ಕೇಂದ್ರೀಯ ವಿದ್ಯಾಲಯಕ್ಕೆ ಪ್ರಸಕ್ತ ಸಾಲಿನಿಂದಲೇ ಹೆಚ್ಚುವರಿ ತರಗತಿಗೆ ಮಂಜೂರಾತಿ
ಚಾಮರಾಜನಗರ

ಕೇಂದ್ರೀಯ ವಿದ್ಯಾಲಯಕ್ಕೆ ಪ್ರಸಕ್ತ ಸಾಲಿನಿಂದಲೇ ಹೆಚ್ಚುವರಿ ತರಗತಿಗೆ ಮಂಜೂರಾತಿ

September 3, 2018

ಚಾಮರಾಜನಗರ: ಚಾಮರಾಜನಗರದ ಕೇಂದ್ರೀಯ ವಿದ್ಯಾ ಲಯದಲ್ಲಿ 2018-19ನೇ ಸಾಲಿನಿಂದಲೇ (ಪ್ರಸಕ್ತ ಸಾಲು) ಜಾರಿಗೆ ಬರುವಂತೆ 1 ರಿಂದ 5ನೇ ತರಗತಿವರೆಗೆ ಹೆಚ್ಚುವರಿ ತರಗತಿಗೆ ಮಂಜೂರಾತಿ ದೊರೆತಿದೆ.

ಈ ಬಗ್ಗೆ ನವದೆಹಲಿಯ ಕೇಂದ್ರೀಯ ವಿದ್ಯಾಲಯದ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದರಿಂದ ಪ್ರತಿ ತರಗತಿಗೆ 40 ವಿದ್ಯಾರ್ಥಿಗಳಂತೆ 1 ರಿಂದ 5ನೇ ತರಗತಿವರೆಗೆ ಒಟ್ಟು 200 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನಡೆಸಲು ಶಾಲೆಯಲ್ಲಿ ಅವಕಾಶ ದೊರೆತಂತೆ ಆಗಿದೆ.

ಚಾಮರಾಜನಗರ ತಾಲೂಕಿನ ಮಾದಾ ಪುರ ಗ್ರಾಮದ ಬಳಿ 16 ಕೋಟಿ ರೂ. ವೆಚ್ಚದಡಿ ಸುಸಜ್ಜಿತವಾದ ಕೇಂದ್ರೀಯ ವಿದ್ಯಾಲಯ ಕಟ್ಟಡವನ್ನು ಕಟ್ಟಲಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಇದೇ ಕಟ್ಟಡ ದಲ್ಲಿ ತರಗತಿಗಳು ಪ್ರಾರಂಭವಾಗಿದೆ. ಈ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಸಂಸದ ಆರ್.ಧ್ರುವನಾರಾಯಣ್, ಕೇಂದ್ರೀಯ ವಿದ್ಯಾಲಯವು ಇದು ವರೆವಿಗೆ ತಾತ್ಕಾಲಿಕ ಕಟ್ಟಡದಲ್ಲಿ ನಡೆಯುತಿತ್ತು. ಈಗ ಸ್ವಂತ ಕಟ್ಟಡ ನಿರ್ಮಾಣ ಆಗಿದೆ. ಈ ಕಟ್ಟಡದಲ್ಲಿ ಎಲ್ಲಾ ಸೌಲಭ್ಯಗಳು ಇದೆ. 1 ರಿಂದ 5ನೇ ತರಗತಿವರೆಗೆ ಇದುವರೆವಿಗೆ ಒಂದು ತರಗತಿಗೆ 40 ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ವಿದ್ಯಾಲಯಕ್ಕೆ ಪೋಷಕರಿಂದ ಬೇಡಿಕೆ ಹೆಚ್ಚಿರುವ ಕಾರಣ ಹಾಗೂ ನೂತನ ಕಟ್ಟಡದಲ್ಲಿ ಎಲ್ಲಾ ರೀತಿಯ ಅನುಕೂಲಗಳ ಇರುವ ಕಾರಣ ಹಾಗೂ ಕೊಠಡಿಗಳು ಹೆಚ್ಚಾಗಿ ರುವ ಕಾರಣದಿಂದ 1 ರಿಂದ 5ನೇ ತರಗತಿವರೆಗೆ ಹೆಚ್ಚುವರಿ ತರಗತಿ (ಒಂದು ಸೆಕ್ಷನ್) ನಡೆಸಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಮಿಕಲ್ಸ್ ಮತ್ತು ಫರ್ಟಿ ಲೈಸರ್ಸ್ ಹಾಗೂ ಸಂಸದೀಯ ವ್ಯವಹಾರ ಗಳ ಕೇಂದ್ರ ಸಚಿವ ಅನಂತಕುಮಾರ್ ಅವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಅನಂತಕುಮಾರ್ ತಕ್ಷಣವೇ ಈ ಬಗ್ಗೆ ಮಂಜೂರಾತಿ ದೊರಕಿಸುವ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಸ್ತುತ 1 ರಿಂದ 9ನೇ ತರಗತಿವರೆಗೆ ಇತ್ತು. ಈಗ 1 ರಿಂದ 5ನೇ ತರಗತಿವರೆಗೆ ತಲಾ ಎರಡು ತರಗತಿಗಳು ನಡೆಸಲು ಅವಕಾಶ ದೊರೆತಿರುವುದರಿಂದ 200 ವಿದ್ಯಾರ್ಥಿ ಗಳಿಗೆ ಅವಕಾಶ ದೊರೆತಂತೆ ಆಗಿದೆ.

Translate »