ಅವಕಾಶ ಪಡೆದುಕೊಳ್ಳಲು ನಾಯಕತ್ವದ ಗುಣ ಅಗತ್ಯ
ಕೊಡಗು

ಅವಕಾಶ ಪಡೆದುಕೊಳ್ಳಲು ನಾಯಕತ್ವದ ಗುಣ ಅಗತ್ಯ

September 17, 2018

ಗೋಣಿಕೊಪ್ಪಲು: ನಾಯಕತ್ವದ ಗುಣವಿದ್ದರೆ ಅವಕಾಶಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಡೆಚಂಡ ದಿನೇಶ್ ಚಿಟ್ಟಿಯಪ್ಪ ಹೇಳಿದರು.

ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕತಿಕ ಸಂಘವನ್ನು ಉದ್ಘಾಟಿಸಿದ ಅವರು, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಬಗೆಯ ಪ್ರತಿಭೆಗಳು ಅಡಗಿರುತ್ತವೆ. ಇವುಗಳನ್ನು ಹೊರತರುವುದಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿ ಯಾಗುತ್ತವೆ. ವಿದ್ಯಾರ್ಥಿಗಳು ಹಿಂಜರಿಕೆಯನ್ನು ಬಿಟ್ಟು ಮುಕ್ತವಾಗಿ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳ ಬೇಕು. ಈ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಪರಿ ಪೂರ್ಣತೆ ಗಳಿಸಲು ಮುಂದಾಗಬೇಕು ಎಂದರು.

ಉಪನ್ಯಾಸಕ ಡಾ. ಜೆ.ಸೋಮಣ್ಣ ಮಾತನಾಡಿ, ಸಮಯ ಎನ್ನುವಂತಹದ್ದು ನದಿ ಇದ್ದ ಹಾಗೆ. ಸಮಯಕ್ಕೆ ಹೆಚ್ಚು ಮಹತ್ವ ನೀಡಿ ಉತ್ತಮ ಬದುಕನ್ನು ರೂಪಿಸಿ ಕೊಳ್ಳಲು ಮುಂದಾಗಬೇಕು ಎಂದರು. ಪ್ರಾಂಶುಪಾಲ ಎ.ಕೆ.ಪಾರ್ವತಿ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪಂದ್ಯಂಡ ಹರೀಶ್, ಸಾಂಸ್ಕøತಿಕ ಸಮಿತಿ ಸಂಚಾಲಕಿ ಸಬಿತಾ, ಕ್ರೀಡಾ ಸಮಿತಿ ಸಂಚಾಲಕ ತಮ್ಮಯ್ಯ ಹಾಜರಿದ್ದರು. ಗ್ರಂಥಪಾಲಕ ಸಿದ್ದಲಿಂಗಸ್ವಾಮಿ ಸಾಂಸ್ಕøತಿಕ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವೀಕ್ಷಿತಾ ನಿರೂಪಿಸಿದರು. ಯಶೋಧಾ ವಂದಿಸಿದರು.

Translate »