ಕೊಡಗು

ಕಾರು-ಬಸ್ ಮುಖಾಮುಖಿ ಡಿಕ್ಕಿ: ಕೊಡಗಿನ ನಾಲ್ವರು ಗಂಭೀರ
ಕೊಡಗು

ಕಾರು-ಬಸ್ ಮುಖಾಮುಖಿ ಡಿಕ್ಕಿ: ಕೊಡಗಿನ ನಾಲ್ವರು ಗಂಭೀರ

July 7, 2018

ನಾಪೋಕ್ಲು: ಸಕಲೇಶಪುರ ಸಮೀಪ ಅಳಂದೂರು ಎಂಬಲ್ಲಿ ಕಾರು ಮತ್ತು ಬಸ್ಸು ಮುಖಾಮುಖಿ ಡಿಕ್ಕಿಯಾಗಿ ಕೊಡಗಿನ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಚೆಯ್ಯಂಡಾಣೆ ನರಿಯಂದಡ ಗ್ರಾಮದ ತೋಟಂಬೈಲು ಕುಮಾರ್ ಅವರ ಸಂಬಂಧಿಕರು ಚಿಕ್ಕಮಗಳೂರಿನಲ್ಲಿ ನೆಲೆಸಿದ್ದು ಇತ್ತೀಚೆಗೆ ಅಪಘಾತವೊಂದರಲ್ಲಿ ಅವಘಡಕ್ಕೀಡಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಅವರ ಯೋಗಕ್ಷೇಮ ವಿಚಾರಿಸಲು ಕುಮಾರ್ ತಮ್ಮ ಕಾರಿನಲ್ಲಿ ಪತ್ನಿ ,ತಂಗಿ ಹಾಗೂ ಪತ್ನಿಯ ಅಕ್ಕ ಅವರೊಂದಿಗೆ ತೆರಳುವ ಸಂದರ್ಭ ಈ ಘಟನೆ ನಡೆದಿದೆ. ಅಳಂದೂರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಡೆಸಿದ…

ನಾಳೆ ಯೋಧ ನಮನ
ಕೊಡಗು

ನಾಳೆ ಯೋಧ ನಮನ

July 7, 2018

ಮಡಿಕೇರಿ:  ಕೊಡಗು ಯೋಧಾಭಿಮಾನಿ ಬಳಗ ವತಿಯಿಂದ ಮಡಿಕೇರಿ ಕೊಡವ ಸಮಾಜ ಸಹಯೋಗದಲ್ಲಿ ‘ಯಾರಿಗಾಗಿ ನಮ್ಮವರ ಬಲಿದಾನ’ ಯೋಧ ನಮನ ಕಾರ್ಯಕ್ರಮ ಜುಲೈ 8ರಂದು ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಲಿದೆ. ದೇಶರಕ್ಷಣೆಯಲ್ಲಿ ತೊಡಗಿದ್ದಾಗ ಬಲಿದಾನಿ ಗಳಾದ, ಯುದ್ಧ ಮುಂತಾದ ಹೋರಾಟ ದಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡಿದ ವೀರ ಸೈನಿಕರನ್ನು ಸ್ಮರಿಸುವ ಸಲುವಾಗಿ ಈ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್(ನಿ) ಕಂಡ್ರತಂಡ ಸಿ. ಸುಬ್ಬಯ್ಯ ಅಧ್ಯಕ್ಷತೆಯಲ್ಲಿ…

ಬಜೆಟ್‍ನಲ್ಲಿ ಕೊಡಗಿಗೆ ಶೂನ್ಯ ಕೊಡುಗೆ
ಕೊಡಗು

ಬಜೆಟ್‍ನಲ್ಲಿ ಕೊಡಗಿಗೆ ಶೂನ್ಯ ಕೊಡುಗೆ

July 6, 2018

ಮಡಿಕೇರಿ:  ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಯಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ಕಾಫಿ, ಕರಿಮೆಣಸು ಸೇರಿದಂತೆ ಆರ್ಥಿಕ ಬೆಳೆಗಳನ್ನು ನಂಬಿಕೊಂಡಿರುವ ಜಿಲ್ಲೆಯ ಕೃಷಿಕರು, ಸಾಲಮನ್ನಾ, ಕೃಷಿಭಾಗ್ಯ, ಕಾಡಾನೆ ಹಾವಳಿ ಸಮಸ್ಯೆ ಪರಿಹಾರ, ಬೆಳೆಹಾನಿ ಪರಿಹಾರ ಹೆಚ್ಚಳ ಸೇರಿದಂತೆ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡುವ ಕುರಿತು ಆಶಾಭಾವನೆ ಹೊಂದಿದ್ದರು. ವಿಶೇಷವಾಗಿ ಈ ಹಿಂದಿನ ಸರ್ಕಾರ ದಂತೆ ಜಿಲ್ಲೆಯ ರಸ್ತೆಗಳ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ…

ಮಗುಚಿದ ಸರ್ಕಾರಿ ಬಸ್: ಅಪಾಯದಿಂದ ಪ್ರಯಾಣಿಕರು ಪಾರು
ಕೊಡಗು

ಮಗುಚಿದ ಸರ್ಕಾರಿ ಬಸ್: ಅಪಾಯದಿಂದ ಪ್ರಯಾಣಿಕರು ಪಾರು

July 6, 2018

ಗೋಣಿಕೊಪ್ಪಲು:  ಗೋಣಿಕೊಪ್ಪಲು-ಪೊನ್ನಂಪೇಟೆ-ಬಾಳೆಲೆ ಮಾರ್ಗವಾಗಿ ಸಂಜೆ 4 ಗಂಟೆಗೆ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಪೊನ್ನಂಪೇಟೆ-ಕಿರುಗೂರು ರಸ್ತೆಯ ಮತ್ತೂರು ಬಳಿ ಅಪಘಾತಕ್ಕೀಡಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರುವುದಿಲ್ಲ. ಬಸ್‍ನಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಸ್ ರಸ್ತೆಯ ಎಡ ಭಾಗದ ಚರಂಡಿಗೆ ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಚಾಲಕನ ಬಳಿ ಇರುವ ಬಾಗಿಲಿನ ಮೂಲಕ ಒಬ್ಬಬ್ಬರಾಗಿ ಹೊರ ಬಂದರು.

ಸಂಚಾರ ನಿರ್ವಹಣೆ, ರಸ್ತೆ ಸುರಕ್ಷಾ ಮಾಸಾಚರಣೆ
ಕೊಡಗು

ಸಂಚಾರ ನಿರ್ವಹಣೆ, ರಸ್ತೆ ಸುರಕ್ಷಾ ಮಾಸಾಚರಣೆ

July 6, 2018

ವಿರಾಜಪೇಟೆ: ವಾಹನ ಚಾಲನೆ ಮಾಡುವಾಗ ಚಾಲಕರು ಕಾನೂನು ಪಾಲಿ ಸುವಂತಾಗಬೇಕು. ಆಗ ಮಾತ್ರ ದುರ್ಘಟನೆ ಗಳು ಕಡಿಮೆಯಾಗಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್. ಜಯಪ್ರಕಾಶ್ ಹೇಳಿದರು. ಕೊಡಗು ಜಿಲ್ಲಾ ಪೊಲೀಸ್, ವಿರಾಜ ಪೇಟೆ ಉಪ ವಿಭಾಗದ ವತಿಯಿಂದ ‘ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷಾ ಮಾಸ’ 2018ರ ಅಂಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾ ರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಾರ್ಯ ಕ್ರಮವನ್ನು ಉದ್ಘಾಟಿಸಿದ ಅವರು ವಿದ್ಯಾ ರ್ಥಿಗಳನ್ನುದ್ದೇಶಿಸಿ, ಮನುಷ್ಯ ಹುಟ್ಟುವಾಗೇ ಕಾನೂನು ಪ್ರಾರಂಭಗೊಳ್ಳುತ್ತದೆ…

ಅನಾರೋಗ್ಯದಿಂದ ಕಾಡಾನೆ ಸಾವು
ಕೊಡಗು

ಅನಾರೋಗ್ಯದಿಂದ ಕಾಡಾನೆ ಸಾವು

July 6, 2018

ಸಿದ್ದಾಪುರ: ಅನಾರೋಗ್ಯದಿಂದ ಬಳಲು ತ್ತಿದ್ದ 15 ವರ್ಷದ ಹೆಣ್ಣಾನೆಯೊಂದು ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಪಳ್ಳಕೇರೆಯ ಕಾಫಿ ತೋಟದಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಅನಾರೋಗ್ಯಕ್ಕೊಳ ಗಾಗಿದ್ದ ಕಾಡಾನೆ ತೋಟದ ಕೆರೆಯ ನೀರಿನಲ್ಲಿದ್ದು ಮೇಲೆ ಬರಲು ಸಾಧ್ಯವಾಗದೆ ನಿಯಂತ್ರಣ ಕಳೆದು ಕೊಂಡಿತ್ತು. ಇಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಹಗ್ಗದ ಮೂಲಕ ಕಾಡಾನೆಯನ್ನು ಮೇಲೆತ್ತಿ ಚಿಕಿತ್ಸೆ ನೀಡಿದರು ಫಲಕಾರಿಯಾಗದೆ ಮೃತ ಪಟ್ಟಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಹಿಣಿ ತಿಳಿಸಿದ್ದಾರೆ. ಡಾ.ಸುನೀಲ್ ಕಾಡಾನೆಯ ಮೃತ ದೇಹವನ್ನು…

ಕೊಡಗಿನ ಮೂಲಕ ಮೈಸೂರು-ತಲಚೇರಿ ರೈಲ್ವೆ ಯೋಜನೆ
ಕೊಡಗು, ಮೈಸೂರು

ಕೊಡಗಿನ ಮೂಲಕ ಮೈಸೂರು-ತಲಚೇರಿ ರೈಲ್ವೆ ಯೋಜನೆ

July 5, 2018

ಕೇಂದ್ರದಿಂದ ಯೋಜನೆಗೆ ಶೇ.20ರಷ್ಟು ಅನುದಾನ ಕೇಂದ್ರ ಪ್ರವಾಸೋದ್ಯಮ ಸಚಿವ ಕೆ.ಜೆ.ಆಲ್ಫನ್ ಭರವಸೆ ಮೈಸೂರು: ಚುನಾಯಿತ ಪ್ರತಿ ನಿಧಿಗಳು, ಪರಿಸರವಾದಿಗಳು ಹಾಗೂ ಸಮಸ್ತ ಕೊಡಗಿನ ಜನತೆಯ ವಿರೋಧದ ನಡುವೆಯೂ ದಕ್ಷಿಣ ಕೊಡಗಿನ ಮೂಲಕ ಹಾದು ಹೋಗುವ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಯೋಜನೆ ಅನುಷ್ಠಾನ ಗೊಳ್ಳುವ ಮುನ್ಸೂಚನೆಯನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಜೆ.ಆಲ್ಫನ್ ನೀಡಿದ್ದಾರೆ. ಕೇರಳದ ಕಲ್ಪೆಟ್ಟದಲ್ಲಿ ವೈನಾಡು ಛೇಂಬರ್ ಆಫ್ ಕಾಮರ್ಸ್, ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ ಮತ್ತು ವೈನಾಡು ಪ್ರವಾ ಸೋದ್ಯಮ ಸಂಘದ…

ಕಾಫಿ ತೋಟದಿಂದ ಕಾಲ್ಕಿತ್ತ ಕಾಡಾನೆ
ಕೊಡಗು

ಕಾಫಿ ತೋಟದಿಂದ ಕಾಲ್ಕಿತ್ತ ಕಾಡಾನೆ

July 5, 2018

ಮಡಿಕೇರಿ: ಮೇಕೇರಿ, ತಾಳತ್ತಮನೆ ವ್ಯಾಪ್ತಿಯ ಕಾಫಿ ತೋಟ ಗಳ ಒಳಗೆ 2 ದಿನಗಳ ಕಾಲ ದಾಂಧಲೆ ನಡೆಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಎರಡು ಕಾಡಾನೆಗಳು ಕೊನೆಗೂ ಕಾಫಿ ತೋಟಗಳಿಂದ ಕಾಲ್ಕಿತ್ತಿವೆ. ಮೇಕೇರಿ, ಮಂಗಳದೇವಿನಗರ, ಪೊನ್ನಚೆಟ್ಟಿ ಎಸ್ಟೇಟ್ ಮಾರ್ಗವಾಗಿ ಮೋದೂರು ಎಸ್ಟೇಟ್ ಕಡೆ ತೆರಳಿ ರುವ ಕಾಡಾನೆಗಳು, ಹೇರೂರು ವ್ಯಾಪ್ತಿ ಯಲ್ಲಿರುವ ಕುರಿತು ಅರಣ್ಯ ಇಲಾಖೆ ಮಾಹಿತಿ ಕಲೆ ಹಾಕಿದೆ. ಮೇಕೇರಿ ವ್ಯಾಪ್ತಿಯಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿದ ಕುಶಾಲನಗರ ಆರ್.ಆರ್.ಟಿ ತಂಡ ಮತ್ತು ಮಡಿಕೇರಿ ಅರಣ್ಯ ಇಲಾಖೆ ಸಿಬ್ಬಂದಿ…

ಬೀದಿ ನಾಯಿಗಳ ಕಾಟ
ಕೊಡಗು

ಬೀದಿ ನಾಯಿಗಳ ಕಾಟ

July 5, 2018

ಗೋಣಿಕೊಪ್ಪಲು: ಗೋಣಿಕೊಪ್ಪಲು ಪಂಚಾಯ್ತಿ ವ್ಯಾಪ್ತಿಯ ಬಸ್ ನಿಲ್ದಾಣ, ಮುಖ್ಯ ರಸ್ತೆ,ಮಾರ್ಕೇಟ್ ಆವರಣದಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದ್ದು ಸಾರ್ವಜನಿಕರಿಗೆ ನಡೆದಾಡುವುದೇ ಕಷ್ಟವಾಗಿದೆ. ಬೀದಿ ನಾಯಿಗಳು ಗುಂಪು ಗುಂಪಾಗಿ ಸಂಚರಿಸುತ್ತಿದ್ದು ಸಾರ್ವಜನಿಕರಿಗೆ ಭಯದ ವಾತಾವರಣ ನಿರ್ಮಾಣಗೊಂಡಿದೆ. ಮುಂಜಾನೆ ವಾಯು ವಿಹಾರಕ್ಕೆ ತೆರಳುವ ಮಹಿಳೆಯರು ಈ ಬೀದಿ ನಾಯಿಗಳ ಉಪಟಳದಿಂದ ರೋಸಿ ಹೋಗಿದ್ದು ವಾಯು ವಿಹಾರ ನಡೆಸುವುದನ್ನು ಬಿಟ್ಟಿದ್ದಾರೆ. ರಸ್ತೆಯ ಬದಿಯಲ್ಲಿ ಬಿಸಾಡುತ್ತಿರುವ ಆಹಾರವನ್ನು ಹುಡುಕುತ್ತಾ ನಗರದತ್ತ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳು ನಗರಕ್ಕೆ ಆಗಮಿಸುತ್ತಿವೆ. ನಾಯಿಗಳ ಕಾಟದಿಂದ ಬಸ್…

ರೋಟರಿ ಅಧ್ಯಕ್ಷರಾಗಿ ಕೆ.ಎಂ.ಜೇಕಬ್ ಪದಗ್ರಹಣ
ಕೊಡಗು

ರೋಟರಿ ಅಧ್ಯಕ್ಷರಾಗಿ ಕೆ.ಎಂ.ಜೇಕಬ್ ಪದಗ್ರಹಣ

July 5, 2018

ಕುಶಾಲನಗರ: ಪ್ರತಿ ಯೊಬ್ಬರು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಹೇಳಿದರು. ಇಲ್ಲಿನ ರೋಟರಿ ಸಂಸ್ಥೆ ವತಿಯಿಂದ ರೈತ ಸಹಕಾರ ಭವನದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ 2018-19ನೇ ಸಾಲಿನ ರೋಟರಿ ಸಂಸ್ಥೆಯ ನೂತನ ಪಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ರೋಟರಿ ಸಂಸ್ಥೆ ಸದಸ್ಯರು ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವ ಮೂಲಕ ಸಾಮಾಜದ ಸ್ವಾಸ್ಥ್ಯ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಸಹಾಯಕ…

1 160 161 162 163 164 187
Translate »