ಸುಂಟಿಕೊಪ್ಪ ಶಾಲೆಯಲ್ಲಿ ಸ್ವಚ್ಛತಾ ಶಪಥ ದಿನಾಚರಣೆ
ಕೊಡಗು

ಸುಂಟಿಕೊಪ್ಪ ಶಾಲೆಯಲ್ಲಿ ಸ್ವಚ್ಛತಾ ಶಪಥ ದಿನಾಚರಣೆ

September 3, 2018

ಸುಂಟಿಕೊಪ್ಪ:  ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾ ಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೆರವಿನೊಂದಿಗೆ ಸೇರಿ ಶಾಲಾ ಮಕ್ಕಳಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಬೆಳೆ ಸುವ ದಿಸೆಯಲ್ಲಿ ಶನಿವಾರ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಸ್ವಚ್ಚತಾ ಶಪಥ ದಿನ’ ಆಚರಿಸಲಾಯಿತು.

ಮಕ್ಕಳಿಗೆ ಸ್ವಚ್ಚತೆ ಕುರಿತ ಸಂದೇಶ ನೀಡಿದ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಸೆ.15ರವರೆಗೆ ಶಾಲಾ ಹಂತ ದಲ್ಲಿ ನಡೆಯುವ ‘ಸ್ವಚ್ಚತಾ ಪಖ್ವಾಡ’ ಕಾರ್ಯ ಕ್ರಮದಲ್ಲಿ ಶಾಲಾ ಮಕ್ಕಳಲ್ಲಿ ಪರಿಸರ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬ ಮಗು ವೈಯಕ್ತಿಕವಾಗಿ ಶಾಲೆ, ಸಮುದಾಯ ಹಾಗೂ ಮನೆ ಪರಿಸರವನ್ನು ಸ್ವಚ್ಚವಾಗಿ ಇಟ್ಟು ಕೊಳ್ಳಲು ಪ್ರೇರಪಿಸಬೇಕೆಂದರು.

ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಆರೋಗ್ಯ ಮತ್ತು ನೈರ್ಮಲ್ಯೀಕರಣದ ಬಗ್ಗೆ ಜಾಗೃತಿ ಮೂಡಿಸಬೇಕೆಂದರು. ತಾಪಂ ಸದಸ್ಯೆ ಓಡಿಯ ಪ್ಪನ ವಿಮಲಾವತಿ ಮಾತನಾಡಿ, ವಿದ್ಯಾರ್ಥಿ ಗಳು ವೈಯಕ್ತಿಕ ಶುಚಿತ್ವ ಹಾಗೂ ತನ್ನ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬೇಕೆಂದರು. ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ಉಸ್ತುವಾರಿ ಶಿಕ್ಷಕ ಟಿ.ಜಿ.ಪ್ರೇಮ್ ಕುಮಾರ್ ಮಕ್ಕಳಿಗೆ ಪರಿಸರ ಸ್ವಚ್ಚತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ ವಿದ್ಯಾರ್ಥಿಗಳು ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕೆ ಂದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಬಾಲ ಕೃಷ್ಣ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿ.ಎ.ಗೀತಾ, ತಾಲೂಕು ಪ್ರಾ. ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಎಸ್.ಕೆ. ಸೌಭಾಗ್ಯ, ಗ್ರಾಪಂ ಸದಸ್ಯೆ ನಾಗರತ್ನ, ವಿಜ್ಞಾನ ಶಿಕ್ಷಕಿ ಎಂ.ಎನ್.ಲತಾ ಶಿಕ್ಷಕರು ಇದ್ದರು.

Translate »