ಕೊಡಗಲ್ಲಿ ಕುಸಿದ ಪ್ರವಾಸೋದ್ಯಮ
ಕೊಡಗು

ಕೊಡಗಲ್ಲಿ ಕುಸಿದ ಪ್ರವಾಸೋದ್ಯಮ

September 23, 2018

ಮಡಿಕೇರಿ: ಕೇವಲ ಎರಡು ತಿಂಗಳ ಹಿಂದೆ ಕೊಡಗು ಜಿಲ್ಲೆ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿತ್ತು. ದಕ್ಷಿಣ ಭಾರತದ ನಂಬರ್ ಒನ್ ಪ್ರವಾಸಿ ತಾಣವಾಗಿ ಕೊಡಗು ಜಿಲ್ಲೆ ಪ್ರವಾಸಿ ಭೂಪಟದಲ್ಲಿ ಗುರುತಿಸಿಕೊಂಡಿತ್ತು.. ಹೀಗಾಗಿ 2018ರ ಮೊದಲ ಆರು ತಿಂಗಳಲ್ಲೇ ಜಿಲ್ಲೆಗೆ ಬರೋ ಬ್ಬರಿ 18 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು.

ಆದರೆ ಆಗಸ್ಟ್ ತಿಂಗಳಿಂದ ಜಿಲ್ಲೆಯ ಪ್ರವಾಸೋದ್ಯಮದ ಪರಿಸ್ಥಿತಿಯೇ ಬದಲಾ ಗಿದೆ. ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗಿನತ್ತ ಪ್ರವಾಸಿಗರು ಮುಖ ಮಾಡುವ ಧೈರ್ಯ ತೋರುತ್ತಿಲ್ಲ. ಪ್ರಮುಖ ಪ್ರವಾಸಿ ತಾಣಗಳಾದ ದುಬಾರೆ, ನಿಸರ್ಗಧಾಮ, ರಾಜಾಸೀಟ್, ಇರ್ಪು ಫಾಲ್ಸ್, ಮಲ್ಲಳ್ಳಿ ಜಲಪಾತ, ಹಾರಂಗಿ ಸೇರಿದಂತೆ ಎಲ್ಲಿಗೂ ಪ್ರವಾಸಿಗರು ಕಾಲಿಡುತ್ತಿಲ್ಲ. ಬೆರಳೆಣಿಕೆಯ ಯುವಕರು ಮಾತ್ರ ಧೈರ್ಯ ಮಾಡಿ ಜಿಲ್ಲೆಯ ಕಡೆ ಆಗಮಿಸುತ್ತಿದ್ದು, ಭೂ ಕುಸಿತವಾದ ಸ್ಥಳಗಳಿಗೆ ತೆರಳುವ ಸಾಹಸ ಮಾಡುತ್ತಿದ್ದಾರೆ.

ಪ್ರವಾಸೋದ್ಯಮ ಕುಸಿತದಿಂದಾಗಿ ಪ್ರತಿ ನಿತ್ಯ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದು, ಕೊಟ್ಯಾಂತರ ರೂಪಾಯಿ ಬಂಡವಾಳ ಹೂಡಿ ಪ್ರವಾಸೋದ್ಯಮ ಆರಂ ಭಿಸಿದ್ದ ನೂರಾರು ಮಂದಿ ಇದೀಗ ಗ್ರಾಹಕರಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಬಹಳಷ್ಟು ಹೋಟೆಲ್‍ಗಳು, ಹೋಂ ಸ್ಟೇಗಳು ತಮ್ಮ ನೌಕರರನ್ನು ಮನೆಗೆ ಕಳುಹಿಸಿದೆ.

ಮಡಿಕೇರಿಯ ರಾಜಾಸೀಟ್‍ಗೆ ಪ್ರತಿ ವಾರ ಸರಾಸರಿ 5 ಸಾವಿರ ಮಂದಿ ಭೇಟಿ ನೀಡುತ್ತಿದ್ದರು. ವಾರಾಂತ್ಯದ ರಜೆ ದಿನಗಳಲ್ಲಿ ನಗರದೊಳಗೆ ಕಾಲಿಡಲೂ ಸಾಧ್ಯವಾಗುತ್ತಿರ ಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರವಾ ಸಿಗರ ಸಂಖ್ಯೆ ದಿನಕ್ಕೆ 50 ದಾಟುತ್ತಿಲ್ಲ. ಅಬ್ಬಿಫಾಲ್ಸ್ ಮತ್ತು ಮಾಂದಲ ಪಟ್ಟಿ ರಸ್ತೆ ಕುಸಿದಿರುವುದರಿಂದ ಈ ಪ್ರದೇಶಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ದಸರಾ ರಜೆ ವೇಳೆಗಾದರೂ ಪ್ರವಾಸೋದ್ಯಮ ಚೇತ ರಿಸಿಕೊಳ್ಳಬಹುದೇ ಎಂದು ಪ್ರವಾಸೋದ್ಯಮಿ ಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಘಟಿಸಿದ ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆಗೆ ಪ್ರವಾಸಿಗರ ಆಗಮನಕ್ಕೆ ಈ ಹಿಂದೆ ಜಿಲ್ಲಾಡಳಿತ ನಿಷೇದ ಹೇರಿತ್ತು. ಆ ಬಳಿಕ ಮಳೆ ಮತ್ತು ನೆರೆ ಪರಿಸ್ಥಿತಿ ತಳಿಗೊಂಡ ಬಳಿಕ ನಿಷೇದವನ್ನು ಹಿಂಪಡೆಯಲಾಗಿತ್ತು. ಆದರೆ ಪ್ರವಾಸಿಗರ ಸ್ವರ್ಗವಾಗಿ ಗುರುತಿಸಿಕೊಂಡಿದ್ದ ಕಾವೇರಿ ತವರಿನ ಕಡೆ ಪ್ರವಾಸಿಗರು ಬೆನ್ನು ತಿರುಗಿಸಿದ್ದಾರೆ. ಹೀಗಾಗಿ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.

Translate »