4,000 ಕ್ವಿಂಟಾಲ್ ಅಕ್ಕಿ ಗೋಡೌನ್ ಸೇರಿಲ್ವಂತೆ!
ಚಾಮರಾಜನಗರ

4,000 ಕ್ವಿಂಟಾಲ್ ಅಕ್ಕಿ ಗೋಡೌನ್ ಸೇರಿಲ್ವಂತೆ!

September 23, 2018

ಕೊಳ್ಳೇಗಾಲ:  ಆಹಾರ ಇಲಾಖೆಯಿಂದ ಕೊಳ್ಳೇಗಾಲ ಟಿಎಪಿಸಿಎಂಎಸ್‍ಗೆ ಕಳುಹಿಸಲಾಗಿದ್ದ 4,000 ಕ್ವಿಂಟಾಲ್ ಅಕ್ಕಿಯು ಗೋಡೌನ್ ತಲುಪಿಲ್ಲ. ಈ ಸಂಬಂಧ ಕೊಳ್ಳೇಗಾಲ ಟಿಎಪಿಸಿಎಂಎಸ್‍ನಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದ್ದು, ಇದರಲ್ಲಿ ಹಿರಿಯ ಹಾಗೂ ಕಿರಿಯ ಅಧಿಕಾರಿ ಗಳು ಭಾಗಿಯಾಗಿದ್ದಾರೆ ಎಂಬುದು ತನಿಖಾಧಿಕಾರಿಗಳ ತನಿಖೆ ವೇಳೆಯಲ್ಲಿ ಬೆಳಕಿಗೆ ಬಂದಿದೆ.

ನಾಲ್ವರು ತಹಶೀಲ್ದಾರ್‍ರು ಹಾಗೂ ಉಪವಿಭಾಗಾಧಿಕಾರಿ ಫೌಜಿಯ್ ತರನ್ನಮ್ ಅವರ ನೇತೃತ್ವದಲ್ಲಿ ಗುರುವಾರ ಕೊಳ್ಳೇಗಾಲ ಟಿಎಪಿಸಿಎಂಎಸ್‍ಗೆ ತೆರಳಿದ ತನಿಖಾಧಿಕಾರಿಗಳ ತಂಡ ಪರಿಶೀಲನೆ ನಡೆ ಸಿದಾಗ ಅವ್ಯವಹಾರ ನಡೆದಿರುವ ಬಗ್ಗೆ ತಿಳಿದು ಬಂದಿದೆ.

ಚಾಮರಾಜನಗರದಿಂದ ಹೊರಟ 4,500 ಕ್ವಿಂಟಾಲ್ ಅಕ್ಕಿ ಕೊಳ್ಳೇಗಾಲ ಟಿಎಪಿಸಿಎಂಎಸ್ ಗೋಡೌನ್‍ಗೆ ಬಂದಿಲ್ಲ. ಇದರಲ್ಲಿ ಜಿಲ್ಲಾ ಹಾಗೂ ತಾಲೂಕು ಹಂತದ ಆಹಾರ ಇಲಾಖೆಯ ಪಾತ್ರ ಇದೆ ಎಂದು ಸಾರ್ವ ಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಏನಿದು ಪ್ರಕರಣ?: ಎಂಟು ತಿಂಗಳ ಹಿಂದೆ ಆಹಾರ ಪದಾರ್ಥ ವಿತರಣೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆ ದಿದೆ. ಈ ಬಗ್ಗೆ ಕಂದಾಯ ಇಲಾಖೆ ತನಿ ಖೆಗೂ ಆದೇಶಿಸಿತ್ತು. ಹಿಂದಿನ ಜಿಲ್ಲಾಧಿಕಾರಿ ರಾಮು ಅವರು ಪ್ರಕರಣ ಮುಚ್ಚುವ ಪ್ರಶ್ನೆ ಇಲ್ಲ ಎಂದಿದ್ದರು. ಈ ಬೆನ್ನಲ್ಲೆ ರಾಮು ಅವರ ವರ್ಗಾವಣೆಯಾಯಿತು. ಬಳಿಕ ತನಿಖೆ ನಿಧಾನ ವಾಗಿ ಸಾಗುವ ಜೊತೆಗೆ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ 12ಕ್ಕೂ ಹೆಚ್ಚು ನ್ಯಾಯ ಬೆಲೆ ಅಂಗ ಡಿಗೆ 3 ತಿಂಗಳಿಂದ ಆಹಾರ ಪದಾರ್ಥ ಸರಿಯಾಗಿ ತಲುಪದೆ ದುರ್ಬಳಕೆ ಮಾಡಿ ಕೊಳ್ಳಲಾಗಿದೆ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಆರೋಪಿಸಿದರು.

ಕಂದಾಯ ಇಲಾಖಾಧಿಕಾರಿಗಳು ಪಡಿತರ ವಿತರಿಸದ ಲೊಕ್ಕನಹಳ್ಳಿಯ 2 ನ್ಯಾಯಬೆಲೆ ಅಂಗಡಿಗೂ ಸಹಾ ಇತ್ತಿಚೆಗೆ ಬೀಗ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು. ಬಡವರಿಗೆ ವಿತರಿಸ ಬೇಕಿದ್ದ ಪಡಿತರ ಆಹಾರ ಪದಾರ್ಥಗಳಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ನಡೆದಿದೆ ಎಂದು ಸಾರ್ವಜನಿಕರು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ಚರ್ಚೆಸುತ್ತಿದ್ದಾರೆ.

ಏನೇನು ನಾಪತ್ತೆ?: ಪ್ರಕರಣ ಸಂಬಂಧ ಕೊಳ್ಳೇಗಾಲ ಟಿಎಪಿಸಿಎಂಎಸ್ ಗೋಡೌನ್ ನಲ್ಲಿ ದಾಸ್ತಾನಿದ್ದ 900ಕ್ವಿಂಟಾಲ್ ಅಕ್ಕಿ ಹಾಗೂ 500 ಕ್ವಿಂಟಾಲ್ ಸಕ್ಕರೆ ನಾಪತ್ತೆಯಾಗಿರುವ ಬಗ್ಗೆ ಅಧಿಕಾರಿಗಳ ತನಿ ಖೆಯ ವೇಳೆ ತಿಳಿದು ಬಂದಿದೆ.

ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಧಮ್ಕಿ: ಕೊಳ್ಳೇಗಾಲ ಆಹಾರ ಇಲಾಖೆಯ ಅಧಿಕಾರಿಗಳೇ ಇತ್ತೀಚೆಗೆ ಲೊಕ್ಕನಹಳ್ಳಿ ಹೋಬಳಿಯ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ ಕರೆದಿದ್ದು 3 ತಿಂಗಳ ಆಹಾರ ಪದಾರ್ಥದ ಬದಲಿಗೆ 1 ತಿಂಗಳ ಆಹಾರ ನೀಡಬೇಕು. 3 ತಿಂಗಳು ನೀಡಿದಂತೆ ದಾಖಲೆ ಸೃಷ್ಠಿ ಮಾಡಿಕೊಡಬೇಕು ಎಂದು ಧಮ್ಕಿ ಹಾಕಿದ್ದರು ಎನ್ನಲಾಗಿದೆ. ಇದಕ್ಕೆ ಕೆಲವು ನ್ಯಾಯಬೆಲೆ ಅಂಗಡಿ ಮಾಲೀಕರು ನೀವು ಏನಾದ್ರೂ ಮಾಡಿಕೊಳ್ಳಿ ನಾವು ಅಂಜಲ್ಲ ಎಂದು ಸಭೆಯಿಂದ ಹೊರ ಬಂದಿದ್ದನ್ನು ನ್ಯಾಯಬೆಲೆ ಅಂಗಡಿ ಮಾಲೀಕರೇ ‘ಮೈಸೂರು ಮಿತ್ರ’ನಿಗೆ ಸ್ಪಷ್ಟಪಡಿಸಿದ್ದಾರೆ.

ಆಹಾರ ಇಲಾಖೆ ಬಲ್ಲ ಮೂಲಗಳ ಪ್ರಕಾರ ನ್ಯಾಯಬೆಲೆ ಅಂಗಡಿಗೆ ಜೂನ್ ತಿಂಗಳ ತನಕ ರೇಷನ್ ನೀಡಿ ಆಗಸ್ಟ್ ತನಕ ನೀಡಲಾಗಿದೆ ಎಂಬ ಸುಳ್ಳು ದಾಖಲೆ ಸೃಷ್ಠಿಸಲಾಗಿದೆ ಎಂಬ ಅಂಶವೂ ಸಹಾ ಚರ್ಚೆಯಾಗುತ್ತಿದೆ.

ಈ ಸಂಬಂಧ ‘ಮೈಸೂರು ಮಿತ್ರ’ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನಮ್ ಅವರನ್ನು ಸಂಪರ್ಕಿಸಿದಾಗ ಅವರು, ಈ ಬಗ್ಗೆ ತನಿಖೆ ನಡೆ ಸಲಾಗಿದ್ದು, ಕೂಡಲೇ ಉನ್ನತ ಅಧಿಕಾರಿ ಗಳಿಗೆ ಪ್ರಾಥಮಿಕ ವರದಿ ನೀಡಲಾಗುವುದು. ಅಲ್ಲದೇ ಈ ವಿಚಾ ರದ ಬಗ್ಗೆ ಉನ್ನತ ಅಧಿಕಾರಿಗಳು ಪ್ರತಿಕ್ರಿಯೆ ನೀಡುವವರೆಗೂ, ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು. ಅಂದರಂತೆ ಆಹಾರ ಇಲಾಖೆ ಉಪ ನಿರ್ದೇಶಕ ರಾಚಪ್ಪ (ಮೊ. 94484 24665) ಅವರನ್ನು ಎಷ್ಟೇ ಸಂಪರ್ಕಿಸಿ ದರು ಕರೆ ಸ್ವೀಕರಿಸುತ್ತಿಲಿಲ್ಲ.

Translate »