ಪುನರ್ವಸತಿ ಕಲ್ಪಿಸಿದರೆ ನದಿ ದಡ ಬಿಟ್ಟು ಹೋಗಲು ಸಿದ್ಧ
ಕೊಡಗು

ಪುನರ್ವಸತಿ ಕಲ್ಪಿಸಿದರೆ ನದಿ ದಡ ಬಿಟ್ಟು ಹೋಗಲು ಸಿದ್ಧ

August 28, 2018

ಕರಡಿಗೋಡು ನಿವಾಸಿಗಳಿಂದ ಗ್ರಾಪಂಗೆ ಅರ್ಜಿ ಸಲ್ಲಿಕೆ
ಸಿದ್ದಾಪುರ: ಕರಡಿಗೋಡು ಬಳಿ ಕಾವೇರಿ ನದಿ ದಡದಲ್ಲಿ ವಾಸವಾಗಿ ರುವ 100ಕ್ಕೂ ಹೆಚ್ಚು ಕುಟುಂಬಗಳು ಪಂಚಾಯತಿ ವ್ಯಾಪ್ತಿಯಲ್ಲಿ ಪುನರ್ವಸತಿ ಕಲ್ಪಿಸಿದರೆ ನದಿ ದಡ ಬಿಟ್ಟು ಹೋಗಲು ಸಿದ್ಧ ಎಂದು ಸಿದ್ದಾಪುರ ಗ್ರಾಮ ಪಂಚಾ ಯತಿಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ನದಿ ದಡದಲ್ಲಿ ಜೀವನ ನಡೆಸುತ್ತಿದ್ದು, ಪ್ರತಿ ವರ್ಷ ಮಳೆಯ ಪ್ರವಾಹ ಸಂದರ್ಭ ಮನೆಗಳಿಗೆ ನೀರು ನುಗ್ಗಿ ಸಂಕಷ್ಟದ ಜೀವನ ನಡೆಸುತ್ತಿ ದ್ದೇವೆ. ಶಾಶ್ವತ ಸೂರು ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರು. ಯಾರೂ ಸ್ಪಂದಿಸುತ್ತಿಲ್ಲ. ಇತ್ತೀಚೆಗೆ ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಗೆ ಕಾವೇರಿ ನದಿ ಉಕ್ಕಿ ಹರಿದು ನದಿ ದಡದ ಗ್ರಾಮಗಳು ಜಲಾವೃತ ಗೊಂಡಿತ್ತು. ನದಿ ನೀರಿನ ಪ್ರವಾಹಕ್ಕೆ ಸಿಲುಕಿ ನೂರಾರು ಮನೆಗಳಿಗೆ ಹಾನಿಯಾಗಿದೆ. ಜಿಲ್ಲಾ ಡಳಿತ ಮುನ್ನಚ್ಚರಿಕೆ ಕ್ರಮ ವಹಿಸಿ ಜನರನ್ನ ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದರು.

ಮಳೆ ನಿಂತ ಮೇಲೆ ಮತ್ತೆ ಅದೆ ಬದುಕಿ ನತ್ತ ಮರಳಿ ಹಾನಿಯಾಗಿದ್ದ ಮನೆಗಳನ್ನು ದುರಸ್ಥಿಮಾಡಿಕೊಂಡು ಜೀವನ ನಡೆಸಲು ಮುಂದಾಗಬೇಕಿದೆ. ಮತ್ತೆ ಪ್ರವಾಹ ಬಂದರೆ ನಮ್ಮ ಬದುಕು ಕಷ್ಟಸಾಧ್ಯವಾಗುತ್ತದೆ. ಇದರಿಂದ ಸರಕಾರಕ್ಕೂ ಹೆಚ್ಚು ನಷ್ಟ ಉಂಟಾ ಗುತ್ತಿದ್ದು, ನಮಗೆ ಶಾಶ್ವತ ಯೋಜನೆ ರೂಪಿಸಿ ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಟ್ಟಲ್ಲಿ ನಾವು ಹೋಗಲು ಸಿದ್ಧವಾಗಿದ್ದೇವೆ ಎಂದು ನೂರಕ್ಕೂ ಹೆಚ್ಚು ಮಂದಿ ಗ್ರಾಪಂ ಅಧ್ಯಕ್ಷ ಎಂ ಕೆ ಮಣಿ ಹಾಗೂ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಅವರಿಗೆ ಆರ್ಜಿ ಸಲ್ಲಿಸಿದ್ದಾರೆ.

ಗ್ರಾಪಂ ಅಧ್ಯಕ್ಷ ಎಂ.ಕೆ. ಮಣಿ ಮಾತ ನಾಡಿ, ಕಾವೇರಿ ನದಿ ದಡದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಪ್ರತಿ ವರ್ಷ ಮಳೆ ಸಂದರ್ಭ ಕಾವೇರಿಯ ಪ್ರವಾಹಕ್ಕೆ ಸಿಲುಕಿ ಅತಂತ್ರ ಬದುಕು ಸಾಗಿಸು ವಂತಾಗಿದೆ. ಇದೀಗ ನಿವಾಸಿಗಳು ನದಿ ದಡ ಬಿಟ್ಟು ಬರಲು ಮುಂದಾಗಿದ್ದಾರೆ.

Translate »