ಕೊಡಗು

ಐಎಎಸ್ ಅಧಿಕಾರಿ ವಿರುದ್ಧ ಮತಾಂತರ ಆರೋಪ ವಿಹೆಚ್‍ಪಿ, ಭಜರಂಗದಳ ಪ್ರತಿಭಟನೆ
ಕೊಡಗು

ಐಎಎಸ್ ಅಧಿಕಾರಿ ವಿರುದ್ಧ ಮತಾಂತರ ಆರೋಪ ವಿಹೆಚ್‍ಪಿ, ಭಜರಂಗದಳ ಪ್ರತಿಭಟನೆ

July 3, 2018

ಮಡಿಕೇರಿ: ಕಲ್ಬುರ್ಗಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಆತನ ಪತ್ನಿ ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಸಂಘಟನೆಗಳು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದವು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘ ಟನೆಗಳ ಕಾರ್ಯಕರ್ತರು ಲವ್ ಜಿಹಾದ್ ನಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸ ಬೇಕೆಂದು ಪ್ರತಿಭಟನಾಕಾರರು…

ಮೇಕೇರಿ ಬಳಿ ಕಾಡಾನೆಗಳ ಆಟಾಟೋಪ
ಕೊಡಗು

ಮೇಕೇರಿ ಬಳಿ ಕಾಡಾನೆಗಳ ಆಟಾಟೋಪ

July 3, 2018

ಮಡಿಕೇರಿ: ನಗರಕ್ಕೆ ಹೊಂದಿಕೊಂಡಿರುವ ಮೇಕೇರಿ ವ್ಯಾಪ್ತಿಯಲ್ಲಿ 2 ಕಾಡಾನೆಗಳು ಕಾಫಿ ತೋಟಕ್ಕೆ ದಾಳಿ ಮಾಡಿದೆ. ಮೇಕೇರಿ ಪೈಸಾರಿಯಿಂದ ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿ ಭಾನುವಾರ ರಾತ್ರಿ ವೇಳೆಯಲ್ಲಿ ಆಗಮಿಸಿದ ಕಾಡಾನೆಗಳು ಎದುರಿನಿಂದ ಬಂದ ಆಟೋ ರಿಕ್ಷಾವನ್ನು ಕಂಡು ಪಕ್ಷದಲ್ಲಿದ್ದ ಕಾಫಿ ತೋಟದೊಳಗೆ ಸೇರಿಕೊಂಡಿದೆ. ಮಂಗಳಾದೇವಿ ನಗರದ ಕಡೆಯ ಅರಣ್ಯದಿಂದ ಆಗಮಿಸಿದ 2 ಕಾಡಾನೆಗಳನ್ನು ಮರಳಿ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಯತ್ನ ನಡೆಸಿದರಾದರೂ ಫಲ ಸಿಗಲಿಲ್ಲ. ಕಾಫಿ ತೋಟದ ಒಳಗೆ ಹಲಸಿನ ಹಣ್ಣು, ಬಿದಿರು ಯಥೇಚ್ಛವಾಗಿರುವುದ ರಿಂದ ಕಾಡಾನೆಗಳು ಮರಳಿ…

ಚಿಕ್ಲಿಹೊಳೆ ಬಳಿ ಹುಲಿ ದಾಳಿಗೆ ಹಸು ಬಲಿ
ಕೊಡಗು

ಚಿಕ್ಲಿಹೊಳೆ ಬಳಿ ಹುಲಿ ದಾಳಿಗೆ ಹಸು ಬಲಿ

July 3, 2018

ಹುಲಿರಾಯನ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಕುಶಾಲನಗರ:  ಸಮೀಪದ ನಂಜರಾಯಪಟ್ಟಣ ಗ್ರಾ.ಪಂ.ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಚಿಕ್ಲಿಹೊಳೆ ಅರಣ್ಯದಂಚಿನಲ್ಲಿ ಹುಲಿಯೊಂದು ದಾಳಿ ಮಾಡಿ ಹಸುವನ್ನು ಕೊಂಡು ಹಾಕಿರುವ ಘಟನೆ ನಡೆದಿದೆ. ತಳೂರು ಗ್ರಾಮದ ರೈತ ನಾಗರಾಜು ಎಂಬುವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದ್ದು, ಇದರಿಂದ ರೈತನ ಕುಟುಂಬಕ್ಕೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ. ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಈಚೆಗೆ ಹುಲಿ ಕಾಟ ತೀವ್ರಗೊಂಡಿದ್ದು, ಮೊನ್ನೆ ಹಗಲಿನಲ್ಲಿಯೇ ಚಿಕ್ಲಿಹೊಳೆ ಕೆಳಭಾಗದ ಅರಣ್ಯದಂಚಿನಲ್ಲಿ ಹುಲ್ಲು ಮೇಯುತ್ತಿದ್ದ ಹಸುವಿನ…

ಕೊಡಗಿನ ಯುವ ಜನತೆಗೆ ವೈದ್ಯಕೀಯ ಶಿಕ್ಷಣ ಪಡೆಯಲು ಸಲಹೆ
ಕೊಡಗು

ಕೊಡಗಿನ ಯುವ ಜನತೆಗೆ ವೈದ್ಯಕೀಯ ಶಿಕ್ಷಣ ಪಡೆಯಲು ಸಲಹೆ

July 3, 2018

ಮಡಿಕೇರಿ:  ಕೊಡಗಿನ ಯುವ ಪೀಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಿ ವಹಿಸುವಂತೆ ಇಲ್ಲಿನ ಸರ್ಕಾರಿ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸಲಹೆ ಮಾಡಿದೆ. ಮಡಿಕೇರಿಯ ಹೊರ ವಲಯದಲ್ಲಿ ರುವ ವಿಶಾಲ ಬೆಟ್ಟ ಶ್ರೇಣಿಯ ನಡುವೆ ಕರ್ಣಂಗೇರಿ ಗ್ರಾಮದ ಪ್ರಕೃತಿ ರಮಣೀಯ ಸೊಬಗಿನ ಪ್ರದೇಶದಲ್ಲಿ ನಾಲ್ಕು ವರ್ಷದ ಹಿಂದೆ ನಿರ್ಮಾಣಗೊಂಡಿರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯು ತನ್ನ ಎರಡು ಶೈಕ್ಷಣಿಕ ವರ್ಷಗಳನ್ನು ಪೂರೈಸಿರುವ ಸಂದರ್ಭ ದಲ್ಲಿ ಈ ಸಲಹೆ ಮಾಡಿದೆ. ಕರ್ಣಂಗೇರಿ ಗ್ರಾಮದ ಈ…

ಕಾನೂನು ಪಾಲನೆಯಿಂದ ಅಪರಾಧ ಕ್ಷೀಣ
ಕೊಡಗು

ಕಾನೂನು ಪಾಲನೆಯಿಂದ ಅಪರಾಧ ಕ್ಷೀಣ

July 2, 2018

ವಿರಾಜಪೇಟೆ:  ನಾಗರಿಕ ಸಮಾಜ ದಲ್ಲಿ ಕಾನೂನಿನ ಅರಿವು ಅಗತ್ಯ. ಕಾನೂ ನನ್ನು ಪಾಲಿಸಿದಾಗ ಪ್ರಕರಣಗಳು ಕಡಿಮೆ ಯಾಗುತ್ತವೆ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಪೊಲೀಸ್ ಇಲಾಖೆ, ಲಯನ್ಸ್ ಕ್ಲಬ್ ವಿರಾಜಪೇಟೆ ಹಾಗೂ ಪಟ್ಟಣ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪುರಭವನದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಮಾ ಅವರು, ಮಗು ಹುಟ್ಟಿದ ದಿನಾಂಕ ದಿಂದ ಮನುಷ್ಯನ ಕೊನೆಯವರೆಗೂ…

ಹಾಳಾದ ಪೇಡ ಮಾರಾಟ: ದೂರು
ಕೊಡಗು

ಹಾಳಾದ ಪೇಡ ಮಾರಾಟ: ದೂರು

July 2, 2018

ಮಡಿಕೇರಿ:  ಗ್ರಾಹಕರೊಬ್ಬರು ನಗರದಲ್ಲಿರುವ ನಂದಿನಿ ಹಾಲಿನ ಉತ್ಪನ್ನ ಮತ್ತು ಮಾರಾಟ ಕೇಂದ್ರದ ವಿರುದ್ಧ ಹಾಳಾದ ಪೇಡಾ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ನಂದಿನಿ ಹಾಲಿನ ಉತ್ಪನ್ನ ಮತ್ತು ಮಾರಾಟ ಕೇಂದ್ರದಿಂದ ಪಾಲೂರು ಗ್ರಾಮದ ಸೂದನ ಎಸ್. ಈರಪ್ಪ ಅವರ ಪುತ್ರಿ ಶುಕ್ರವಾರ ನೂರು ಗ್ರಾಂ. ತೂಕದ ನಂದಿನಿ ಪೇಡಾವನ್ನು ಖರೀದಿಸಿದ್ದು, ಮನೆಗೆ ತಂದು ತಿನ್ನಲು ತೆರೆದಾಗ ಪೇಡಾ…

ಡಾ.ಅಂಬೇಡ್ಕರ್ ವಿಚಾರಧಾರೆ ಅನುಸರಿಸಲು ಕರೆ
ಕೊಡಗು

ಡಾ.ಅಂಬೇಡ್ಕರ್ ವಿಚಾರಧಾರೆ ಅನುಸರಿಸಲು ಕರೆ

July 2, 2018

ಮಡಿಕೇರಿ:  ಸಂವಿಧಾನವನ್ನು ರಚಿಸುವ ಮೂಲಕ ಸಮಾನತೆಯ ಆದರ್ಶಗಳನ್ನು ಸಾರಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅನುಸರಿಸುವ ಮನೋಸ್ಥಿತಿಯನ್ನು ಪ್ರತಿ ಯೊಬ್ಬರು ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಕರೆ ನೀಡಿದ್ದಾರೆ. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆ, ವೃದ್ಧಾಶ್ರಮದ ಬಂಧು ಗಳಿಗೆ ವಸ್ತ್ರ ವಿತರಣೆ ಹಾಗೂ ದಲಿತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಮಡಿ ಕೇರಿಯಲ್ಲಿ ನಡೆಯಿತು. ಡಾ.ಅಂಬೇಡ್ಕರ್ ಅವರು ಸಂವಿಧಾನ…

ಜಿಎಸ್‍ಟಿಯಿಂದ ರಾಷ್ಟ್ರದ ಆರ್ಥಿಕ ಸ್ಥಿತಿ ಸುಧಾರಣೆ
ಕೊಡಗು

ಜಿಎಸ್‍ಟಿಯಿಂದ ರಾಷ್ಟ್ರದ ಆರ್ಥಿಕ ಸ್ಥಿತಿ ಸುಧಾರಣೆ

July 2, 2018

ಮಡಿಕೇರಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದು ಒಂದು ವರ್ಷ ಆಗಿದ್ದು, ಈ ಒಂದು ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಬದಲಾವಣೆ ತಂದಿದೆ ಎಂದು ಸರಕು ಮತ್ತು ಸೇವಾ ತೆರಿಗೆ ವಿಭಾಗದ ಜಂಟಿ ಆಯುಕ್ತ ರವಿಕಿರಣ ಅವರು ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಬಂಧಿಸಿದಂತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರಕು ಮತ್ತು ಸೇವೆ ತೆರಿಗೆ ಎಂಬುದು ವಾಣಿಜ್ಯೋದ್ಯಮಿ ಗಳು, ವ್ಯಾಪಾರಸ್ಥರು ಇತರರ ಮೇಲೆ ನಂಬಿಕೆ…

ಅರಣ್ಯ ರಕ್ಷಕರ ತರಬೇತಿ ಶಿಬಿರದ ಸಮಾರೋಪ: ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲದಂತೆ ಎಚ್ಚರಿಕೆ ವಹಿಸಿ
ಕೊಡಗು

ಅರಣ್ಯ ರಕ್ಷಕರ ತರಬೇತಿ ಶಿಬಿರದ ಸಮಾರೋಪ: ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲದಂತೆ ಎಚ್ಚರಿಕೆ ವಹಿಸಿ

July 2, 2018

ಕುಶಾಲನಗರ: ದೇಶದ ಸಂಪತ್ತಾಗಿರುವ ಅರಣ್ಯ ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಬೆಂಕಿ ತಗು ಲದಂತೆ ಅರಣ್ಯ ರಕ್ಷಕರು ಎಚ್ಚರಿಕೆ ವಹಿಸ ಬೇಕಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಮಂಜು ನಾಥ್ ಹೇಳಿದರು. ಇಲ್ಲಿನ ಗಂಧದಕೋಟಿಯಲ್ಲಿರುವ ಅರಣ್ಯ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ 2017-18ನೇ ಸಾಲಿನ 88ನೇ ತಂಡದ ಅರಣ್ಯ ರಕ್ಷಕರ ಬುನಾದಿ ತರ ಬೇತಿ ಶಿಬಿರದ ಸಾಮರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಉಜ್ವಲ ಯೋಜನೆಯಡಿ ಎಲ್ಲ ರಿಗೂ ಉಚಿತ ಗ್ಯಾಸ್ ಸಿಲೆಂಡರ್…

ಚಿಕ್ಲಿಹೊಳೆ ಜಲಾಶಯ ಭರ್ತಿ
ಕೊಡಗು

ಚಿಕ್ಲಿಹೊಳೆ ಜಲಾಶಯ ಭರ್ತಿ

July 2, 2018

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮಕ್ಕೆ ಒಳಪಡುವ ಚಿಕ್ಲಿಹೊಳೆ ಜಲಾಶಯವು ಭರ್ತಿಯಾಗಿದ್ದು, ಜಲಾಶಯದ ಮೇಲಿಂದ ಹೊರಸೂಸುವ ಹೆಚ್ಚುವರಿ ನೀರನ್ನು ನೋಡಲು ಮನಮೋಹಕವಾಗಿದೆ. ಈ ದೃಶ್ಯವನ್ನು ನೋಡಲು ಇದೀಗ ಪ್ರವಾಸಿಗರ ದಂಡು ಚಿಕ್ಲಿಹೊಳೆ ಜಲಾಶಯದತ್ತಾ ಪ್ರಯಾಣಿಸುತ್ತಿದೆ. ಇತ್ತ ಜಲಾಶಯ ಭರ್ತಿಯಾದರೆ ಅತ್ತ ಈ ವ್ಯಾಪ್ತಿಯ ರೈತರು ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಜಲಾಶಯ ಭರ್ತಿಯಾದರೂ ನಾಲೆಯೊಳ ಗಿರುವ ಕಾಡನ್ನು ಕಡಿಯದಿರುವುದಕ್ಕೆ ಅಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷವು ಇದೇ ರೀತಿ ಮಾಡಿ ಬೆಸಿಗೆಯಲ್ಲಿ ಕಾಮಗಾರಿ ಮಾಡುವುದು ಬಿಟ್ಟು…

1 162 163 164 165 166 187
Translate »