ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಸದಸ್ಯರ್ಯಾರು? 233 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬಹಿರಂಗಕ್ಕೆ ಕ್ಷಣಗಣನೆ
ಚಾಮರಾಜನಗರ

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಸದಸ್ಯರ್ಯಾರು? 233 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬಹಿರಂಗಕ್ಕೆ ಕ್ಷಣಗಣನೆ

September 3, 2018

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ 62 ಸ್ಥಾನಗಳ ಪೈಕಿ 60 ಸ್ಥಾನಗಳಿಗೆ ಮತದಾನ ನಡೆದಿದ್ದು, ಮತ ಎಣಿಕಾ ಕಾರ್ಯ ನಾಳೆ (ಸೆ.3) ನಡೆಯ ಲಿದೆ. ಫಲಿತಾಂಶ ಹೊರಬೀಳಲು ಕ್ಷಣ ಗಣನೆ ಆರಂಭವಾಗಿದೆ.

ಚಾಮರಾಜನಗರ ನಗರಸಭೆಯ 31 ಸದಸ್ಯ ಸ್ಥಾನಕ್ಕೆ ಆಯ್ಕೆ ಬಯಸಿ 132 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕೊಳ್ಳೇ ಗಾಲ ನಗರಸಭೆಯ 31 ಸದಸ್ಯ ಸ್ಥಾನದ ಪೈಕಿ 6ನೇ ವಾರ್ಡಿನಿಂದ ಬಿಎಸ್‍ಪಿ ಅಭ್ಯರ್ಥಿ ಗಂಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 9ನೇ ವಾರ್ಡ್‍ನಿಂದ ಬಿಎಸ್‍ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ರಮೇಶ್ ಅಪಘಾತದಲ್ಲಿ ಮೃತ ರಾದ ಹಿನ್ನೆಲೆಯಲ್ಲಿ ಆ ವಾರ್ಡಿನ ಮತ ದಾನವನ್ನು ಮುಂದೂಡಲಾಗಿದೆ. ಉಳಿದ 29 ಸದಸ್ಯ ಸ್ಥಾನಕ್ಕೆ ಆಯ್ಕೆ ಬಯಸಿ 101 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಒಟ್ಟಾರೆ ಈ ಎರಡೂ ನಗರಸಭೆಯ 60 ಸದಸ್ಯ ಸ್ಥಾನಕ್ಕೆ ಒಟ್ಟಾರೆ 233 ಅಭ್ಯರ್ಥಿ ಗಳು ಸ್ಪರ್ಧಿಸಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಏನಾ ಗಲಿದೆ ಎಂಬುದು ಇನ್ನು ಕೆಲವೇ ಗಂಟೆ ಗಳಲ್ಲಿ ಗೊತ್ತಾಗಲಿದೆ.

ಚಾಮರಾಜನಗರ ನಗರಸಭೆಯ ಮತ ಎಣಿಕಾ ಕಾರ್ಯ ನಗರದ ಸರ್ಕಾರಿ ಪಾಲಿ ಟೆಕ್ನಿಕ್ ಕಾಲೇಜಿನಲ್ಲಿ, ಕೊಳ್ಳೇಗಾಲದ ಮತ ಎಣಿಕಾ ಕಾರ್ಯ ಕೊಳ್ಳೇಗಾಲದ ಸರ್ಕಾರಿ ಎಂಜಿಎಸ್‍ವಿ ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ. ನಾಳೆ (ಸೆ.3) ಬೆಳಿಗ್ಗೆ 8 ಗಂಟೆಗೆ ಮತಎಣಿಕಾ ಕಾರ್ಯ ಪ್ರಾರಂಭವಾಗಲಿದೆ. ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ ಬಳಸಿರುವ ಕಾರಣ ಬೆಳಿಗ್ಗೆ 10 ಗಂಟೆಯ ವೇಳೆಗೆ ಪೂರ್ಣ ಫಲಿತಾಂಶ ಬರಬ ಹುದು ಎಂದು ನಿರೀಕ್ಷಿಸಲಾಗಿದೆ.

ಮತ ಎಣಿಕಾ ಕಾರ್ಯಕ್ಕೆ ತಲಾ 8 ಟೇಬ ಲ್‍ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ನಗರ ಸಭೆಗೆ 9 ಮಂದಿ ಮೇಲ್ವಿಚಾರಕರು ಹಾಗೂ 9 ಮಂದಿ ಸಹಾಯಕರನ್ನು ನೇಮಿಸ ಲಾಗಿದೆ. ಒಂದೊಂದು ವಾರ್ಡ್‍ಗೆ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಹೀಗಾಗಿ ಒಮ್ಮೆಗೆ 4 ವಾರ್ಡ್‍ನ ಫಲಿತಾಂಶ ಹೊರ ಬೀಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾ ರಿಯೂ ಆದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮತ ಎಣಿಕಾ ಕಾರ್ಯಕ್ಕೆ ಎಲ್ಲಾ ಸಿದ್ಧತೆ ಗಳನ್ನು ಕೈಗೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕಾ ಕಾರ್ಯ ಪ್ರಾರಂಭವಾಗಲಿದೆ. ಸುಮಾರು 10 ಗಂಟೆ ವೇಳೆಗೆ ಪೂರ್ಣ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. 11 ಗಂಟೆಗೆ ಚುನಾ ವಣೆಯ ಎಲ್ಲಾ ರೀತಿಯ ಪಕ್ರಿಯೆಗಳು ಪೂರ್ಣಗೊಳ್ಳುವ ಸಂಭವ ಇದೆ ಎಂದು ಅವರು ತಿಳಿಸಿದರು.

ಚಾಮರಾಜನಗರ ನಗರಸಭಾ ವ್ಯಾಪ್ತಿ ಯಲ್ಲಿ 26,066 ಪುರುಷರು, 27,641 ಮಹಿಳೆಯರು, ಇತರೆ 7 ಮಂದಿ ಸೇರಿದಂತೆ ಒಟ್ಟು 53,714 ಇದ್ದರು. ಈ ಪೈಕಿ 19,156 ಮಹಿಳೆಯರು ಸೇರಿದಂತೆ ಒಟ್ಟಾರೆ 38, 692 ಮತದಾರರು ಮತ ಚಲಾಯಿಸಿ ದ್ದಾರೆ. ಶೇ.73.49ರಷ್ಟು ಪುರುಷರು, ಶೇ.70.68ರಷ್ಟು ಮಹಿಳೆಯರು (ಒಟ್ಟಾರೆ 72.03) ಹಕ್ಕು ಚಲಾಯಿಸಿದ್ದಾರೆ.

ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯಲ್ಲಿ 20,676 ಪುರುಷರು, 21,212 ಮಹಿಳೆ ಯರು, ಇತರೆ 4 ಮಂದಿ ಸೇರಿದಂತೆ ಒಟ್ಟು 41,892 ಮತದಾರರು ಇದ್ದರು. ಈ ಪೈಕಿ 15,461 ಪುರುಷರು, 15,416 ಮಹಿಳೆ ಯರು ಸೇರಿದಂತೆ ಒಟ್ಟು 30,877 ಮತ ದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ.74.78ರಷ್ಟು ಪುರುಷರು, ಶೇ.72.68 ರಷ್ಟು ಮಹಿಳೆಯರು (ಒಟ್ಟಾರೆ ಶೇ.73.71 ರಷ್ಟು)ಮತದಾನ ಮಾಡಿದ್ದಾರೆ.

ಮೂವರು ಮಾಜಿ ಅಧ್ಯಕ್ಷರತ್ತ ಎಲ್ಲರ ಚಿತ್ತ
ಚಾಮರಾಜನಗರ:  ಚಾಮರಾಜನಗರದ ನಗರಸಭೆಯ 31 ಸದಸ್ಯ ಸ್ಥಾನಕ್ಕೆ 132 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಅಭ್ಯರ್ಥಿಗಳ ಪೈಕಿ ನಗರಸಭೆಯ ಮಾಜಿ ಅಧ್ಯಕ್ಷರಾದ ಎಸ್.ನಂಜುಂಡಸ್ವಾಮಿ, ಶೋಭಾ ಪುಟ್ಟಸ್ವಾಮಿ, ಚೆನ್ನಮ್ಮ, ಮಾಜಿ ಉಪಾಧ್ಯಕ್ಷ ಆರ್.ಎಂ.ರಾಜಪ್ಪ ಪ್ರಮುಖರಾಗಿದ್ದಾರೆ.

ಇವರಲ್ಲದೇ ನಗರಸಭೆಯ ಹಿಂದಿನ ಅವಧಿಯಲ್ಲಿ ಸದಸ್ಯರಾಗಿದ್ದ 11 ಮಂದಿ (ಎಸ್.ನಂಜುಂಡಸ್ವಾಮಿ, ಶೋಭಾ, ಆರ್.ಎಂ.ರಾಜಪ್ಪ ಸೇರಿ) ಪುನರಾಯ್ಕೆ ಬಯಸಿ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇವರೆಲ್ಲರ ರಾಜಕೀಯದ ಭವಿಷ್ಯ ಇನ್ನೂ ಕೆಲವೇ ಕ್ಷಣಗಳಲ್ಲಿ ಬಹಿರಂಗವಾಗಲಿದೆ.

ಮತದಾರರು ಹಳೆ ಮುಖಕ್ಕೆ ಮಣೆ ಹಾಕಿದ್ದಾರೋ, ಹೊಸ ಮುಖವನ್ನು ಬಯಸಿದ್ದಾರೋ, ಚಾಮರಾಜನಗರ ನಗರಸಭೆಯನ್ನು ‘ಕೈ’ ಹಿಡಿಯುತ್ತದೋ ಅಥವಾ ‘ಕಮಲ’ ಅರಳಲಿದೆಯೋ, ಕೊಳ್ಳೇಗಾಲ ನಗರಸಭೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೋ, ಬಿಎಸ್‍ಪಿ ಅಧಿಕಾರ ಹಿಡಿಯುತ್ತದೋ ಅಥವಾ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣ ಆಗುತ್ತದೋ ಎಂಬುದನ್ನು ತಿಳಿಯಲು ಇನ್ನೂ ಕೆಲವೇ ಗಂಟೆಗಳು ಕಾಯಲೇಬೇಕು.

Translate »