ವಿರಾಜಪೇಟೆಯಲ್ಲಿ ವಾಯ್ಸ್ ಆಫ್ ವಿರಾಜಪೇಟೆ-2018 ಉದ್ಘಾಟನೆ
ಕೊಡಗು

ವಿರಾಜಪೇಟೆಯಲ್ಲಿ ವಾಯ್ಸ್ ಆಫ್ ವಿರಾಜಪೇಟೆ-2018 ಉದ್ಘಾಟನೆ

September 17, 2018

ವಿರಾಜಪೇಟೆ:  ಮಕ್ಕಳ ಪ್ರತಿಭೆ ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶ್ರೀ ಬಸವೇಶ್ವರ ದೇವಾಲಯದ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ‘ವಾಯ್ಸ್ ಆಫ್ ವಿರಾಜಪೇಟೆ’ ಸಂಗೀತ ಸ್ಪರ್ಧೆಯನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಉತ್ತೇಜನ ನೀಡಿದಂತಾಗಿದೆ ಎಂದು ಪುತ್ತೂರು ಬೆಳ್ಳಾರೆಯ ಸಾಹಿತಿ ವೆಂಕಟ ರಮಣ ದೇವಾಲಯದ ಮುಖ್ಯಸ್ಥರು, ಕೃಷಿಕರು ಆದ ಮಣಿಕಾರ ಗೋಪಾಲಕೃಷ್ಣ ಶ್ಯಾನುಭೋಗ್ ಹೇಳಿದರು.

ವಿರಾಜಪೇಟೆ ಪಟ್ಟಣದ ಶ್ರೀ ಬಸವೇ ಶ್ವರ ದೇವಾಲಯದ ಗೌರಿ-ಗಣೇಶ ಉತ್ಸವ ಸಮಿತಿಯಿಂದ ದಿ. ಎನ್.ವೆಂಕಟೇಶ್ ಕಾಮತ್ ಟ್ರಸ್ಟ್‍ನ ಸಹಯೋಗದಲ್ಲಿ ಆಯೋಜಿಸ ಲಾಗಿದ್ದ ‘ವಾಯ್ಸ್ ಆಫ್ ವಿರಾಜಪೇಟೆ-2018’ರ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಗೋಪಾಲಕೃಷ್ಣ ಶ್ಯಾನುಭೋಗ್, ನಂತರ ಮಾತನಾಡುತ್ತ, ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲೂ ಅಡಗಿ ರುತ್ತದೆ. ಸಂಘ ಸಂಸ್ಥೆಗಳು ಆಯೋಜಿ ಸುವ ಇಂತಹ ಕಾರ್ಯಕ್ರಮಗಳಿಂದ ಕಲೆ, ಸಂಗೀತ ಪ್ರತಿಭೆಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಾಧ್ಯ. ಸ್ಪರ್ಧೆಯ ಮೂಲಕ ಯುವಕ ಯುವತಿಯರಲ್ಲಿ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆ ಯನ್ನು ಹೊರ ತರಲು ಉತ್ತಮ ಅವಕಾಶ ದೊರಕಿದಂತಾಗಿದೆ ಎಂದರು.

ಗೌರಿ-ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಎನ್.ಜಿ.ಕಾಮತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಉಚ್ಚ ನ್ಯಾಯಾಲಯದ ಎಂಪ್ಲಾಯಿಸ್ ಅಸೋಸಿಯೇಶನ್ ಅಧ್ಯಕ್ಷ ರಾಮು ಮಾತನಾಡಿ, ಸಂಗೀತ ಕಲೆಗಳಿಂದ ಮನಸ್ಸಿಗೆ ನೆಮ್ಮದಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಎಂದರು. ಉದ್ಯಮಿ ಮಣಿಕಾರ ರಾಜೇಶ್ ಶ್ಯಾನುಭೋಗ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಸಮಿತಿಯ ಜೆ.ಎನ್. ಪುಷ್ಪ ರಾಜ್, ಜೆ.ಎನ್ ಸಂಪತ್ ಕುಮಾರ್ ಉಪಸ್ಥಿ ತರಿದ್ದರು. ಎನ್.ವೆಂಕಟೇಶ್ ಕಾಮತ್ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಎನ್. ರವೀಂದ್ರನಾಥ್ ಕಾಮತ್ ಸ್ವಾಗತಿಸಿ ನಿರೂಪಿಸಿದರು. ಶಿವ ಮೊಗ್ಗದ ಗೀತಾ ಆರ್ಕೆಸ್ಟ್ರಾ ತಂಡದವರು ಸ್ಪರ್ಧಿ ಗಳ ಹಾಡಿಗೆ ಹಿನ್ನಲೆ ಸಂಗೀತ ನೀಡಿದರು.

Translate »