ಬೀದಿ ನಾಯಿಗಳ ಕಾಟ
ಕೊಡಗು

ಬೀದಿ ನಾಯಿಗಳ ಕಾಟ

July 5, 2018

ಗೋಣಿಕೊಪ್ಪಲು: ಗೋಣಿಕೊಪ್ಪಲು ಪಂಚಾಯ್ತಿ ವ್ಯಾಪ್ತಿಯ ಬಸ್ ನಿಲ್ದಾಣ, ಮುಖ್ಯ ರಸ್ತೆ,ಮಾರ್ಕೇಟ್ ಆವರಣದಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದ್ದು ಸಾರ್ವಜನಿಕರಿಗೆ ನಡೆದಾಡುವುದೇ ಕಷ್ಟವಾಗಿದೆ.

ಬೀದಿ ನಾಯಿಗಳು ಗುಂಪು ಗುಂಪಾಗಿ ಸಂಚರಿಸುತ್ತಿದ್ದು ಸಾರ್ವಜನಿಕರಿಗೆ ಭಯದ ವಾತಾವರಣ ನಿರ್ಮಾಣಗೊಂಡಿದೆ.

ಮುಂಜಾನೆ ವಾಯು ವಿಹಾರಕ್ಕೆ ತೆರಳುವ ಮಹಿಳೆಯರು ಈ ಬೀದಿ ನಾಯಿಗಳ ಉಪಟಳದಿಂದ ರೋಸಿ ಹೋಗಿದ್ದು ವಾಯು ವಿಹಾರ ನಡೆಸುವುದನ್ನು ಬಿಟ್ಟಿದ್ದಾರೆ. ರಸ್ತೆಯ ಬದಿಯಲ್ಲಿ ಬಿಸಾಡುತ್ತಿರುವ ಆಹಾರವನ್ನು ಹುಡುಕುತ್ತಾ ನಗರದತ್ತ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳು ನಗರಕ್ಕೆ ಆಗಮಿಸುತ್ತಿವೆ. ನಾಯಿಗಳ ಕಾಟದಿಂದ ಬಸ್ ನಿಲ್ದಾಣದಲ್ಲಿ ಪ್ರಯಾಣ ಕರು ನಿಲ್ಲುವುದೇ ಕಷ್ಟವಾಗಿದೆ. ಕುರಿ,ಆಡುಗಳ ಮೇಲೆ ಈ ಬೀದಿ ನಾಯಿಗಳ ಗುಂಪು ದಾಳಿ ನಡೆಸಿ ಕೊಂದು ಹಾಕುತ್ತಿವೆ.ಶಾಲಾ ವಿದ್ಯಾರ್ಥಿಗಳು ಈ ನಾಯಿಗಳಿಂದ ತಪ್ಪಿಸಿಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯ್ತಿ ಈ ಬಗ್ಗೆ ನಿಗಾ ವಹಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Translate »