ವಯೋವೃದ್ಧ ಪತಿಯಿಂದಲೇ ಪತ್ನಿ ಬರ್ಬರ ಹತ್ಯೆ
ಹಾಸನ

ವಯೋವೃದ್ಧ ಪತಿಯಿಂದಲೇ ಪತ್ನಿ ಬರ್ಬರ ಹತ್ಯೆ

September 23, 2018

ಬೇಲೂರು: ವೃದ್ಧನೋರ್ವ ಪತ್ನಿಯನ್ನೇ ಹತ್ಯೆಗೈದಿರುವ ಘಟನೆ ತಾಲೂಕಿನ ಕಲ್ಲು ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರಾಮಮ್ಮ(60) ಹತ್ಯೆಗೀಡಾದವರು. ಹಂತಕ ಪತಿ ಮೂಡ್ಲುಗಿರಿ ಬೋವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸಾರದಲ್ಲಿ ಮೂರ್ನಾಲ್ಕು ತಿಂಗಳಿಂದಲೂ ಜಗಳ ನಡೆಯುತ್ತಿತ್ತು. ಇಂದು ಸಂಭವಿಸಿದ ಮಾತಿನ ಚಕಮಕಿ ತಾರಕ್ಕೇರಿ ವೃದ್ಧ ಮೂಡ್ಲುಗಿರಿ ಮಚ್ಚಿನಿಂದ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಹಳೇಬಿಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »