ಕ್ಷೇತ್ರವನ್ನು ಮಾದರಿಯನ್ನಾಗಿಸಲು ಶ್ರಮಿಸುವೆ; ನಿರಂಜನ್ ಕುಮಾರ್
ಚಾಮರಾಜನಗರ

ಕ್ಷೇತ್ರವನ್ನು ಮಾದರಿಯನ್ನಾಗಿಸಲು ಶ್ರಮಿಸುವೆ; ನಿರಂಜನ್ ಕುಮಾರ್

September 23, 2018

ಗುಂಡ್ಲುಪೇಟೆ: ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜನತೆ ನನ್ನ ಮೇಲೆ ಬಹಳಷ್ಟು ಭರವಸೆಯಿಟ್ಟುಕೊಂಡಿದ್ದು, ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಕ್ಷೇತ್ರವನ್ನು ಮಾದರಿಯನ್ನಾಗಿಸುತ್ತೇನೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಅಭಿ ನಂದನೆ ಸ್ವೀಕರಿಸಿ ಮಾತನಾಡಿ, ಚುನಾ ವಣೆಯಲ್ಲಿ ಜಯಗಳಿಸಿದ ನಂತರ ತಾವು ಪ್ರತಿ ದಿನವೂ ಕ್ಷೇತ್ರದಲ್ಲಿ ಪ್ರವಾಸ ಮಾಡು ತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹದಗೆ ಟ್ಟಿರುವ ರಸ್ತೆಗಳು, ಮೂಲಸೌಕರ್ಯಗಳ ಕೊರತೆ, ಕಾಡಂಚಿನ ಗ್ರಾಮಗಳಲ್ಲಿ ದಿನ ನಿತ್ಯವೂ ಮಾನವ ವನ್ಯಜೀವಿ ಸಂಘರ್ಷ ಗಳ ಬಗ್ಗೆ ವಿವರ ಸಂಗ್ರಹಿಸುತ್ತಿದ್ದೇನೆ.

ಇಂತಹ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಹಂತ ಹಂತವಾಗಿ ಪರಿಹರಿಸಲಾ ಗುವುದು. ತೀವ್ರ ಹದಗೆಟ್ಟ ಬೆಳವಾಡಿ-ಬೊಮ್ಮಲಾಪುರ ರಸ್ತೆ ನಿರ್ಮಾಣಕ್ಕೆ 2 ಕೋಟಿ ರೂಪಾಯಿ ಬಿಡುಗಡೆ ಮಾಡ ಲಾಗಿದೆ. ಚರಂಡಿ ನಿರ್ಮಾಣ, ಎಸ್‍ಸಿ, ಎಸ್‍ಟಿ ಬಡಾವಣೆಗಳಿಗೆ ಕಾಂಕ್ರೀಟ್ ರಸ್ತೆ, ಅಗತ್ಯವಿರುವಲ್ಲಿ ಸಮುದಾಯ ಭವನ ಗಳು, ಅಂಗನವಾಡಿ ಕೇಂದ್ರಗಳ ನಿರ್ಮಾ ಣಕ್ಕೆ ಚಾಲನೆ ನೀಡಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಜಾರಿ ಯಾಗಲಿದೆ ಎಂದರು. ಇತ್ತೀಚೆಗೆ ಕಾಡಂ ಚಿನ ಗ್ರಾಮಗಳಿಗೆ ಅರಣ್ಯಾಧಿಕಾರಿಗಳೊಂ ದಿಗೆ ಭೇಟಿ ನೀಡಿ ರೈತರ ಸಮಸ್ಯೆಗಳ ಪರಿ ಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದ ಜನತೆಯ ನಿರೀಕ್ಷೆಯನ್ನು ಈಡೇರಿಸಲು ಪ್ರಾಮಾ ಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಪುರಸಭೆ ಸದಸ್ಯ ಎನ್. ಗೋವಿಂದರಾಜನ್, ತಾಪಂ ಮಾಜಿ ಸದ ಸ್ಯರಾದ ವೀರಪ್ಪ, ಸಿ.ಮಹದೇವಪ್ರಸಾದ್, ಹುಂಡೀಪುರ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮಹದೇವಪ್ರಸಾದ್, ಗ್ರಾಪಂ ಅಧ್ಯಕ್ಷ ರವ ಳಯ್ಯ, ಹಿರಿಯ ಮುಖಂಡರಾದ ಸಿ.ಎಂ. ಶಿವಮಲ್ಲಪ್ಪ, ಎಚ್.ಮಂಜುನಾಥ್, ನಾಗ ರಾಜು ಸೇರಿದಂತೆ ಹಲವರು ಇದ್ದರು.

Translate »