ಚಾಮರಾಜನಗರ: ನಗರದ ಕೇಂದ್ರೀಯ ವಿದ್ಯಾಲಯದಲ್ಲಿ 2018-19ನೇ ಶೈಕ್ಷಣಿಕ ಸಾಲಿಗೆ 2 ರಿಂದ 5ನೇ ತರ ಗತಿಯ ಪ್ರವೇಶಕ್ಕೆ ಅವಕಾಶವಿದ್ದು, ಆಸಕ್ತರು ನೋಂದಣಿ ಮಾಡಿಸಬಹುದಾಗಿದೆ.
ನಗರದ ಮಾದಾಪುರ ಬಳಿ ಇರುವ ಕೇಂದ್ರೀಯ ವಿದ್ಯಾಲಯದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪ್ರವೇಶಕ್ಕೆ ನೋಂದಾಯಿಸಬಹುದು. ನೋಂದ ಣಿಗೆ ಸೆ.15 ಕಡೆಯ ದಿನವಾಗಿದೆ. ಸಿಬಿಎಸ್‍ಇ ಪಠ್ಯವನ್ನು ಬೋಧಿಸಲಾಗುತ್ತದೆ. ಆಸಕ್ತರು ಉಚಿತವಾಗಿ ನೋಂದಾಯಿಸಬಹು ದೆಂದು ಪ್ರಾಂಶುಪಾಲರು ತಿಳಿಸಿದ್ದಾರೆ.