ಭಾರತದಲ್ಲಿ ಮಾಧ್ಯಮಗಳ ವ್ಯವಸ್ಥಿತ ಖರೀದಿ ಕಳವಳಕಾರಿ: ಪ್ರಕಾಶ್ ರೈ
ಮೈಸೂರು

ಭಾರತದಲ್ಲಿ ಮಾಧ್ಯಮಗಳ ವ್ಯವಸ್ಥಿತ ಖರೀದಿ ಕಳವಳಕಾರಿ: ಪ್ರಕಾಶ್ ರೈ

September 23, 2018

ನವದೆಹಲಿ: ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಕೊರತೆ ಇದೆ ಎಂದ ಬಹು ಭಾಷಾನಟ ಪ್ರಕಾಶ್ ರೈ ಅವರು, ದೇಶದಲ್ಲಿ ಮಾಧ್ಯಮಗಳನ್ನು ವ್ಯವ ಸ್ಥಿತವಾಗಿ ಖರೀದಿ ಮಾಡು ತ್ತಿರುವುದು ಕಳವಳಕಾರಿ ವಿಚಾರ ಎಂದು ಶನಿವಾರ ಹೇಳಿದ್ದಾರೆ.
ಪತ್ರಕರ್ತರ ಮೇಲಿನ ಹಲ್ಲೆ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಪ್ರಕಾಶ್ ರೈ ಅವರು, ನಾನು ಅಧಿಕಾರದಲ್ಲಿರು ವವರ ವಿರುದ್ಧ ಮಾತನಾಡಿದಾಗ ಅದನ್ನು ಮಾಧ್ಯಮಗಳು ಪ್ರಕಟಿಸುವುದಿಲ್ಲ ಎಂದರು. ಮಾಧ್ಯಮಗಳನ್ನು ವ್ಯವಸ್ಥಿತವಾಗಿ ಖರೀದಿ ಮಾಡುತ್ತಿರುವ ರೀತಿ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ದ್ವೇಷ ಸಾಧಿಸಲು ಸಹ ಜನರನ್ನು ಖರೀದಿಸಲಾಗುತ್ತಿದೆ ಎಂದ ರಾಷ್ಟ್ರ ಪ್ರಶಸ್ತಿ ವಿಜೇತ ನಟ, ಧೈರ್ಯವಾಗಿ ಅಧಿಕಾರದಲ್ಲಿ ರುವವರನ್ನು ಪ್ರಶ್ನಿಸುವಂತೆ ಪತ್ರಕರ್ತರಿಗೆ ಮನವಿ ಮಾಡಿದರು. ನಾನು ಪತ್ರಿಕಾಗೋಷ್ಠಿ ನಡೆಸಿದಾಗ ಹಲವು ಮಾಧ್ಯಮಗಳು ಹಾಜರಿ ರುತ್ತವೆ. ಆದರೆ ನಾನು ಮಾತನಾಡಿದ ವಿಚಾರದ ಬಗ್ಗೆ ಬರೆಯದಿರುವ ಸಂದರ್ಭಗಳು ನಡೆದಿವೆ ಎಂದು ರೈ ಹೇಳಿದ್ದಾರೆ.

Translate »