ಕೊಡಗು ಸಂತ್ರಸ್ತ ವಿದ್ಯಾರ್ಥಿಗಳಿಗೆ ನೆರವು
ಕೊಡಗು

ಕೊಡಗು ಸಂತ್ರಸ್ತ ವಿದ್ಯಾರ್ಥಿಗಳಿಗೆ ನೆರವು

September 24, 2018

ಗೋಣಿಕೊಪ್ಪಲು:  ಹುಬ್ಬಳ್ಳಿಯಲ್ಲಿ ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾ ರ್ಥಿಗಳು ಕೊಡಗಿನ ಸಂತ್ರಸ್ತರಾಗಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಗ್ರಹಿಸಿದ್ದ ಅಗತ್ಯ ವಸ್ತು, ಹಣವನ್ನು (ನಿವೃತ್ತ) ಸುಬೇದಾರ್ ಮೇಜರ್ ಬೋಪಣ್ಣ ಅವರ ಮೂಲಕ ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಗೆ ಹಸ್ತಾಂತರಿಸಿದರು.

ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ 130 ಸಂತ್ರಸ್ತ ವಿದ್ಯಾರ್ಥಿಗಳಿಗೆ ಬೇಕಾದ ಪೆನ್, ಪುಸ್ತಕಗಳು, ಕುರ್ಚಿಗಳು, ಶಾಲೆಯಲ್ಲಿ ಅಡುಗೆ ತಯಾರಿಕೆಗೆ ಬೇಕಾದ ಪಾತ್ರೆಗಳನ್ನು ವಿತರಿಸಲಾಯಿತು.

Translate »