ಕಾಫಿ ತೋಟದಿಂದ ಕಾಲ್ಕಿತ್ತ ಕಾಡಾನೆ
ಕೊಡಗು

ಕಾಫಿ ತೋಟದಿಂದ ಕಾಲ್ಕಿತ್ತ ಕಾಡಾನೆ

July 5, 2018

ಮಡಿಕೇರಿ: ಮೇಕೇರಿ, ತಾಳತ್ತಮನೆ ವ್ಯಾಪ್ತಿಯ ಕಾಫಿ ತೋಟ ಗಳ ಒಳಗೆ 2 ದಿನಗಳ ಕಾಲ ದಾಂಧಲೆ ನಡೆಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಎರಡು ಕಾಡಾನೆಗಳು ಕೊನೆಗೂ ಕಾಫಿ ತೋಟಗಳಿಂದ ಕಾಲ್ಕಿತ್ತಿವೆ.

ಮೇಕೇರಿ, ಮಂಗಳದೇವಿನಗರ, ಪೊನ್ನಚೆಟ್ಟಿ ಎಸ್ಟೇಟ್ ಮಾರ್ಗವಾಗಿ ಮೋದೂರು ಎಸ್ಟೇಟ್ ಕಡೆ ತೆರಳಿ ರುವ ಕಾಡಾನೆಗಳು, ಹೇರೂರು ವ್ಯಾಪ್ತಿ ಯಲ್ಲಿರುವ ಕುರಿತು ಅರಣ್ಯ ಇಲಾಖೆ ಮಾಹಿತಿ ಕಲೆ ಹಾಕಿದೆ.

ಮೇಕೇರಿ ವ್ಯಾಪ್ತಿಯಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿದ ಕುಶಾಲನಗರ ಆರ್.ಆರ್.ಟಿ ತಂಡ ಮತ್ತು ಮಡಿಕೇರಿ ಅರಣ್ಯ ಇಲಾಖೆ ಸಿಬ್ಬಂದಿ ಗಳು, 2 ಕಾಡಾನೆಗಳು ಈ ವ್ಯಾಪ್ತಿ ಯಿಂದ ತೆರಳಿರುವ ಬಗ್ಗೆ ಖಚಿತ ಪಡಿಸಿ, ಆ ಬಳಿಕ ಕಡಗದಾಳು ವ್ಯಾಪ್ತಿ ಯಲ್ಲೂ ಕಾರ್ಯಾಚರಣೆ ನಡೆಸಿದರು.

2 ಆನೆಗಳ ಹೆಜ್ಜೆ ಗುರುತುಗಳ ಜಾಡು ಹಿಡಿದು ಶೋಧ ಕಾರ್ಯ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಗಳು, ಕಾಡಾನೆಗಳು ಬುಧವಾರ ಬೆಳ ಗ್ಗಿನ 4 ಗಂಟೆಯ ಸಮಯದಲ್ಲಿ ಮೀನುಕೊಲ್ಲಿ ಅರಣ್ಯ ಕಡೆ ಮುಖ ಮಾಡಿರಬಹುದೆಂದು ಅಂದಾಜಿಸಿದ್ದಾರೆ.

Translate »