ವರುಣನ ಆರ್ಭಟಕ್ಕೆ ತತ್ತರಿಸಿದ ಕೊಡಗು
ಕೊಡಗು

ವರುಣನ ಆರ್ಭಟಕ್ಕೆ ತತ್ತರಿಸಿದ ಕೊಡಗು

July 10, 2018

ಮಡಿಕೇರಿ: ಪುನರ್ವಸು ಮಳೆಯ ಆರ್ಭಟಕ್ಕೆ ಮಡಿಕೇರಿ ನಗರ ತತ್ತರಿಸಿದ್ದು, ನಗರ ವ್ಯಾಪ್ತಿಯಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ.

ಮಡಿಕೇರಿಯ ತ್ಯಾಗರಾಜ ಕಾಲೋನಿ, ಗದ್ದುಗೆ ಹಿಂಭಾಗ ಸೋಮವಾರ ಬೆಳಗಿನ ಜಾವ ಸುಮಾರು 1.30 ರ ಸಮಯದಲ್ಲಿ ಮನೆಗಳ ಗೋಡೆ ಕುಸಿದು ಬಿದ್ದಿದ್ದು, ಮನೆಯೊಳಗಿದ್ದವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗದ್ದುಗೆಯ ನಿವಾಸಿಗಳಾದ ಸುನೀತಾ, ಅಬೂಬ ಕ್ಕರ್ ಎಂಬುವರಿಗೆ ಸೇರಿದ ಮನೆಗಳು ಕುಸಿದು ಬಿದ್ದಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಹೊಲಿಗೆ ಯಂತ್ರಗಳನ್ನೇ ನಂಬಿಕೊಂಡು ಬದುಕು ತ್ತಿದ್ದ ಸುನೀತಾ ಕುಟುಂಬ ಇದೀಗ ದೈನಂದಿನ ಬದುಕಿಗೆ ಪರದಾಡುವಂತಾಗಿದೆ. ಎರಡು ಹೊಲಿಗೆ ಯಂತ್ರಗಳು ಮಣ್ಣಿ ನಡಿಯಲ್ಲಿ ಸಿಲುಕಿ ಸಂಪೂರ್ಣ ಜಖಂಗೊಂಡಿದ್ದು, ದಿನಬಳಕೆ ವಸ್ತುಗಳು ಮಣ್ಣು ಪಾಲಾಗಿವೆ. ತ್ಯಾಗರಾಜ ಕಾಲೋನಿಯ ನಿವಾಸಿ ಅಬೂಬಕ್ಕರ್ ಎಂಬುವರ ಮನೆ ಸಂಪೂರ್ಣ ಕುಸಿದು ಬಿದ್ದಿದ್ದು, ದಿನಸಿ ಸಾಮಾಗ್ರಿ ಸಹಿತ ಗೃಹೊಪಯೋಗಿ ವಸ್ತುಗಳಿಗೆ ಹಾನಿ ಸಂಭವಿಸಿದೆ.

ಕೆಲವು ಮನೆಗಳ ಹಿಂಬದಿ ಭೂಕುಸಿತಗೊಂಡಿದ್ದು, ಗೋಡೆಗಳಿಗೆ ಹಾನಿ ಸಂಭವಿಸಿದೆ. ಮಡಿಕೇರಿ ನಗರ ಸಭಾ ಸದಸ್ಯರು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮನೆ ಹಾನಿಯ ಪರಿಶೀಲನೆ ನಡೆಸಿದರು.

2_Page

ಧಾರಾಕಾರ ಮಳೆ: ಜಿಲ್ಲೆಯಲ್ಲಿ ಕಳೆದ 4 ದಿನ ಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಜನತೆ ಮಳೆಯಿಂದ ತತ್ತರಿಸಿದ್ದಾರೆ. ಅದರೊಂದಿಗೆ ಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಭಾಗ ಮಂಡಲ- ನಾಪೋಕ್ಲು ರಸ್ತೆಯ ಮೇಲೆ 2 ಅಡಿ ನೀರು ಹರಿಯುತ್ತಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶ ಗದ್ದೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆ ಸುರಿಯುತ್ತಿದೆ.

ಜಲಾಶಯಕ್ಕೆ 11,675 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದ್ದು, 8,584 ಕ್ಯೂಸೆಕ್ ನದಿಗೆ ಹಾಗೂ 350 ಕ್ಯೂಸೆಕ್ ನೀರನ್ನು ನಾಲೆಗೆ ಹರಿಸಲಾಗುತ್ತಿದೆ. ಜಲಾಶಯದಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸುತ್ತಿರುವುದರಿಂದ ನದಿ ಪಾತ್ರದ ನಿವಾಸಿಗಳು ಎಚ್ಚರ ವಹಿಸುವಂತೆ ಹಾರಂಗಿ ಜಲಾಶಯದ ಅಧಿಕಾರಿಗಳು ಸೂಚಿಸಿದಾರೆ.

2_Page

ಸೋಮವಾರಪೇಟೆ ವರದಿ: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಅಲ್ಲಲ್ಲಿ ಹಾನಿ ಸಂಭವಿಸಿದೆ.

ಚೌಡ್ಲು ಗ್ರಾಪಂ ವ್ಯಾಪ್ತಿಯ ಅಲೇಕಟ್ಟೆ ರಸ್ತೆಯಿಂದ ಗಾಂಧಿ ನಗರಕ್ಕೆ ತೆರಳುವ ರಸ್ತೆಯಲ್ಲಿ ಅಬ್ದುಲ್ ಅಜೀಜ್ ಎಂಬುವರ ಮನೆಯ ಸಮೀಪ ಬರೆ ಕುಸಿಯುತ್ತಿದ್ದು, ರಸ್ತೆಯೇ ಇಲ್ಲದಂತಾಗುವ ಆತಂಕ ಎದುರಾಗಿದೆ. ಈ ರಸ್ತೆ ಜಿಲ್ಲಾ ಪಂಚಾ ಯಿತಿ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ್ದು, ಸ್ಥಳೀಯರು ಈ ಹಿಂದೆಯೇ ಅನೇಕ ಬಾರಿ ಇಲಾಖೆಗೆ ತಿಳಿಸಿ ರಸ್ತೆಗೆ ತಡೆಗೋಡೆ ಕಟ್ಟುವಂತೆ ಆಗ್ರಹಿಸಿದ್ದರು. ಆದರೆ ಇದುವರೆಗೆ ಅನುದಾನ ಕಲ್ಪಿಸಿಲ್ಲ ಎಂಬ ದೂರು ಕೇಳಿಬರುತ್ತಿದೆ. ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು, ಶಾಲಾ ವಾಹನ ಗಳು ಸಂಚರಿಸುತ್ತವೆ. ಮುಂದೆ ಅನಾಹುತವಾದರೆ ಜಿಪಂ ಇಂಜಿನಿಯರಿಂಗ್ ವಿಭಾಗ ನೇರ ಹೊಣೆ ಹೊರಬೇಕು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಶಾಂತಳ್ಳಿ ಹೋಬಳಿಯ ಬಹುತೇಕ ಕಡೆ ಮಳೆ ಸುರಿಯುತ್ತಿದ್ದು ನದಿ ತೊರೆಗಳು ತುಂಬಿ ಹರಿಯುತ್ತಿವೆ. ಗದ್ದೆ ನಾಟಿಗೆ ಹದ ಮಾಡುತ್ತಿದ್ದ ಸಂದರ್ಭ ಗದ್ದೆಯಲ್ಲಿ ನೀರು ಉಕ್ಕಿದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ.

ಭೂಕಂಪನ: ಪಟ್ಟಣ ಮತ್ತು ಕೆಲ ಗ್ರಾಮೀಣ ಭಾಗದಲ್ಲಿ ಸೋಮವಾರ ಮಧ್ಯಾಹ್ನ 12.52ರ ಸುಮಾರಿಗೆ ಭೂಮಿ ಕಂಪಿಸಿದ ಕುರಿತು ಅನೇಕರು ಮಾಹಿತಿ ತಿಳಿಸಿದ್ದಾರೆ. ಪಟ್ಟಣ ಸೇರಿದಂತೆ ಶಾಂತಳ್ಳಿ, ಸೂರ್ಲಬ್ಬಿ, ಮಂಕ್ಯಾ, ಕಿಕ್ಕರಳ್ಳಿ, ಹರಗ, ಬೆಟ್ಟದಳ್ಳಿ, ಹಾನ ಗಲ್ಲು, ಬೀಟಿಕಟ್ಟೆ, ಮಸಗೋಡು ಗ್ರಾಮಗಳಿಂದ ಜನರು ಭೂಮಿ ಕಂಪಿಸಿದ ಬಗ್ಗೆ ಹೇಳಿದ್ದಾರೆ.

Translate »