ವಿಶ್ವಕರ್ಮ ಜನಾಂಗದಿಂದ ಜಗತ್ತಿಗೆ ವಿಶೇಷ ಕೊಡುಗೆ
ಚಾಮರಾಜನಗರ

ವಿಶ್ವಕರ್ಮ ಜನಾಂಗದಿಂದ ಜಗತ್ತಿಗೆ ವಿಶೇಷ ಕೊಡುಗೆ

November 20, 2018

ಚಾಮರಾಜನಗರ: ತಾಲೂಕಿನ ಅಂಕನಶೆಟ್ಟಿಪುರ ಕ್ವಾಟ್ರಸ್‍ನಲ್ಲಿ ನಡೆದ ಶ್ರೀ ಮಹಾಗಣಪತಿ ಶ್ರೀ ಕಾಳಿಕಾಂಬ ಹಾಗೂ ಮಂಟೆಸ್ವಾಮಿ ಕಂಡಾಯ ನೂತನ ವಿಗ್ರಹ ಪ್ರತಿಷ್ಠಾಪನಾ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯನ್ನು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನತೀರ್ಥಮಹಾಸ್ವಾಮೀಜಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವಿಶ್ವಕರ್ಮ ಜನಾಂಗವು ಇಡೀ ವಿಶ್ವಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪಂಚಶಿಲ್ಪಕಲೆ ಮೂಲಕ ತಮ್ಮ ಕಾಯಕದ ನಿಷ್ಠೆಯನ್ನು ಮಾಡುತ್ತಿದ್ದಾರೆ.

ದೇವಸ್ಥಾನಗಳು ನಿಜವಾದ ಶ್ರದ್ಧಾಭಕ್ತಿ ಕೇಂದ್ರವಾಗಬೇಕು ಎಂದು ಕಿವಿಮಾತು ಹೇಳಿದರು. ದೇವಸ್ಥಾನಗಳ ಮೂಲಕ ಜನರು ಶಾಂತಿ ನೆಮ್ಮದಿಯನ್ನು ಕಂಡುಕೊಂಡು ತಮ್ಮ ಜೀವನ ವನ್ನು ನಡೆಸಬೇಕು. ಗ್ರಾಮಗಳಲ್ಲಿರುವ ಅಶಾಂತಿಯನ್ನು ಹೋಗಲಾಡಿಸಬೇಕು ಎಂದರು. ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ. ಮಲ್ಲಿಕಾರ್ಜುನಪ್ಪ ಮಾತನಾಡಿ, ವಿಶ್ವಕರ್ಮ ಜನಾಂಗವು ನಮ್ಮ ಭಾಗದಲ್ಲಿ ಹಿಂದುಳಿದ ಜನಾಂಗವಾದರೂ ಅವರು ಮಾಡುವ ಕಾಯಕ ಮಾತ್ರ ದೊಡ್ಡದು ಎಂದು ಅಭಿ ಪ್ರಾಯಪಟ್ಟ ಅವರು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲೂ ಮುಂದೆ ಬರಬೇಕು ಎಂದು ಹೇಳಿದರು.

ಯಾವುದೇ ಸಮುದಾಯ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದೆ ಬರಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಇದರಿಂದ ಪತ್ರಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು ಎಂದು ಕರೆ ನೀಡಿದರು.ದಿವ್ಯಸಾನಿಧ್ಯ ವಹಿಸಿದ್ದ ಹರವೆ ಮಠದ ಸರ್ಪಭೂಷಣ ಸ್ವಾಮೀಜಿ ಮಾತನಾಡಿ, ನಿಜವಾದ ಭಕ್ತಿ ಮತ್ತು ಶ್ರದ್ಧೆ ಎಲ್ಲಿ ಇರುತ್ತದೆಯೋ ಅಲ್ಲಿ ಭಗವಂತ ನೆಲಸಿರುತ್ತಾನೆ. ಮುಂದಿನ ದಿನಗಳಲ್ಲಿ ಯುವಕರು ಸಂಘಟಿತರಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಡುಕನಪುರದÀ ಶ್ರೀ ಷಡಕ್ಷರಿ ಸ್ವಾಮೀಜಿ, ಶ್ರೀ ಇಮ್ಮಡಿ ಮುರುಗರಾಜೇಂದ್ರಸ್ವಾಮೀಜಿ, ಶ್ರೀ ಚನ್ನಬಸವಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರು, ತಾಲೂಕು ಪಂಚಾಯಿತಿ ಸದಸ್ಯೆ ಕಾಂತಾ ಮಣಿ, ಗ್ರಾಪಂ ಅಧ್ಯಕ್ಷ ಸೋಮಣ್ಣ, ವಿಶ್ವಕರ್ಮ ಜನಾಂಗದ ಜಿಲ್ಲಾಧ್ಯಕ್ಷ ಹಂಡರಕಳ್ಳಿ ಸೋಮಣ್ಣ, ಮೈಮುಲ್ ಮಾಜಿ ನಿರ್ದೇಶಕ ಹೆಚ್.ಎಸ್.ಬಸವರಾಜು, ಗ್ರಾಪಂ ಸದಸ್ಯರಾದ ಶೈಲಜಾ ಉಮೇಶ್, ಭಾಗ್ಯಲಕ್ಷ್ಮಿ ಮಹೇಶ್, ಮಹದೇವಯ್ಯ, ಶಿಲ್ಪಿಗಳಾದ ಮುತ್ತುಚಾರ್ಯ, ಪ್ರಭುಸ್ವಾಮಿ, ರಾಜಮೂರ್ತಿ, ಪರಮೇಶ್ವರಚಾರ್ಯ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶ್ರೀ ಗಣಪತಿ, ಶ್ರೀ ಕಾಳಿಕಾಂಬ ಅಮ್ಮನವರ ನೂತನ ವಿಗ್ರಹ ಮೂರ್ತಿಗಳನ್ನು ಮಂಗಳ ವಾದ್ಯದೊಡನೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಹಾಗೂ ದೇವಸ್ಥಾನದಲ್ಲಿ ವಿಶ್ವಕರ್ಮ ಹೋಮ, ದುರ್ಗಾಹೋಮ, ನವಗ್ರಹ ಪೂಜೆ, ಪೂರ್ಣಾಹುತಿ ಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳು ನಡೆದವು. ಹಾಗೂ ಕಂಡಾಯ ಮೆರವಣಿಗೆ ನಡೆಯಿತು. ನಂತರ ನೆರೆದಿದ್ದ ಭಕ್ತರಿಗೆ ಮಹಾ ಪ್ರಸಾದವನ್ನು ವಿತರಣೆ ಮಾಡಲಾಯಿತು.

Translate »