದರಿಯಲ್ಲಿ ಕೊಡಗಿ ನಲ್ಲಿ ಅಲ್ಲಿನ ಸ್ಥಳೀಯ ಹವಾಮಾನಕ್ಕೆ ತಕ್ಕಂತೆ ನಿರ್ಮಾಣ ಕಾರ್ಯಕೈಗೆತ್ತಿಕೊಳ್ಳ ಲಾಗುವುದು ಎಂದು ಅವರು ತಿಳಿಸಿದ್ದಾರೆ.

Translate »