ಹಿಂದಿನ ಚಳವಳಿಗೂ ಇಂದಿನ ಚಳವಳಿಗೂ ಬಹಳ ವ್ಯತ್ಯಾಸ: ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರ ಯಶಸ್ವಿ
ಚಾಮರಾಜನಗರ

ಹಿಂದಿನ ಚಳವಳಿಗೂ ಇಂದಿನ ಚಳವಳಿಗೂ ಬಹಳ ವ್ಯತ್ಯಾಸ: ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರ ಯಶಸ್ವಿ

September 24, 2018

ಚಾಮರಾಜನಗರ: ಮೂರು ದಶಕಗಳು ಹಿಂದಿನ ಚಳವಳಿಗೂ, ಇಂದಿನ ಚಳವಳಿಗೂ ಬಹಳ ವ್ಯತ್ಯಾಸಗಳು ಇವೆ ಎಂದು ಬಹುಭಾಷಾ ಚಿತ್ರ ನಟ ಪ್ರಕಾಶ್ ರೈ ಅಭಿಪ್ರಾಯಪಟ್ಟರು.

ಚಾಮರಾಜನಗರ ತಾಲೂಕಿನ ಹೊಂಡರ ಬಾಳು ಗ್ರಾಮದ ಬಳಿ ಇರುವ ಅಮೃತ ಭೂಮಿಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ 3 ದಿನಗಳ ಕಾಲ ಆಯೋಜಿಸಿದ್ದ ಯುವ ರೈತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳ ಜತೆ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

1980ರಲ್ಲಿ ನಡೆಯುತ್ತಿದ್ದ ರೈತ ಚಳವಳಿಗೂ ಈಗ ನಡೆಯುತ್ತಿರುವ ಚಳವಳಿಗೂ ಅಜಗಜಾಂತರ ವ್ಯತ್ಯಾಸ ಇದೆ. ಚಳವಳಿ ಎಂದರೆ ಯಾರ ಮೇಲೂ ದಂಡೆತ್ತಿ ಹೋಗುವ ಸೈನ್ಯವಲ್ಲ. ರೈತ ಚಳವಳಿ ಎನ್ನುವುದು ಬದುಕಿನ ರೀತಿ, ಸ್ವಾಭಿಮಾನ ಕಟ್ಟಿಕೊಡುವ ಚಳವಳಿ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯುವ ರೈತರಾದ ತಾವುಗಳು ಇಂದು 50 ಜನ ಇದ್ದಿರಿ. ಮುಂದಿನ ದಿನಗಳಲ್ಲಿ ನಿಮ್ಮ ಜೊತೆ 500 ಜನ, 1000 ಜನ ಬರ ಬಹುದು. ಯಾರನ್ನೂ ಬಲವಂತವಾಗಿ ಚಳವಳಿಗೆ ಕರೆತರಬಾರದು. ಸ್ವಯಂ ಪ್ರೇರ ಣೆಯಿಂದ ಚಳವಳಿಗೆ ಬಂದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಇಂತಹ ಚಳ ವಳಿ ಅಗತ್ಯತೆ ಇದೆ ಎಂದರು.

ಭೂಮಿ ನಮಗೆ ಬೇಕಾದಷ್ಟನ್ನು ಕೊಡು ತ್ತದೆ. ಆದರೆ ಜನರ ದುರಾಸೆಗೆ ಬೇಕಾದಷ್ಟನ್ನು ಕೊಡುವುದಿಲ್ಲ. ನಮ್ಮ ದುರಾಸೆಯಿಂದ ಭೂಮಿಯಿಂದ ಜಾಸ್ತಿ ಆಪೇಕ್ಷಿ ಸುತ್ತಿದ್ದೇವೆ. ನಾನು 52 ದೇಶಿ ಹಸುಗಳನ್ನು ಸಾಕಿದ್ದೇನೆ. 4 ವರ್ಷಗಳಿಂದ ನನ್ನ ಜಮೀನಿಗೆ ರಾಸಾಯನಿಕ ಪದಾ ರ್ಥಗಳನ್ನು ಬಳಸಿಲ್ಲ ಎಂದು ಪ್ರಕಾಶ್ ರೈ ತಿಳಿಸಿದರು.

ಈಗಿನ ಎಲ್ಲಾ ಸಮಸ್ಯೆಗಳಿಗೆ ನಾವೇ ಕಾರಣ. ನಮ್ಮ ಯೋಚನೆ, ಆತುರ, ತಿಳುವಳಿಕೆ, ಸೋಮಾರಿತನ ಇದಕ್ಕೆಲ್ಲಾ ಕಾರಣ. ಭೂಮಿಗೆ ರಾಸಾಯನಿಕ ಪದಾ ರ್ಥಗಳನ್ನು ಬಳಸಿರುವುದರಿಂದ ಅದರ ಫಲವತ್ತತೆ ಹಾಳಾಗಿದೆ. ಈ ತಪ್ಪನ್ನು ಸರಿ ಪಡಿಸಬೇಕಾಗಿದೆ. ತಾಳ್ಮೆಯಿಂದ, ದೂರ ದೃಷ್ಟಿಯಿಂದ ಯೋಚಿಸಬೇಕಾಗಿದೆ. ಪ್ರಯೋ ಗಗಳು ಸೋಲಬಹುದು. ಆದರೆ ಪ್ರಯತ್ನ ಯಾವಾಗಲೂ ಸೋಲಬಾರದು ಎಂದು ಯುವ ರೈತರಿಗೆ ಧೈರ್ಯ ಬೆಳೆಸಿದರು. ರೈತ ಚಳವಳಿ ಬದುಕಿನ ರೀತಿಯನ್ನು ತೋರಿಸುತ್ತದೆ. ಇಂತಹ ಯುವ ರೈತರ ಶಿಬಿರಗಳು ಎಲ್ಲಾ ಜಿಲ್ಲೆಗಳಲ್ಲಿ ನಡೆಯ ಬೇಕು. ಇದರ ಅವಶ್ಯಕತೆಯೂ ಸಹ ಇದೆ ಎಂದು ಪ್ರಕಾಶ್ ರೈ ಹೇಳಿದರು.

ಡಾ.ವಾಸು ಜನಶಕ್ತಿ ಅವರು ಮಾತ ನಾಡಿದರು. ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ, ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ರೈತ ಸಂಘದ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಮುಖಂಡ ರಾದ ಶಂಭುಲಿಂಗೇಗೌಡ, ಕೋಲಾರ ನಳಿನಿ, ಬಾಗಲಕೋಟೆ ಮಹೇಶ್ ದೇಶಪಾಂಡೆ, ಚಳ್ಳಕೆರೆ ನವಜ್, ಕೋಲಾರ ಕಾವ್ಯಾಂಜಲಿ ಇತರರು ಹಾಜರಿದ್ದರು.

Translate »