ಸಾಲಬಾಧೆಗೆ ಮಹಿಳೆ ಆತ್ಮಹತ್ಯೆ
ಕೊಡಗು

ಸಾಲಬಾಧೆಗೆ ಮಹಿಳೆ ಆತ್ಮಹತ್ಯೆ

September 7, 2018

ಮಡಿಕೇರಿ: ಖಾಸಗಿ ಹಣಕಾಸು ಸಂಘವೊಂದರಲ್ಲಿ ಮಾಡಿದ್ದ ಸಾಲವನ್ನು ಮರುಪಾವತಿಸಲಾಗದೇ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಮರಗೋಡು ಗ್ರಾಮದಲ್ಲಿ ನಡೆದಿದೆ. ಮರಗೋಡು ನಿವಾಸಿ ಆಶಾ (34) ಎಂಬುವರೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ.

ಆಶಾ ಈ ಹಿಂದೆ ಸಂಘವೊಂದರಿಂದ 2 ಲಕ್ಷ ರೂಪಾಯಿಗಳ ಸಾಲ ಪಡೆದಿದ್ದು, 85 ಸಾವಿರ ರೂಪಾಯಿಗಳನ್ನು ಮರುಪಾವತಿಸಿದ್ದರು. ಉಳಿದ 1.15 ಲಕ್ಷ ರೂಪಾಯಿಗಳ ಸಾಲವನ್ನು ಪಾವತಿಸಲು ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ಮನನೊಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣದ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತೆ ಆಶಾ ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Translate »