ಸರ್ಕಾರಿ ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ಆರಂಭಿಸಲು ಚಿಂತನೆ
ಚಾಮರಾಜನಗರ

ಸರ್ಕಾರಿ ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ಆರಂಭಿಸಲು ಚಿಂತನೆ

September 23, 2018

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ಎನ್.ಮಹೇಶ್ ಹೇಳಿಕೆ
ಕೊಳ್ಳೇಗಾಲ:  ‘ಸರ್ಕಾರಿ ಶಾಲೆಯಲ್ಲಿ ಆಂಗ್ಲಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಸಬೇಕೆಂದು ಸರ್ಕಾರ ತೀರ್ಮಾನಿಸಿದ್ದು, ಪ್ರಾಥಮಿಕ ಶಿಕ್ಷಣದಿಂದಲೇ ಜಾಗತಿಕ ಯುಗದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಕೌಶಲ್ಯ ಕಲಿ ಸುವ ಶಿಕ್ಷಣ ನೀಡಲು ಚಿಂತಿಸಲಾಗಿದೆ. ಸಂವಹನ ಪ್ರಕ್ರಿಯೆ ಕಲಿಸುವ ಸಂಬಂಧ 3 ತಿಂಗಳಿಂದ ಅವಿರತ್ನ ಪ್ರಯತ್ನ ನಡೆಯು ತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.ನಗರದಲ್ಲಿ ನಡೆದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರುಣೆ, ಅನುಕಂಪ ಹಾಗೂ ತಲೆತಗ್ಗಿ ಸುವ ಮೂಲಕ ಕೆಲಸ ದೊರೆಯುವುದಿಲ್ಲ ಎಂಬ ವಾಸ್ತವ ಸತ್ಯವನ್ನು ನಿರುದ್ಯೋಗಿ ಗಳು ಅರಿಯಬೇಕು. ಗಣ್ಯರು ಹೇಳಿದರೆ ಕೆಲಸ ದೊರೆಯುತ್ತದೆ. ಹಣ ನೀಡಿದರೆ ಕೆಲಸ ಆಗುತ್ತೆ ಎಂಬುದು ಸುಳ್ಳು. ಹಾಗಾಗಿ, ಎಲ್ಲರು ಸ್ಪರ್ಧಾತ್ಮಕ ಪರೀಕ್ಷೆಗೆ ಕಠಿಣ ಅಭ್ಯಾಸ ನಡೆಸಬೇಕು ಎಂದರು.

ನಾವು ಖಾಸಗಿಕರಣ ಹಾಗೂ ಜಾಗತಿಕರಣ ವಿರೋಧಿಸಿ ಆಯಸ್ಸು ಕಳೆ ದುಕೊಳ್ಳುವ ಬದಲು, ಇವುಗಳನ್ನು ಸವಾ ಲಾಗಿ ಸ್ವೀಕರಿಸುವ ವ್ಯಕ್ತಿಗಳಾಗಿ ರೂಪು ಗೊಳ್ಳಬೇಕಿದೆ. ಪ್ರಸ್ತುತ ನಿರುದ್ಯೋಗ ಸಮಸ್ಯೆ ದೊಡ್ಡ ಸಮಸ್ಯೆಯಾಗಿದ್ದು, ಇದರ ನಿವಾರಣೆಗೆ ಖಾಸಗಿ ವಲಯದಲ್ಲಿರುವ ಶೇ. 90ರಷ್ಟು ಉದ್ಯೋಗ ಪಡೆಯುವುದು ನಿರುದ್ಯೋಗಿಗಳ ಗುರಿಯಾಗಬೇಕಿದೆ. ಸರ್ಕಾರ ಸ್ವಯಂ ಉದ್ಯೋಗಕ್ಕಾಗಿ ನೀಡುವ ಗುರಿ ಪ್ರಮಾಣದ ಬಿಡಿಗಾಸು ಅವರ ಕಲ್ಯಾಣಕ್ಕೆ ಸಾಲದು ಎಂದು ಸಚಿವರು ವಿಷಾಧಿಸಿದರು.
ವಾಟಾಳು ಮಠಾಧ್ಯಕ್ಷ ಸಿದ್ದಲಿಂಗ ಶಿವಾ ಚಾರ್ಯ ಸ್ವಾಮೀಜಿ, ರೆ.ಫಾ.ಲಾಜರಸ್, ಬಿಎಸ್ಪಿ ರಾಜ್ಯಾಧ್ಯಕ್ಷ ಹರಿರಾಂ, ತಮಿಳು ನಾಡು ಉಸ್ತುವಾರಿ ಶ್ರೀನಿವಾಸ್, ಚೆನ್ನಾ ಲಿಂಗನಹಳ್ಳಿ ಜೇತವನ ಬೌದ್ಧ ವಿಹಾರದ ಮನೋರಕ್ಖಿತ ಬಂತೇಜಿ, ಜಿಲ್ಲಾಧ್ಯಕ್ಷ ಮಾದಪ್ಪ, ಮುಖಂಡರಾದ ಕೇಶವ ಮೂರ್ತಿ, ಕರಾಟೆ ಸಿದ್ದರಾಜು, ಮಾದೇಶ್ ಉಪ್ಪಾರ್, ಶಿವನಂಜಪ್ಪ ಇದ್ದರು.

Translate »