ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ
ಚಾಮರಾಜನಗರ

ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

September 23, 2018

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ
ಚಾಮರಾಜನಗರ:  ‘ಸಮಾಜದ ದೈನಂದಿನ ಬದುಕಿಗೆ ಅವಶ್ಯವಿರುವ ಅನೇಕ ವಸ್ತು ಸಲಕರಣೆಗಳನ್ನು ಪರಿಣತಿಯಿಂದ ತಯಾರಿಸಿಕೊಡುವ ವಿಶ್ವಕರ್ಮ ಸಮು ದಾಯ ತಾಂತ್ರಿಕವಾಗಿ ಮೂಲಪುರುಷರು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳ ಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಸಮುದಾಯ ಜನರ ಬದುಕು ಉದ್ಯೋಗ ಸೇರಿದಂತೆ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಈ ಹಿಂದಿನಿಂದಲೂ ಸಿದ್ಧ ಪಡಿಸುವ ಕಾಯಕವನ್ನು ಶ್ರದ್ಧೆಯಿಂದ ನಿರ್ವ ಹಿಸುತ್ತಾ ಬಂದಿದೆ. ಸಮಾಜದ ಮೂಲ ಎಂಜಿನಿಯರ್‍ಗಳು ವಿಶ್ವಕರ್ಮರೇ ಆಗಿ ದ್ದಾರೆ. ಇವರ ಕಸುಬು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.

ಬದಲಾದ ಸ್ಪರ್ಧಾತ್ಮಕ ಹಾಗೂ ತಂತ್ರ ಜ್ಞಾನ ಯುಗದಲ್ಲಿ ಕಸುಬಿಗೆ ಸಂಬಂಧಿಸಿ ದಂತೆ ಆಧುನಿಕತೆಗೆ ಅನುಗುಣವಾಗಿ ಪರಿ ಣತಿ ಜ್ಞಾನ ಹೊಂದಬೇಕಿದೆ. ಆ ಮೂಲಕ ಹೊಸ ವಿಷಯಗಳನ್ನು ಸಹ ಮನದಟ್ಟು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವಕರ್ಮ ಜನರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವೂ ಸಹ ಇದೆ. ಸುಮಾರು 65 ಕೋಟಿ ರೂ. ನೆರವನ್ನು ಇದುವರೆಗೆ ನಿಗಮ ದಿಂದ ನೀಡಲಾಗಿದೆ. ಉದ್ಯೋಗ, ವ್ಯಾಸಂಗ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ನಿಗಮ ದಿಂದ ನೆರವು ದೊರೆತಿದೆ ಎಂದು ತಿಳಿಸಿದರು.

ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಂಸದ ಆರ್. ಧ್ರುವನಾರಾಯಣ ಅವರು, ವಿಶ್ವಕರ್ಮ ಸಮುದಾಯ ಇಡೀ ಜಗತ್ತಿಗೆ ಅತ್ಯಮೂಲ್ಯ ಕೊಡುಗೆ ನೀಡಿದೆ. ದೇಶ-ವಿದೇಶಗಳ ಗಮನ ಸೆಳೆದಿರುವ ಬೇಲೂರು, ಹಳೇ ಬೀಡು, ಅಜಂತ, ಎಲ್ಲೋರ, ಐಹೊಳೆ, ಪಟ್ಟದಕಲ್ಲು ಸೇರಿದಂತೆ ವಿವಿಧ ಭಾಗ ಗಳಲ್ಲಿ ಅದ್ಭುತ ಕೆತ್ತನೆ ಕೆಲಸವನ್ನು ನಿರ್ವ ಹಿಸಿವೆ. ಪ್ರವಾಸೋದ್ಯಮಕ್ಕೆ ನೆರವಾಗುವ ದಿಸೆಯಲ್ಲಿ ವಿಶ್ವಕರ್ಮರ ಪಾತ್ರ ಬಹು ದೊಡ್ಡದು ಎಂದರು.

ಹಿಂದುಳಿದ ಸಮಾಜದಲ್ಲಿ ಒಂದಾಗಿ ರುವ ವಿಶ್ವಕರ್ಮ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಹಿಂದುಳಿದ ವರ್ಗಗಳು ಮೇಲೆ ಬರಲು ಸಾಧ್ಯವಾಗುತ್ತದೆ. ವ್ಯಾಸಂಗಕ್ಕೆ ಪೂರಕ ವಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗಿದೆ. ಪ್ರತಿ ಗ್ರಾಮದಲ್ಲಿಯೂ ಶಾಲೆ ತೆರೆಯಲಾಗಿದೆ. ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಇನ್ನಿತರ ಮುಖ್ಯ ಅವಶ್ಯಕತೆ ಗಳನ್ನು ಪೂರೈಸಲಾಗುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾವಂತ ರಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇ ಶಕ ಮಂಟೆಲಿಂಗಚಾರ್ ಮಾತನಾಡಿ, ಜಗ ತ್ತಿನ ಸಂಸ್ಕøತಿ, ನಾಗರಿಕತೆಗೆ ವಿಶ್ವಕರ್ಮರ ಕೊಡುಗೆ ಅತ್ಯಂತ ಶ್ರೇಷ್ಠವಾಗಿದೆ. ಭಾರತದ ಶಿಲ್ಪಿಗಳ ಗ್ರಂಥವನ್ನು ವಿದೇಶಗಳಲ್ಲಿಯೂ ಸಹ ಅಧ್ಯಯನ ಮಾಡಲಾಗುತ್ತಿದೆ. ಪ್ರತಿಭಾ ವಂತರಾಗಿರುವ ವಿಶ್ವಕರ್ಮರು ಒಗ್ಗೂಡಿ ತಾಂತ್ರಿಕ, ವೈಜ್ಞಾನಿಕ ಉದ್ದಿಮೆಗಳ ಸ್ಪರ್ಧೆ ನಡುವೆಯೂ ಮುಖ್ಯವಾಹಿನಿಗೆ ಬರ ಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಕೃಷ್ಣ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ಜೆ.ಯೋಗೇಶ್, ಸದಸ್ಯರಾದ ಚನ್ನಪ್ಪ, ಕೆ.ಪಿ.ಸದಾಶಿವಮೂರ್ತಿ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿ ಕುಮಾರ್, ನಗರಸಭೆ ಸದಸ್ಯರಾದ ಭಾಗ್ಯಮ್ಮ, ನೀಲಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಸಿಇಓ ಡಾ.ಕೆ.ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ, ಸಮಾಜದ ಮುಖಂಡ ಸೋಮಣ್ಣಾ ಚಾರ್ ಇತರರು ಉಪಸ್ಥಿತರಿದ್ದರು.

Translate »