ಕೊಡಗು

ಕೊಡಗು ಜಿಲ್ಲೆಯ ಮಳೆ ವಿವರ
ಕೊಡಗು

ಕೊಡಗು ಜಿಲ್ಲೆಯ ಮಳೆ ವಿವರ

July 11, 2018

ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 78.96 ಮಿ.ಮೀ. ಕಳೆದ ವರ್ಷ ಇದೇ ದಿನ 3.74 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 1681.38 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 815.65 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 104.40 ಮಿ.ಮೀ. ಕಳೆದ ವರ್ಷ ಇದೇ ದಿನ 5.85 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2338.55 ಮಿ.ಮೀ,…

ದುಬಾರೆಯಲ್ಲಿ ರ‍್ಯಾಫ್ಟಿಂಗ್ ಟೆಂಡರ್ ಪ್ರಕ್ರಿಯೆಗೆ ಹೈಕೋರ್ಟ್ ತಡೆ
ಕೊಡಗು

ದುಬಾರೆಯಲ್ಲಿ ರ‍್ಯಾಫ್ಟಿಂಗ್ ಟೆಂಡರ್ ಪ್ರಕ್ರಿಯೆಗೆ ಹೈಕೋರ್ಟ್ ತಡೆ

July 11, 2018

ಮಡಿಕೇರಿ:  ಪ್ರವಾಸಿತಾಣ ದುಬಾರೆಯಲ್ಲಿ ರ‍್ಯಾಫ್ಟಿಂಗ್ ನಡೆಸಲು ಸದ್ಯ ಕ್ಕಂತು ಅವಕಾಶ ದೊರೆಯುವ ಲಕ್ಷಣ ಗಳು ಗೋಚರಿಸುತ್ತಿಲ್ಲ. ನಂಜರಾಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ದುಬಾರೆ ಪ್ರವಾಸಿ ತಾಣದಲ್ಲಿ ನೂರಾರು ಮಂದಿ ಸ್ಥಳೀಯರು ರ‍್ಯಾಫ್ಟಿಂಗ್ ಮೂಲಕ ಬದುಕು ಕಟ್ಟಿಕೊಂಡಿದ್ದರು. ಕೆಲವರು ಅಧಿಕೃತ ಪರವಾನಗಿ ಪಡೆದು ರ‍್ಯಾಫ್ಟಿಂಗ್ ನಡೆಸಿದರೆ, ಮತ್ತೆ ಕೆಲವರು ಯಾವುದೇ ದಾಖಲೆಗಳಿಲ್ಲದೆ ಸ್ಥಳೀಯ ರೆಂಬ ಪ್ರಭಾವ ಬಳಸಿ ರ‍್ಯಾಫ್ಟಿಂಗ್ ಉದ್ಯಮ ವನ್ನು ದಂಧೆಯಂತೆ ಪರಿವರ್ತಿಸಿದ್ದರು. ಮಾತ್ರವಲ್ಲದೇ ರ‍್ಯಾಫ್ಟಿಂಗ್ ಗೆ ಬರುವ ಹೊರ ಊರುಗಳ ಪ್ರವಾಸಿಗರಿಂದ ದುಬಾರಿ…

ದುಬಾರೆ ಸಾಕಾನೆ ಶಿಬಿರದ ಹೆಣ್ಣಾನೆ ಸಾವು
ಕೊಡಗು

ದುಬಾರೆ ಸಾಕಾನೆ ಶಿಬಿರದ ಹೆಣ್ಣಾನೆ ಸಾವು

July 11, 2018

ಕುಶಾಲನಗರ: ಸಮೀಪದ ನಂಜರಾಯಪಟ್ಟಣ ಬಳಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರದಲ್ಲಿನ ಹೆಣ್ಣಾನೆ ಮೈಥಿಲಿ ಮಂಗಳವಾರ ಮೃತಪಟ್ಟಿದೆ. ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದ 52 ವರ್ಷದ ಮೈಥಿಲಿ ಆನೆ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಸೋಮವಾರ ಮೈಥಿಲಿಯ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿತು. ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್ ಚಿಕಿತ್ಸೆ ನೀಡಿದ್ದರು. ಮಂಗಳವಾರ ಬೆಳಿಗ್ಗೆ ಮೈಥಿಲಿ ಹೃದಯಾಘಾತದಿಂದ ಮೃತಪಟ್ಟಿತು. ವೈದ್ಯಾಧಿಕಾರಿ ಡಾ.ಮುಜೀಬ್ ಮರಣೋತ್ತರ ಪರೀಕ್ಷೆ ಬಳಿಕ ದುಬಾರೆ ಅರಣ್ಯ ಪ್ರದೇಶದಲ್ಲಿ…

ಕ್ಲೀನರ್ ಚಾಲನೆ ಮಾಡುತ್ತಿದ್ದ ಲಾರಿ, ಬಸ್‍ಗೆ ಡಿಕ್ಕಿ
ಕೊಡಗು

ಕ್ಲೀನರ್ ಚಾಲನೆ ಮಾಡುತ್ತಿದ್ದ ಲಾರಿ, ಬಸ್‍ಗೆ ಡಿಕ್ಕಿ

July 11, 2018

ಮಡಿಕೇರಿ: ಹೆದ್ದಾರಿಯಲ್ಲಿ ಕ್ಷೀನರ್ ಓರ್ವ ಲಾರಿ ಚಾಲಿಸಲು ಹೋಗಿ ಬಸ್‍ಗೆ ಡಿಕ್ಕಿ ಪಡಿಸಿ ಧರ್ಮದೇಟು ತಿಂದ ಘಟನೆ ನಗರದ ಚೈನ್‍ಗೇಟ್ ಬಳಿ ನಡೆದಿದೆ. ಮೈಸೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಸರಕು ತುಂಬಿದ್ದ ಲಾರಿಯನ್ನು ಚಾಲಕ, ಕ್ಲೀನರ್ ರಾಜು ಎಂಬಾತನಿಗೆ ಚಾಲನೆ ಮಾಡಲು ನೀಡಿದ್ದ. ಚೈನ್‍ಗೇಟ್ ತಲುಪುತ್ತಿದ್ದಂತೆಯೇ ಲಾರಿ ಚಾಲಿಸುತ್ತಿದ್ದ ಕ್ಲೀನರ್ ರಾಜು, ಲಾರಿಯನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ಹಾಸನದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದಿದ್ದಾನೆ. ಬಸ್‍ನ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ಲಾರಿ…

ವರುಣನ ಆರ್ಭಟಕ್ಕೆ ತತ್ತರಿಸಿದ ಕೊಡಗು
ಕೊಡಗು

ವರುಣನ ಆರ್ಭಟಕ್ಕೆ ತತ್ತರಿಸಿದ ಕೊಡಗು

July 10, 2018

ಮಡಿಕೇರಿ: ಪುನರ್ವಸು ಮಳೆಯ ಆರ್ಭಟಕ್ಕೆ ಮಡಿಕೇರಿ ನಗರ ತತ್ತರಿಸಿದ್ದು, ನಗರ ವ್ಯಾಪ್ತಿಯಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ. ಮಡಿಕೇರಿಯ ತ್ಯಾಗರಾಜ ಕಾಲೋನಿ, ಗದ್ದುಗೆ ಹಿಂಭಾಗ ಸೋಮವಾರ ಬೆಳಗಿನ ಜಾವ ಸುಮಾರು 1.30 ರ ಸಮಯದಲ್ಲಿ ಮನೆಗಳ ಗೋಡೆ ಕುಸಿದು ಬಿದ್ದಿದ್ದು, ಮನೆಯೊಳಗಿದ್ದವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗದ್ದುಗೆಯ ನಿವಾಸಿಗಳಾದ ಸುನೀತಾ, ಅಬೂಬ ಕ್ಕರ್ ಎಂಬುವರಿಗೆ ಸೇರಿದ ಮನೆಗಳು ಕುಸಿದು ಬಿದ್ದಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಹೊಲಿಗೆ ಯಂತ್ರಗಳನ್ನೇ ನಂಬಿಕೊಂಡು ಬದುಕು ತ್ತಿದ್ದ ಸುನೀತಾ…

ಕಾಡಾನೆ ದಾಳಿ; ವ್ಯಕ್ತಿಗೆ ತೀವ್ರ ಗಾಯ
ಕೊಡಗು

ಕಾಡಾನೆ ದಾಳಿ; ವ್ಯಕ್ತಿಗೆ ತೀವ್ರ ಗಾಯ

July 10, 2018

ಮಡಿಕೇರಿ: ಕಾಡಾನೆ ದಾಳಿಯಿಂದ ಕಾಫಿಬೆಳೆಗಾರರೋರ್ವರು ಗಂಭೀರ ಗಾಯಗೊಂಡ ಘಟನೆ ನೆಲ್ಯಹುದಿಕೇರಿ ಸಮೀಪದ ಬೆಟ್ಟದಕಾಡು ಗ್ರಾಮದಲ್ಲಿ ಸಂಭವಿಸಿದೆ. ಬೆಟ್ಟದ ಕಾಡು ನಿವಾಸಿ ಮಹಮ್ಮದ್ ಆಲಿ ಎಂಬುವರೇ ಕಾಡಾನೆ ದಾಳಿಯಿಂದ ಗಾಯಗೊಂಡವರಾಗಿದ್ದಾರೆ. ಭಾನುವಾರ ಸಂಜೆ ಬೆಟ್ಟದ ಕಾಡುವಿನಲ್ಲಿರುವ ತಮ್ಮ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಕಳುಹಿಸಿ ಮನೆಗೆ ತೆರಳುತ್ತಿದ್ದ ಮಹಮ್ಮದ್ ಆಲಿ ಮೇಲೆ ದಾಳಿ ನಡೆಸಿದ ಕಾಡಾನೆ ಗಂಭೀರವಾಗಿ ಗಾಯಗೊಳಿಸಿದೆ. ಈ ಸಂದರ್ಭ ಮಹಮ್ಮದ್ ಆಲಿ ಅವರ ಕಿರುಚಾಟವನ್ನು ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ…

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಕೊಡಗು

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

July 10, 2018

ವಿರಾಜಪೇಟೆ:  ಮನುಷ್ಯನ ಬದುಕಿಗೆ ಪರಿಸರವು ಪರಿಪೂರ್ಣತೆಯನ್ನು ನೀಡುತ್ತಿರುವ ಕಾರಣದಿಂದಾಗಿ ಪರಿಸರವನ್ನು ಸಂರಕ್ಷಿಸುವ ಕರ್ತವ್ಯ ಮನುಷ್ಯನಿಗೆ ಇದೆಯೆಂದು ಹಿರಿಯ ಪರಿಸರ ತಜ್ಞ ಡಾ. ಎಸ್.ವಿ.ನರಸಿಂಹನ್ ಹೇಳಿದ್ದಾರೆ. ವಿರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಸ್ವಾಮಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಹೊಂಬೆಳಕು” ಮಾಸಿಕ ತತ್ವ ಚಿಂತನ ಗೋಷ್ಠಿಯ 178ನೇ ಕಿರಣದಲ್ಲಿ “ಪರಿಸರ ಗೀತೆಗಳು, ಒಂದು ರೂಪಕ” ಎಂಬ ವಿಷಯದ ಬಗ್ಗೆ ಗೀತೆಗಳ ಪ್ರಸ್ತುತಿ ಕಾರ್ಯಕ್ರಮದ ನಿರೂಪಕರಾಗಿ ಮಾತನಾಡಿದ ನರಸಿಂಹನ್, “ಭೂಮಿಯಲ್ಲಿ ಲಕ್ಷಾಂತರ ವರ್ಷಗಳಿಂದ ಪರಿಸರವನ್ನು ಅನುಭವಿಸುತ್ತಾ ಬದುಕುತ್ತಿ ರುವ ಮನುಷ್ಯ…

ದೇವರಪುರದಲ್ಲಿ ಕಾಡಾನೆಗಳ ಉಪಟಳ; ಸೋಲಾರ್ ಬೇಲಿ ಧ್ವಂಸ
ಕೊಡಗು

ದೇವರಪುರದಲ್ಲಿ ಕಾಡಾನೆಗಳ ಉಪಟಳ; ಸೋಲಾರ್ ಬೇಲಿ ಧ್ವಂಸ

July 10, 2018

ಗೋಣಿಕೊಪ್ಪಲು: ದೇವರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದಾಗಿ ರೈತರ ಕಾಫಿ ಬೆಳೆಗಾರರ ತೋಟಕ್ಕೆ ಅಳವಡಿಸಿರುವ ಸೋಲರ್ ಬೇಲಿಯನ್ನು ಕಾಡಾನೆಗಳು ಧ್ವಂಸ ಮಾಡುತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟಗೊಂಡಿದೆ. ಕಾಡಾನೆಯ ಭಯದಿಂದ, ಭಾರೀ ಮಳೆಯಲ್ಲಿ ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಸಮೀಪದ ದೇವರ ಕಾಡುವಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಯ ಹಿಂಡು ಸಂಜೆ ಆಗುತ್ತಿದ್ದಂತೆಯೇ ಸಮೀಪದ ಮನೆಯಪಂಡ, ಕಡೇಮಾಡ, ಕಂಜಿತಂಡ, ಕಳ್ಳಿಚಂಡ ಕುಟುಂಬಸ್ಥರ ಕಾಫಿ ತೋಟಕ್ಕೆ ಲಗ್ಗೆ ಇಡುವ ಈ ಕಾಡಾನೆ…

ಕೊಡಗಿನಲ್ಲಿ ಮುಂದುವರೆದ ಮಳೆಯ ಆರ್ಭಟ
ಕೊಡಗು

ಕೊಡಗಿನಲ್ಲಿ ಮುಂದುವರೆದ ಮಳೆಯ ಆರ್ಭಟ

July 9, 2018

ಇಂದು ಶಾಲಾ ಕಾಲೇಜಿಗೆ ರಜೆ ಕರಿಕೆ ಬಳಿ ಕೊಚ್ಚಿ ಹೋದ ತೂಗು ಸೇತುವೆ ಮಡಿಕೇರಿ:  ಕೊಡಗು ಜಿಲ್ಲೆಯಾದ್ಯಂತ ಪುನರ್ವಸು ಮಳೆಯ ಆರ್ಭಟ ಮುಂದುವರೆದಿದ್ದು, ಮಳೆ ಯಿಂದ ಕೊಡಗು ಜಿಲ್ಲೆ ತತ್ತರಿಸಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಪ್ರತಿ ಕೂಲ ಪರಿಣಾಮ ಉಂಟಾಗಿದ್ದು, ವಿದ್ಯುತ್ ಪೂರೈಕೆ ಸ್ಥಗಿತದಿಂದ ಗ್ರಾಮೀಣ ಭಾಗದ ನಿವಾಸಿಗಳು ತೊಂದರೆ ಅನುಭವಿಸು ವಂತಾಗಿದೆ. ಜಿಲ್ಲೆಯಾದ್ಯಂತ ಮಳೆ ಜೋರಾಗಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜಿಗೆ ನಾಳೆ (ಜು.9) ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಕರಿಕೆ ಬಳಿ ಹೊಳೆಯೊಂದಕ್ಕೆ ಗ್ರಾಮಸ್ಥರು ನಿರ್ಮಿಸಿದ್ದ ತೂಗು ಸೇತುವೆ…

ನಿಯಂತ್ರಣ ಕೊಠಡಿ ಆರಂಭ: ಮಾಹಿತಿಗೆ ಮನವಿ
ಕೊಡಗು

ನಿಯಂತ್ರಣ ಕೊಠಡಿ ಆರಂಭ: ಮಾಹಿತಿಗೆ ಮನವಿ

July 9, 2018

ಮಡಿಕೇರಿ:  ಅತಿವೃಷ್ಟಿ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಹಾಗೂ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ತಾಲ್ಲೂಕು ಕಚೇರಿಗಳು ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್) ತೆರೆಯಲಾಗಿದೆ. ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ ವಿವರ ಇಂತಿದೆ. ಜಿಲ್ಲಾಧಿಕಾರಿ ಕಚೇರಿ-08272-221077, ಜಿಲ್ಲಾ ಅಗ್ನಿಶಾಮಕ ಕಚೇರಿ-101, 08272-229299, ಮಡಿಕೇರಿ ತಾಲ್ಲೂಕು ಕಚೇರಿ-08272-228396, ನಗರಸಭೆ-08272-220111, ಸೋಮವಾರಪೇಟೆ ತಾಲ್ಲೂಕು ಕಚೇರಿ-08276-282045, ವಿರಾಜಪೇಟೆ ತಾಲ್ಲೂಕು ಕಚೇರಿ- 08274-256328 ಈ ದೂರವಾಣಿ ಸಂಖ್ಯೆಗಳಿಗೆ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸಮಸ್ಯೆಗಳಿದ್ದಲ್ಲಿ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ…

1 158 159 160 161 162 187
Translate »