ಅಕ್ರಮ ಮರ ಸಾಗಾಣಿಕೆ; 4 ವಾಹನ, 20 ಲಕ್ಷ ಮೌಲ್ಯದ ಮರ ವಶ, ಮೂವರ ಸೆರೆ
ಕೊಡಗು

ಅಕ್ರಮ ಮರ ಸಾಗಾಣಿಕೆ; 4 ವಾಹನ, 20 ಲಕ್ಷ ಮೌಲ್ಯದ ಮರ ವಶ, ಮೂವರ ಸೆರೆ

September 16, 2018

ಗೋಣಿಕೊಪ್ಪಲು: ಅಕ್ರಮ ಮರ ಸಾಗಾಟ ಆರೋಪದಡೀ ನಾಲ್ಕು ವಾಹನ ಸೇರಿದಂತೆ ಅಂದಾಜು 20 ಲಕ್ಷ ಮೌಲ್ಯದ ಮಾಲು ವಶ ಪಡಿಸಿಕೊಂಡಿದ್ದು, ನಾಲ್ವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದು, ಮೂವರನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿ ಸೆರೆಗೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳ ತಂಡ ಮಂಗಳವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 1 ಲಾರಿ, 1 ಮಜ್ದಾ, 1 ಕ್ರೈನ್, 1 ಜೀಪು ವಶ ಪಡಿಸಿಕೊಳ್ಳಲಾಗಿದ್ದು, ಆರೊಪಿಗಲಾದ ನಾಚಪ್ಪ, ವಿಜಯ್, ರಾಜ ಎಂಬುವವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಧನಂಜಯ್ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ.

ಟಿ. ಶೆಟ್ಟಿಗೇರಿ ಗ್ರಾಮದ ನಾಚಪ್ಪ ಎಂಬುವವರ ಆವರಣದಲ್ಲಿ ಹೆಬ್ಬಲಸು ಮರಗಳ ನಾಟ ಸಾಗಾಟಕ್ಕೆ ಮುಂದಾಗಿತ್ತು. ಈ ಸಂಧರ್ಭ ದಾಳಿ ನಡೆಸಿದ ತಂಡ 11.068 ಘನ ಮೀಟರ್ ಹೆಬ್ಬಲಸು ಮರ ವಶ ಪಡಿಸಿಕೊಳ್ಳಲಾಗಿದೆ. 3 ಲಕ್ಷ ಮೌಲ್ಯ ಮರ ಹಾಗೂ ವಾಹನ ಸೇರಿದಂತೆ ಒಟ್ಟು 20 ಲಕ್ಷ ಮೌಲ್ಯ ಮಾಲು ವಶ ಪಡಿಸಿಕೊಂಡಿದ್ದಾರೆ.

ಡಿಸಿಎಫ್ ಮರಿಯಾ ಕ್ರೈಸ್ತರಾಜ್, ಎಸಿಎಫ್ ಶ್ರೀಪತಿ ಮಾರ್ಗದರ್ಶನ ದಲ್ಲಿ ಆರ್‍ಎಫ್‍ಒ ಗಂಗಾಧರ್, ಉಪವಲಯ ಅರಣ್ಯಾಧಿಗಳಾದ ಮೂರ್ತಿ, ರಾಕೇಶ್, ಅರಣ್ಯ ರಕ್ಷಕ ಚೇತನ್‍ಕುಮಾರ್, ಸಂಜಯ್ ಪಾಲ್ಗೊಂಡಿದ್ದರು.

Translate »