ರೋಟರಿ ಅಧ್ಯಕ್ಷರಾಗಿ ಕೆ.ಎಂ.ಜೇಕಬ್ ಪದಗ್ರಹಣ
ಕೊಡಗು

ರೋಟರಿ ಅಧ್ಯಕ್ಷರಾಗಿ ಕೆ.ಎಂ.ಜೇಕಬ್ ಪದಗ್ರಹಣ

July 5, 2018

ಕುಶಾಲನಗರ: ಪ್ರತಿ ಯೊಬ್ಬರು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಹೇಳಿದರು.

ಇಲ್ಲಿನ ರೋಟರಿ ಸಂಸ್ಥೆ ವತಿಯಿಂದ ರೈತ ಸಹಕಾರ ಭವನದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ 2018-19ನೇ ಸಾಲಿನ ರೋಟರಿ ಸಂಸ್ಥೆಯ ನೂತನ ಪಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.

ರೋಟರಿ ಸಂಸ್ಥೆ ಸದಸ್ಯರು ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವ ಮೂಲಕ ಸಾಮಾಜದ ಸ್ವಾಸ್ಥ್ಯ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಸಹಾಯಕ ಗೌವ ರ್ನರ್ ಧರ್ಮಪುರ ನಾರಾಯಣ್ ಮಾತನಾಡಿ, ಸಮಾಜದಲ್ಲಿ ಹಿಂದುಳಿದ ಹಾಗೂ ಶೋಷಿತ ಸಮುದಾಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಒತ್ತು ನೀಡಲಾಗುವುದು. ಬಾಲ್ಯಾವ್ಯಸ್ಥೆಯಿಂದಲೇ ಮಕ್ಕಳ ಸರ್ವ ತೋಮುಖ ಅಭಿವೃದ್ಧಿಗೆ ಗಮನ ಹರಿಸ ಲಾಗುವುದು ಎಂದರು.

ನಿರ್ಗಮಿತ ಸಹಾಯಕ ಗವರ್ನರ್ ಮಹೇಶ್ ನಲ್ವಡಿ ಮಾತನಾಡಿ, ರೋಟರಿ ಸದಸ್ಯರು ಹೊಸ ರೀತಿ ಚಿಂತನೆ ಮೂಲಕ ಸಮಾಜಕ್ಕೆ ಪೂರಕವಾಗುವಂತ ಸೌಹಾ ರ್ದತೆಯನ್ನು ಬೆಸೆಯುವ ಕಾರ್ಯ ಕ್ರಮಗಳಿಗೆ ಒತ್ತು ನೀಡಲು ಶ್ರಮಿಸಬೇಕು ಎಂದು ಸಲಹೆ ನೀಡಿದರು. ನೂತನ ಅಧ್ಯಕ್ಷ ಕೆ.ಎಂ.ಜೇಕಬ್ ಮಾತನಾಡಿ, ರೋಟರಿ ಸಂಸ್ಥೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಸರ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಿದ್ದು, ಎಲ್ಲಾ ಸದಸ್ಯರ ಸಹಕಾರ ತುಂಬಾ ಅಗತ್ಯವಾಗಿದೆ ಎಂದು ಹೇಳಿ ದರು. ಈ ಸಂದರ್ಭ ವೇದಿಕೆಯಲ್ಲಿ ರೋಟರಿಯ ನಿರ್ಗಮಿತ ಅಧ್ಯಕ್ಷ ಎನ್.ಜಿ. ಪ್ರಕಾಶ್, ನಿರ್ಗಮಿತ ಕಾರ್ಯದರ್ಶಿ ಸಿ.ಬಿ.ಹರೀಶ್, ಮಾಜಿ ವಲಯ ಸೇನಾನಿ ಪಿ.ಎಸ್.ಮೋಹನ್ ರಾಮ್, ವಲಯ ಕಾರ್ಯದರ್ಶಿ ಕ್ರೆಜ್ವಲ್ ಕೊಟ್ಸ್, ವಲಯ ಸೇನಾನಿ ಪಿ.ಆರ್.ನವೀನ್ ಉಪಸ್ಥಿತರಿದ್ದರು.

ಅಧಿಕಾರ ಹಸ್ತಾಂತರ : ನೂತನ ಅಧ್ಯಕ್ಷ ರಾಗಿ ಆಯ್ಕೆಯಾಗಿರುವ ಕೆ.ಎಂ.ಜೇಕಬ್ ಅವರಿಗೆ ನಿರ್ಗಮಿತ ಅಧ್ಯಕ್ಷ ಎನ್.ಜಿ ಪ್ರಕಾಶ್ ಅಧಿಕಾರ ಹಸ್ತಾಂತರಿಸಿದರು. ಜಿಲ್ಲಾ ಗವರ್ನರ್ ಜೋಸೆಫ್ ಅವರು ನೂತನ ಅಧ್ಯಕ್ಷರಿಗೆ ಬ್ಯಾಡ್ಜ್ ಧರಿಸುವ ಮೂಲಕ ಶುಭಹಾರೈಸಿದರು.

ಇದೇ ಸಂದರ್ಭ ನೂತನ ಸದಸ್ಯರಾಗಿ ಸೈಜನ್ ಫೀಟರ್, ಉಮಾಶಂಕರ್ ಪ್ರಮಾಣ ವಚನ ಸ್ವೀಕರಿಸಿದರು.

Translate »